ದೇಶ

ದೆಹಲಿಯಲ್ಲಿ ಕಣ್ಗಾವಲಿಗೆ ಡ್ರೋಣ್ ಬಳಕೆ

ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಘಳ ಹಿನ್ನೆಲೆಯಲ್ಲಿ ದೆಹಲಿ...

ದೆಹಲಿಯಲ್ಲಿ ಕಣ್ಗಾವಲಿಗೆ ಡ್ರೋಣ್ ಬಳಕೆ
ಡ್ರೋಣ್‌
Published On :

ನವದೆಹಲಿ: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಘಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನಗರದಲ್ಲಿನ್ನು ಕಣ್ಗಾವಲಿಗೆ ಡ್ರೋಣ್‌ಗಳನ್ನು ಬಳಸಲು ನಿರ್ಧರಿಸಿದ್ದಾರೆ.

ಅದರಂತೆ ರಾತ್ರಿ ವೇಳೆಯೂ ವಿಡಿಯೋ, ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯವಳ್ಳ ಡ್ರೋಣ್‌ಗಲು ಮುಂದಿನ ತಿಂಗಳಿಂದ ರಾಜಧಾನಿ ಮೇಲೆ ಕಣ್ಣಿಡಲಿದೆ.

ಹಣಕಾಸು ಕಂಪನಿಯೊಂದರ ಅಧಿಕಾರಿಯೊಬ್ಬರ ಮೇಲೆ ಯೂಬರ್ ಕ್ಯಾಬ್ ಚಾಲಕ ನಡೆಸಿದ ಅತ್ಯಾಚಾರ ಪ್ರಕರಣದ ಬಳಿಕ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಆತಂಕ ಮತ್ತಷ್ಟು ಹೆಚ್ಚಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳಿರುವ ಡ್ರೋಣ್‌ಗಳನ್ನು ಕಣ್ಗಾವಲಿಗಾಗಿ ಬಳಸಲಿದ್ದಾರೆ.

ಹಲವು ಹೆಣ್ಣುಮಕ್ಕಳಿಗೆ ಕಿರುಕುಳ

ಸದ್ಯ ಪೊಲೀಸರ ವಶದಲ್ಲಿರುವ ಯೂಬರ್ ಕ್ಯಾನ್‌ನ ಚಾಲಕ ಶಿವಕುಮಾರ್ ಹಿಂದೆ ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದ ಹಲವು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನುವ ವಿಚಾರ ಬಹಿರಂಗವಾಗಿದೆ. ಗುರ್‌ಗಾಂವ್ ಮಾಲ್‌ನಿಂದ ದೆಹಲಿ ಕಡೆಗೆ ಪ್ರಯಾಣಿಸುವ ಹೆಣ್ಣು ಮಕ್ಕಳನ್ನೇ ಗುರಿಯಾಗಿಟ್ಟುಕೊಂಡು ಈತ ಲೈಂಗಿಕ ಕಿರುಕುಳ ನೀಡುತ್ತಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.