ದೇಶ

ದೇವಯಾನಿ ಖೋಬ್ರಾಗಡೆ ಕರ್ತವ್ಯ ಮುಕ್ತಗೊಳಿಸಿದ ಕೇಂದ್ರ

ವೀಸಾ ವಂಚನೆ ಪ್ರಕರಣ ಸಂಬಂಧ ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ..

ದೇವಯಾನಿ ಖೋಬ್ರಾಗಡೆ ಕರ್ತವ್ಯ ಮುಕ್ತಗೊಳಿಸಿದ ಕೇಂದ್ರ
ದೇವಯಾನಿ ಖೋಬ್ರಾಗಡೆ
Published On :

ನವದೆಹಲಿ: ವೀಸಾ ವಂಚನೆ ಪ್ರಕರಣ ಸಂಬಂಧ ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಶನಿವಾರ ಕೇಂದ್ರ ಸರ್ಕಾರ ಕರ್ತವ್ಯ ಮುಕ್ತಗೊಳಿಸಿದೆ.

ದೇವಯಾನಿ ಅವರು ಸರ್ಕಾರದ ಅನುಮತಿ ಪಡೆಯದೇ ಪ್ರಕರಣದ ಕುರಿತು ಟಿವಿ ಮಾಧ್ಯವೊಂದಕ್ಕೆ ಸಂದರ್ಶನ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಸದ್ಯ ಅವರನ್ನು ಸೇವಾ ಮುಕ್ತಗೊಳಿಸಿರುವ ಸರ್ಕಾರ, ಅವರನ್ನು 'ಕಡ್ಡಾಯ ನಿರೀಕ್ಷೆ'ಗೆ ಸ್ಥಳಾಂತರಿಸಲಾಗಿದೆ. ದೇವಯಾನಿ ಅವರು ಅಭಿವೃದ್ಧಿ ಸಹಯೋಗ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

1999ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಅಮೆರಿಕ ಅಧಿಕಾರಿಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ವೀಸಾ ವಂಚನೆ ಪ್ರಕರಣ ಸಂಬಂಧ ಬಂಧಿಸಿ, ಕ್ಯಾವಿಟಿ ಸರ್ಚ್ ನಡೆಸಿದ್ದರು. ಇದರಿಂದ ಅಮೆರಿಕ ಮತ್ತು ಭಾರತದ ನಡುವಿನ ಹಲವು ವರ್ಷಗಳ ಉತ್ತಮ ಬಾಂಧವ್ಯಕ್ಕೆ ಧಕ್ಕೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.