ನೇತ್ರಚಿಕಿತ್ಸಾ ಶಿಬಿರದಲ್ಲೇ ಆರಿತು ಬೆಳಕು!
ಕಣ್ಣು ಶಸ್ತ್ರಚಿಕಿತ್ಸೆಗೊಳಪಟ್ಟು ಚಿಕಿತ್ಸೆ ನಂತರ 5 ಮಂದಿ ದೃಷ್ಟಿ...

ಪಠಾಣ್‌ಕೋಟ್: ಕಣ್ಣು ಶಸ್ತ್ರಚಿಕಿತ್ಸೆಗೊಳಪಟ್ಟು ಚಿಕಿತ್ಸೆ ನಂತರ 5 ಮಂದಿ ದೃಷ್ಟಿ ಕಳೆದುಕೊಂಡ ದಾರುಣ ಘಟನೆ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನಡೆದಿದೆ.
ಪಠಾಣ್‌ಕೋಟ್‌ನ ಖಾಸಗೀ ಆಸ್ಪತ್ರೆಯೊಂದರಲ್ಲಿ ಸ್ಥಳೀಯ ಸಂಘಟನೆಗಳು ಕಣ್ಣು ಶಸ್ತ್ರಕ್ರಿಯಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಹಿಮಾಚಲ ಪ್ರದೇಶದ ಕಂಗ್ರಾ ಕಣಿವೆಯ ಸುಮಾರು 60ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ 5 ಮಂದಿ ಇದೀಗ ದೃಷ್ಟಿ ಕಳೆದುಕೊಂಡಿದ್ದು, ಇದಕ್ಕೆ ಶಿಬಿರದಲ್ಲಿ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯೇ ಕಾರಣ ಎಂದು ಆರೋಪಸಿದ್ದರು.
ಈ ಆರೋಪವನ್ನು ಪರಿಗಣಿಸಿದ ಹಿಮಾಚಲ ಪ್ರದೇಶದ ಸರ್ಕಾರ, ಪ್ರಕರಣದ ಕುರಿತು ಡಾ.ಎಸ್.ಕೆ.ಶರ್ಮಾ ನೇತೃತ್ವದ ತನಿಖಾ ಆಯೋಗದ ತಂಡವೊಂದನ್ನು ರಚಿಸಿತು. ಪ್ರಕರಣದ ಕುರಿತು ತನಿಖೆ ಕೈಗೊಂಡ ಆಯೋಗ ಶಿಬಿರದಲ್ಲಿ ಭಾಗಿಯಾಗಿರುವ 60 ಮಂದಿಯಲ್ಲಿ ಕೇವಲ 5 ಮಂದಿಯಷ್ಟೇ ಆರೋಪ ಮಾಡುತ್ತಿದ್ದು, ಈಗಾಗಲೇ ಸಮಸ್ಯೆಗೀಡಾದ ಐವರು ರೋಗಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ಶಸ್ತ್ರಕ್ರಿಯೆ ನಡೆಸಿದ ಶಿಬಿರವನ್ನು ಪರಿಶೀಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ವೇಳೆ ಯಾವುದೇ ರೀತಿ ಅವಘಡಗಳು ನಡೆದಿಲ್ಲ ಎಂದು ತಿಳಿದು ಬಂದಿದೆ. ರೋಗಿಗಳ ಸಮಸ್ಯೆ ಕುರಿತು ಮತ್ತಷ್ಟು ತನಿಖೆಯಾಗಬೇಕಿದೆ ಎಂದು ಶರ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


