ದೇಶ

ಪ್ರಧಾನಿ ಮೋದಿ 'ಅಧಿಕಾರಶಾಹಿ ಜಡತ್ವ ನಿವಾರಕ': ಒಬಾಮ

ಪ್ರಧಾನಿ ಮೋದಿ 'ಅಧಿಕಾರಶಾಹಿ ಜಡತ್ವ ನಿವಾರಕ': ಒಬಾಮ
ನರೇಂದ್ರ ಮೋದಿ, ಬರಾಕ್ ಒಬಾಮ
Published On :

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅಧಿಕಾರಿಗಳ ಜಡತ್ವ ನಿವಾರಿಸಿದ ವ್ಯಕ್ತಿ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ಅಮೆರಿಕ ಮತ್ತು ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಚರ್ಚಿಸಲು ಉದ್ಯಮಿಗಳೊಂದಿಗೆ ಆಯೋಜಿಸಿದ್ದ ದುಂಡು ಮೇಜಿನ ಸಮ್ಮೇಳನದಲ್ಲಿ ಮಾತನಾಡಿದ ಒಬಾಮ, ನರೇಂದ್ರ ಮೋದಿ ಸರ್ಕಾರಿ ಅಧಿಕಾರಿಗಳ ಜಡತ್ವ ನಿವಾರಿಸಿದ ಕ್ರಿಯಾಶೀಲ ವ್ಯಕ್ತಿ. ಮೋದಿ ಅವರ ಪಾರದರ್ಶಕ ವ್ಯಕ್ತಿತ್ವ ನನಗೆ ಹಿಡಿಸಿದೆ ಎಂದರು.

ಜಡತ್ವವನ್ನು ಕಿತ್ತೆಸೆದು ಚಟುವಟಿಕೆಯಿಂದ ಕರ್ತವ್ಯ ನಿರ್ವಹಿಸಲು ಮೋದಿ ಅಧಿಕಾರಿಗಳನ್ನು ಪ್ರೇರೇಪಿಸಿರುವುದು ನನ್ನ ಮೇಲೆ ಬಾರಿ ಪ್ರಭಾವ ಬೀರಿದೆ. ಇದೊಂದು ದೀರ್ಘಕಾಲೀನ ಪ್ರಕ್ರಿಯೆಯಾಗಿದ್ದು, ನರೇಂದ್ರ ಮೋದಿ ಅವರು ಇದರಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂದು ಕಾದು ನೋಡಬೇಕಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.