ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ
10 ಮಂದಿ ಶಿವಸೇನಾ ಶಾಸಕರು ಸಚಿವರಾಗಿ ಪ್ರಮಾಣ ವಚನ...

ಮುಂಬೈ: ಮಹಾರಾಷ್ಟ್ರ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು, 12 ಮಂದಿ ಶಾಸಕರು ಇಂದು ಅಧೀಕೃತವಾಗಿ ಸಚಿವ ಸಂಪುಟ ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರ ಸರ್ಕಾರ ರಚನೆಯಾದ ಆರಂಭದಿಂದಲೂ ಬಿಜೆಪಿ ಶಿವಸೇನೆ ಪಕ್ಷ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಅಂತೂ ತೆರೆ ಬಿದ್ದಿದೆ.
10 ಮಂದಿ ಶಿವಸೇನಾ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಸಿದ್ದು ಅಧೀಕೃತವಾಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಕ್ಯಾಬಿನೆಟ್ ಸಚಿವರಾಗಿ ಏಕನಾಥ್ ಶಿಂಧೆ, ಗಿರೀಶ್ ಚಂದ್ರ ಪಾಪಟ್, ಗಿರೀಶ್ ದತ್ತಾತ್ರೆಯಾ, ರಾಮ್ ದಾಸ್ ಕದಂ, ಚಂದ್ರಶೇಖರ್ ಬಾವನಕುಳೆ, ರಾಜ್‌ಕುಮಾರ್ ಬಡೋಲೆ ಪ್ರಮಾಣ ವಚನ ಸ್ವೀಕರಿಸಿದರೆ.
ಇನ್ನೂ ರಾಜ್ಯ ಖಾತೆ ಸಚಿವರಾಗಿ ಸಂಜಯ್ ರಾಥೋಡ್, ವಿಜಯ್‌ದೇಶ್ ಮುಖ್, ವಿಜಯ್ ಶಿವತಾರೆ, ದಾದಾ ಭೂಸೆ, ಶಿಂಧೆ ಸೇರಿದಂತೆ 12 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ನೂತನ ಸಚಿವರಿಗೆ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


