ನಮ್ಮ ಬೆಂಗಳೂರು ಪುರಸ್ಕಾರ: ಆಯ್ಕೆ ಶುರು
ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರ...

ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರಕ್ಕೆ ಸಕ್ರಿಯ ನಾಗರಿಕರನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳು ತೆರಳಲಿದ್ದಾರೆ.
ಪೀಣ್ಯದ ಡಾ.ರಾಜ್‌ಕುಮಾರ್ ಮೈದಾನದಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು ಚಲನಚಿತ್ರ ನಿರ್ಮಾಪಕ ಎಂ.ಜಿ.ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಾಮಾನ್ಯ ನಾಗರಿಕರು ಹಾಗೂ ಅವರ ಸೇವೆಯನ್ನು ಗುರುತಿಸಿ ಪುರಸ್ಕಾರ ನೀಡಲಾಗುತ್ತದೆ. ಜನರ ಮಧ್ಯೆಯೇ ಇದ್ದು ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರು, ಸಾಮಾನ್ಯರಾಗಿದ್ದು ಹೊಸದೊಂದ ಬದಲಾವಣೆಯನ್ನು ತಂದಿರುವಂಥವರನ್ನು ಈ ಪುರಸ್ಕಾರಕ್ಕೆ ಗುರುತಿಸಲಾಗುತ್ತದೆ. ವಿದ್ಯಾರ್ಥಿಗಲು ಇಡಿ ಬೆಂಗಳೂರನ್ನು ಸುತ್ತಾಡಿ, ಹುಡುಕಾಟ ನಡೆಸಿ ಅವರ ನೆಚ್ಚನ ಹೀರೋವನ್ನು ಆಯ್ಕೆ ಮಾಡುತ್ತಾರೆ.
ನಾಗರಿಕರೇ ಅವರೊಳಗಿರುವ ಉತ್ತಮರನ್ನು ಗುರುತಿಸುವುದರಿಂದ ಈ ಪುರಸ್ಕಾರ ಇತರೆ ಪುರಸ್ಕಾರಗಳಿಗಿಂದ ವಿಭಿನ್ನ ಎನಿಸುತ್ತದೆ.
ಉಳಿದವರಿಗಿಂತ ತಾವು ಹೇಗೆ ಭಿನ್ನ ಎಂಬುದನ್ನೂ ಸ್ಪಷ್ಟಪಡಿಸುವ ಅವಕಾಶ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ನಗದನ್ನು ಒಳಗೊಂಡಿರುತ್ತದೆ. ಪ್ರಕ್ರಿಯೆ ಡಿ.10 ರಂದು ಆರಂಭವಾಗಲಿದ್ದು ಡಿ.11 ಕ್ಕೆ ಜಯನಗರ, ಜೆಪಿ ನಗರ, ಬಿಟಿಎಂ, ಬನ್ನೇರುಘಟ್ಟ, ಡಿ.12ರಂದು ವೈಟ್ ಫೀಲ್ಡ್, ಮಾರತ್ತಹಳ್ಳಿ, ಸರ್ಜಾಪುರ, ಡಿ.13ಕ್ಕೆ ಸದಾಶಿವ ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಗಾಂಧಿನಗರ, ಡಿ.14-ಮೈಸೂರು ರಸ್ತೆ, ವಿಜಯನಗರ, ರಾಜಾಜಿನಗರ, ಡಿ. 15 ಗಾಂಧಿ ಬಜಾರ್, ಹನುಮಂತನಗರ, ಗಿರಿನಗರ, ಡಿ.16ಕ್ಕೆ ಕೆಆರ್‌ಪುರ, ರಾಮಮೂರ್ತಿನಗರ, ಕಮ್ಮನಹಳ್ಳಿಗಳಿಗೆ ತೆರಳಿ ಹೀರೋಗಳನ್ನು ಆಯ್ಕೆ ಮಾಡಲಾಗುತ್ತದೆ.
ವಿವರಗಳಿಗೆ:
ಮೊ: 9591985287, 9036288857.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


