57 ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ!
ಒಂದು ಧರ್ಮ ಬಿಟ್ಟು ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದು ಸರ್ವೇ ಸಾಮಾನ್ಯ. ಅದರಂತೆ ಆಗ್ರಾದ ಮಧುನಗರ್...

ನವದೆಹಲಿ: ಒಂದು ಧರ್ಮ ಬಿಟ್ಟು ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದು ಸರ್ವೇ ಸಾಮಾನ್ಯ. ಅದರಂತೆ ಆಗ್ರಾದ ಮಧುನಗರ್ ಸ್ಲಮ್ ನಿವಾಸಿಗಳು 57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ(ಆರ್ಎಸ್ಎಸ್) ಹೇಳಿದೆ.
ಬಜರಂಗದಳ ಮತ್ತು ಧರ್ಮ ಜಾಗರಣ ಸಮನ್ವಯ ವಿಭಾಗ್ ಸಂಘಟನೆಗಳು 'ಪೂರ್ವಿಕೋಂ ಕೀ ಘರ್ ವಾಪ್ಸಿ'(ಪೂರ್ವಿಕರ ಮನೆಗೆ ವಾಪಸ್) ಕಾರ್ಯಕ್ರಮದಲ್ಲಿ ಮುಸ್ಲಿಂರನ್ನು ಮತ್ತೊಮ್ಮೆ ಹಿಂದೂ ಧರ್ಮದ ತೆಕ್ಕೆಗೆ ತಂದಿದ್ದಾರೆ.
ಈ ಮತಾಂತರ ಸಮಾರಂಭದಲ್ಲಿ 57 ಮುಸ್ಲಿಂ ಕುಟುಂಬಗಳ 200 ಸದಸ್ಯರು ಹಿಂದೂ ದೇವತೆಗಳ ವಿಗ್ರಹಗಳ ಪಾದಪೂಜೆ ಮಾಡುತ್ತಿರುವಂತೆಯೆ ವೈದಿಕ ಮಂತ್ರಗಳ ಉಚ್ಛರಣೆ ಮಾಡಲಾಯಿತು. ಈ ಮೂಲಕ, ಇವರು ಹಿಂದೂ ಧರ್ಮವನ್ನಪ್ಪಿಕೊಂಡಿದ್ದಾರೆ. ಹೊಸದಾಗಿ ಮತಾಂತರಗೊಂಡ ವ್ಯಕ್ತಿಗಳಿಗೆ ಹೊಸ ಹೆಸರು ನೀಡಲಾಗಿದೆ.
ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯಲ್ಲಿ ಈ ಹೊಸ ಹೆಸರನ್ನು ಸೇರ್ಪಡಿಸಲಾಗುವುದು ಎಂದು ಹಿಂದೂ ಸಂಘಟನೆಗಳು ಹೇಳಿವೆ. ಅಲ್ಲದೆ, ಮಧುನಗರ್ ಸ್ಲಮ್ನಲ್ಲಿರುವ ಇವರ ಮನೆಗಳ ಮೇಲೆ ಭಗವಾಧ್ವಜಗಳನ್ನು ಹಾರಿಸಲಾಗುತ್ತಿದೆ.
ಯಾವುದೇ ಧರ್ಮದ ಜವರು ತಮಗೆ ಬೇಕಾದ ಧರ್ಮವ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವಿರಬೇಕು. ಇದರಲ್ಲಿ ತಪ್ಪೇನಿಲ್ಲ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ವಿನಯ್ ಕಟಿಯಾರ್ ಸಮರ್ಥಿಸಿಕೊಂಡಿದ್ದಾರೆ. ಆದರೆ, ಮುಂದಿನ ಐದು ವರ್ಷಗಳಲ್ಲಿ ಇಂಥ ಮತಾಂತರ ಕಾರ್ಯಕ್ಕಾಗಿ ಈಗಾಗಲೇ ವ್ಯವಸ್ಥಿತ ಯೋಜನೆ ಜಾರಿಯಲ್ಲಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ ತಾರಿಕ್ ಅನ್ವರ್ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


