ಶಂಕಿತ ಉಗ್ರರಿಗೆ ಸಿಐಎ ಚಿತ್ರಹಿಂಸೆ ನೀಡಿದ್ದು ನಿಜ
ನ್ಯೂಯಾರ್ಕ್‌ನ ಅವಳಿ ಕಟ್ಟಡ ಸ್ಫೋಟ (9/11) ಪ್ರಕರಣ ಸಂಬಂಧ ಬಂಧಿತರಾಗಿ ಶಂಕಿತ ಉಗ್ರರೊಂದಿಗೆ...

ವಾಷಿಂಗ್ಟನ್: ನ್ಯೂಯಾರ್ಕ್‌ನ ಅವಳಿ ಕಟ್ಟಡ ಸ್ಫೋಟ (9/11) ಪ್ರಕರಣ ಸಂಬಂಧ ಬಂಧಿತರಾಗಿ ಶಂಕಿತ ಉಗ್ರರೊಂದಿಗೆ ಅಮೆರಿಕದ ತನಿಖಾ ಸಂಸ್ಥೆ ಸಿಐಎ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿತ್ತು, ಅವರ ಬಾಯಿಬಿಡಿಸುವ ನೆಪದಲ್ಲಿ ಕಾನೂನಿನ ಮಿತಿಯನ್ನು ಮೀರಿ ಚಿತ್ರ ಹಿಂಸೆ ನೀಡಲಾಗಿತ್ತು, ಅಷ್ಟೇ ಅಲ್ಲ, ಶ್ವೇತ ಭವನ, ನ್ಯಾಯ ಇಲಾಖೆ, ಕಾಂಗ್ರೆಸ್ ಹಾಗೂ ಅಮೆರಿಕದ ಜನತೆಗೆ ತಮ್ಮ ತನಿಖಾ ವಿಧಾನದ ಬಗ್ಗೆ ಮಾಹಿತಿಯನ್ನೇ ನೀಡಿರಲಿಲ್ಲ.
2002ರಿಂದ 2007ರವರೆಗೆ ಶಂಕಿತರಿಗೆ ಸಿಐಎ ನೀಡಿದ ಚಿತ್ರ ಹಿಂಸೆಯಲ ಕುರಿತು ಸೆನೇಟ್ ಗುಪ್ತಚರ ಸಮಿತಿ ಸಿದ್ಧಪಡಿಸಿರುವ 500 ಪುಟಗಳ ವರದಿಯಲ್ಲಿ ಈ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ. 9/11 ರ ದಾಳಿ ನಡೆದ 13 ವರ್ಷಗಳ ಬಳಿಕ ಮಂಗಳವಾರ ವರದಿ ಸಲ್ಲಿಸಿರುವ ಸಮಿತಿಯು ಅಮೆರಿಕದ ತನಿಖಾ ಸಂಸ್ಥೆಯ ಮತ್ತೊಂದು ಮುಖವನ್ನು ಅನಾವರಣ ಮಾಡಿದೆ.
ಆಘಾತಕಾರಿ ತನಿಖಾ ವಿಧಾನ: 119 ಮಂದಿ ಶಂಕಿತ ಉಗ್ರರ ಮೇಲೆ ಕ್ರೂರವಾದ ತನಿಖಾ ತಂತ್ರವನ್ನು ಪ್ರಯೋಗಿಸುವ ಮೂಲಕ ಸಿಐಎ ತನ್ನ ಕಾನೂನಿನ ಮಿತಿಯನ್ನೂ ಉಲ್ಲಂಘಿಸಿದೆ. ಇಂತಹ ಅಮಾನವೀಯ ಹಿಂಸೆಯು ಅಮೆರಿಕಕ್ಕೆ ಕಪ್ಪುಚುಕ್ಕೆ ಎಂದು ಬಣ್ಣಿಸಿರುವ ಸಮಿತಿ, ನಾನು ನಡೆಸಿದ ತನಿಖೆಯ ಹಲವು ಆಘಾತಕಾರಿ ಅಂಶಗಳನ್ನು ಬಯಲಿಗೆಳೆದಿದೆ ಎಂದಿದಾದರೆ. ಗುದದೊಳಗಿನ ನೀರನ್ನು ಹೊರಗೆಳೆಯುವುದು, ಹೊಡೆಯುವುದು, ನೀರಿನೊಳಗಿಡುವುದು, ತಲೆಗಳನ್ನು ಗೋಡೆಗಳಿಗೆ ಬಡಿಯುವುದು, ಸಣ್ಣ ಪೆಟ್ಟಿಗೆಯೊಳಗೆ ಅವರನ್ನು ತುರುಕಿಡುವುದು, ದೀರ್ಘಕಾಲದ ವರೆಗೆ ಏಕಾಂಗಿಯಾಗಿ ಬಂಧಿಸಿಡುವುದು, ಕೊಲೆ ಬೆದರಿಕೆ ಸೇರಿ ಹಲವು ಬಗೆಯ ಚಿತ್ರ ಹಿಂಸೆಯನ್ನು ಉಗ್ರರಿಗೆ ನೀಡಲಾಗಿದೆ. ಇವೆಲ್ಲದರ ಪರಿಣಾಮ ಹಲವರು ಮಾನಸಿಕ ಆಘಾತಕ್ಕೊಳಗಾಗಿದ್ದಾರೆ ಎಂದೂ ವರದಿ ಹೇಳಿದೆ. ಮೂವರು ಶಂಕಿತ ಉಗ್ರರ ಕುಟುಂಬ ಸದಸ್ಯರಿಗೂ ಸಿಐಎ ಹಿಂಸೆ ನೀಡಿದೆ. ಸಿಐಎ ಅಧಿಕಾರಗಿಳು ಒಬ್ಬ ವ್ಯಕ್ತಿಯ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆಯ ಕುತ್ತಿಗೆಯನ್ನು ಸೀಳಿ ಹಾಕಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ ಅಮೆರಿಕದ ವಿರುದ್ಧ ತೀವ್ರ ಆಕ್ರೋಳ ವ್ಯಕ್ತವಾಗುವ ಸಾಧ್ಯತೆಯಿದ್ದು, ದೇಶಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಇನ್ನೆಂದಿಗೂ ಅಮೆರಿಕದ ತನಿಖಾ ಸಂಸ್ಥೆಗಳು ತನಿಖೆಗೆ ಇಂತಹ ಕ್ರೂರ ವಿಧಾನ ಬಳಸಲೇ ಬಾರದು. ಸಿಐಎ ನಡೆಸಿದ ಈ ಚಿತ್ರಹಿಂಸೆಯು ವಿದೇಶಗಳಲ್ಲಿರುವ ಅಮೆರಿಕನ್ನರ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ.
-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


