ದೆಹಲಿಯಲ್ಲಿ ಕೇರಳ ಯುವತಿಯ ಮೇಲೆ ನಿರಂತರ ಅತ್ಯಾಚಾರ!
ಕೇರಳ ಮೂಲದ 21 ವರ್ಷದ ಯುವತಿಯ ಮೇಲೆ ಪರಿಚಯಸ್ಥನೇ 1 ತಿಂಗಳಕಾಲ...

ನವದೆಹಲಿ: ಕೇರಳ ಮೂಲದ 21 ವರ್ಷದ ಯುವತಿಯ ಮೇಲೆ ಪರಿಚಯಸ್ಥನೇ 1 ತಿಂಗಳಕಾಲ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಯುವತಿಯ ಪರಿಚಯಸ್ಥನೊಬ್ಬ ಆಕೆಯನ್ನು ಬಂಧನದಲ್ಲಿಟ್ಟು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರವೆಸಗಿದ್ದ ಆರೋಪಿ ತನ್ನ ಊರಾದ ಬೋಪಾಲ್‌ಗೆ ತೆರಳಿದ್ದಾನೆ. ಈ ವೇಳೆ ಯುವತಿಯು ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸತ್ಯ ಬಹಿರಂಗವಾಗಿದೆ.
ಯುವತಿಯ ತಾಯಿ ದೆಹಲಿಯಲ್ಲಿರುವ ಸಂಬಂಧಿಕರ ಮೂಲಕ ದೆಹಲಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಯುವತಿಯ ಇರುವ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹೊರಗಡೆಯಿಂದ ಮನೆ ಬಾಗಿಲು ಹಾಕಿದ್ದು, ಯುವತಿ ಮನೆಯೊಳಗೆ ಇರುವುದು ಕಂಡು ಬಂದಿದೆ. ಪೊಲೀಸರು ಮನೆಯ ಬಾಗಿಲನ್ನು ಹೊಡೆದು ಯುವತಿಯನ್ನು ರಕ್ಷಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಆರೋಪಿ ದೆಹಲಿಗೆ ಕರೆ ತಂದನು. ತದ ನಂತರ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ಸೆರೆ ಹಿಡಿದು, ಯಾರಿಗೆ ಹೇಳದಂತೆ ಬೆದರಿಕೆವೊಡ್ಡಿದ್ದನು. ಪ್ರಸ್ತುತ ದೆಹಲಿಯ ಕಾಲೆಜೊಂದರಲ್ಲಿ ಆರೋಪಿಯು ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಯುವತಿ ಹೊರಗಡೆ ಓಡಾಡಬಾರದೆಂದು ಆರೋಪಿಯನ್ನು ಆಕೆಯನ್ನು ಬಂಧನದಲ್ಲಿಟ್ಟಿದ್ದನು ಎಂದು ಹೇಳಿರುವ ಪೊಲೀಸರು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬೋಪಾಲ್‌ನಿಂದ ಬಂಧಿಸಿ ತರುವಂತೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


