ಚೀನಾಗೆ ಹೆದರಿದ ಪೋಪ್
ಚೀನಾದ ಅಟಾಟೋಪಕ್ಕೆ ಪೋಪ್ ಫ್ರಾನ್ಸಿಸ್ ಕೂಡಾ ಹೆದರಿದ್ದಾರೆ. ಚೀನಾ ಎಲ್ಲಿ ಕೆಂಗಣ್ಣು ಬೀರುವುದೋ ಎಂಬ ಭಯದಿಂದ...

ಲಂಡನ್: ಚೀನಾದ ಅಟಾಟೋಪಕ್ಕೆ ಪೋಪ್ ಫ್ರಾನ್ಸಿಸ್ ಕೂಡಾ ಹೆದರಿದ್ದಾರೆ. ಚೀನಾ ಎಲ್ಲಿ ಕೆಂಗಣ್ಣು ಬೀರುವುದೋ ಎಂಬ ಭಯದಿಂದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಪೋಪ್ ನಿರಾಕರಿಸಿದ್ದಾರೆ.
ಚೀನಾ ಎಲ್ಲಿ ಕೆಂಗಣ್ಣು ಬೀರುವುದೋ ಎಂಬ ಭಯದಿಂದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಪೋಪ್ ನಿರಾಕರಿಸಿದ್ದಾರೆ.
ರೋಮ್‌ನಲ್ಲಿ ನೋಬೆಲ್ ಶಾಂತಿ ಪುರಸ್ಕೃತರ ಕಾರ್ಯಕ್ರಮ ಆರಂಭವಾಗಿದೆ. ಆದರೆ ಇಲ್ಲಿ 1989ರ ನೊಬೆಲ್ ಪುರಸ್ಕೃತ ದಲೈಲಾಮಾ ಅವರನ್ನು ಭೇಟಿಯಾಗಲು ಆಗುವುದಿಲ್ಲ ಎಂದು ಪೋಪ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ವ್ಯಾಟಿಕನ್ ವಕ್ತಾರರು ಪೋಪ್ ಫ್ರಾನ್ಸಿಸ್ ಅವರಿಗೆ ದಲೈಲಾಮಾ ಬಗ್ಗೆ ಭಾರಿ ಗೌರವವಿದೆ. ಆದರೆ ಪೋಪ್ ಈ ಬಾರಿ ಯಾವೊಬ್ಬ ನೊಬೆಲ್ ಪುರಸ್ಕ್ಛತರನ್ನೂ ಭೇಟಿಯಾಗುತ್ತಿಲ್ಲ. ಬದಲಿಗೆ ಸಮಾವೇಳಕ್ಕೆ ವಿಡಿಯೋ ಸಂದೇಶವನ್ನು ಕಳುಹಿಸುತ್ತಾರೆ ಎಂದಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಇದೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಅಲ್ಲಿನ ಸರ್ಕಾರವೂ ಚೀನಾಗೆ ಹೆದರಿ ದಲೈಲಾಮಾರಿಗೆ ವೀಸಾ ನಿರಾಕರಿಸಿತ್ತು. ಇದರಿಂದ ಬೇಸತ್ತ ನೊಬೆಲ್ ಪುರಸ್ಕೃತರ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


