150 ಮಹಿಳೆಯರ ಕೊಂದ ಇಸಿಸ್
ಇರಾಕ್ ನಲ್ಲಿ ಇಸಿಸ್ ತನ್ನ ಕ್ರೌರ್ಯದ ಪರಮಾವಧಿಯನ್ನು ಮುಂದುವರಿಸಿದೆ...

ಬಾಗ್ದಾದ್: ಇರಾಕ್ ನಲ್ಲಿ ಇಸಿಸ್ ತನ್ನ ಕ್ರೌರ್ಯದ ಪರಮಾವಧಿಯನ್ನು ಮುಂದುವರಿಸಿದೆ. ಉಗ್ರರನ್ನು ವಿವಾಹವಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ 150 ಕ್ಕೂ ಹೆಚ್ಚು ಮಹಿಳೆಯರನ್ನು ಕೊಂದಿದೆ.
ಇರಾಕ್ ನ ಪಶ್ಚಿಮ ಭಾಗದಲ್ಲಿರುವ ಅಲ್-ಅನ್ಬರ್ ಎಂಬಲ್ಲಿ ಈ ಕೃತ್ಯ ಎಸೆಗಿದ್ದು, ಗರ್ಭಿಣಿಯರನ್ನೂ ಹತ್ಯೆಗೈದಿದ್ದಾರೆ.
ನಂತರ ಶವಗಳನ್ನು ಫಲುಜಾದಲ್ಲಿ ಸಾಮೂಹಿಕ ಸಮಾಧಿ ಮಾಡಲಾಗಿದೆ. ಅಲ್-ಅನ್ಬರ್ ಪ್ರದೇಶಕ್ಕೆ ಬಂದ ಇಸಿಸ್ ಉಗ್ರರು, ಜಿಹಾದ್ ಗೆ ಹೋರಾಡುತ್ತಿರುವ ಉಗ್ರರನ್ನು ಮದುವೆ ಮಾಡಿಕೊಳ್ಳುವಂತೆ ಅಲ್ಲಿನ ಮಹಿಳೆಯರನ್ನು ಒತ್ತಾಯಿಸಿದ್ದಾರೆ. ಆದರೆ, ಇದಕ್ಕೊಪದ ಅವರಿಗೆ ಹಿಂಸೆ ನೀಡಿ, ಹತ್ಯೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


