ವಾದ್ರಾ ಭೂಕಬಳಿಕೆ ಪ್ರಕರಣ: ಪ್ರಮುಖ ದಾಖಲೆಗಳೇ ನಾಪತ್ತೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್...

ಛತ್ತೀಸ್‌ಗಡ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ದದ ಭೂಕಬಳಿಕೆ ಪ್ರಕರಣದ ಎರಡು ಪ್ರಮುಖ ದಾಖಲೆಗಳು ನಾಪತ್ತೆಯಾಗಿದೆ ಎಂದು ಹರ್ಯಾಣ ಸರ್ಕಾರ ಹೇಳಿದೆ.
ಗುರಗಾಂವ್‌ನ ಶಿಖೋಪುರ ಬಳಿಯ 3.5 ಎಕರೆ ಸರ್ಕಾರಿ ಭೂಮಿಯನ್ನು ಪಡೆಯಲು ನಕಲಿ ದಾಖಲೆ ಸೃಷ್ಠಿಸಿದ್ದ ರಾಬರ್ಟ್ ವಾದ್ರಾ ಅದನ್ನು 58 ಕೋಟಿ ರೂಗಳಿಗೆ ಡಿಎಲ್‌ಎಫ್ ಯೂನಿವರ್ಸಲ್‌ಗೆ ಮಾರಾಟ ಮಾಡಿದ್ದರು ಎಂದು ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು ರಾಬರ್ಟ್ ವಾದ್ರಾ ವಿರುದ್ಧ ಆರೋಪ ಮಾಡಿದ್ದರು.
ಡಿಟಿಸಿಪಿ (Directorate Of Town & Country Planning) ನಾನಾ ರೀತಿಯ ಕಾಲೋನಿಗಳಿಗೆ ಪರವಾನಗಿ ನೀಡುತ್ತಿತ್ತು. ಕಳೆದ 8 ವರ್ಷಗಳಲ್ಲಿ 21, 366 ಎಕರೆಗೆ ಪರವಾನಗಿ ನೀಡಿದೆ. ಈ ವ್ಯವಹಾರದಲ್ಲಿ ಸುಮಾರು 20 ಸಾವಿರ ಕೋಟಿ ಅಕ್ರಮ ನಡೆದಿದ್ದು, ಈ ಅಕ್ರಮದಲ್ಲಿ ವಾದ್ರಾ 15.78 ಕೋಟಿ ಲಾಭ ಪಡೆದಿದ್ದಾರೆ. ಹಗರಣದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರುಪಾಯಿ ನಷ್ಟವಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಬೇಕೆಂದು ಅಶೋಕ್ ಖೇಮ್ಕಾ ಆಗ್ರಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಸರ್ಕಾರ ರಾಬರ್ಟ್ ವಾದ್ರಾಗೆ ಕ್ಲೀನ್ ಚೀಟ್ ನೀಡಿತ್ತು. ಈ ಸಂಬಂಧ ಮಾಜಿ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಆರ್‌ಟಿಐ ಅಡಿ ವಾದ್ರಾ ವಿರುದ್ಧದ ಭೂ ಮಾಫಿಯಾ ಪ್ರಕರಣದ ತನಿಖಾ ವರದಿಯನ್ನು ನೀಡುವಂತೆ ಕೇಳಿದ್ದರು.
ತನಿಖೆಯ ವರದಿ ಕುರಿತಂತೆ ಹರ್ಯಾಣ ಸರ್ಕಾರದ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡ ಅವರು 3 ಸದಸ್ಯರ ಸಮಿತಿಯೊಂದನ್ನು ನೇಮಿಸಿದ್ದರು. ಈ ಸಮಿತಿ ರಚಿಸಿದ ವರದಿಯ ಕೆಲವು ಪ್ರಮುಖ ದಾಖಲೆಗಳು ನಾಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


