ರಾಜ್ಯಕ್ಕೆ ನೆರವಿಲ್ಲ?
ವೆಚ್ಚ ಕಡಿತ ತಂತ್ರಗಳಿಗೆ ಮೊರೆ ಹೋಗುತ್ತಿರುವ ಕೇಂದ್ರ, ಈಗ ರಾಜ್ಯ ಸರ್ಕಾರಗಳಿಗೆ ನೀಡುವ ಅನುದಾನಕ್ಕೂ ಕತ್ತರಿ ...

ಶ್ರೀನಗರ: ವೆಚ್ಚ ಕಡಿತ ತಂತ್ರಗಳಿಗೆ ಮೊರೆ ಹೋಗುತ್ತಿರುವ ಕೇಂದ್ರ, ಈಗ ರಾಜ್ಯ ಸರ್ಕಾರಗಳಿಗೆ ನೀಡುವ ಅನುದಾನಕ್ಕೂ ಕತ್ತರಿ ಹಾಕುವ ಸೂಚನೆ ನೀಡಿದೆ. ಅಭಿವೃದ್ಧಿ ಹಾಗೂ ಇತರೆ ಯೋಜನೆಗಳಿಗೆ ರಾಜ್ಯಗಳು ಸ್ವಂತ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಜೇಟ್ಲಿ ಅವರಿಂದ ಈ ರೀತಿಯ ಹೇಳಿಕೆ ಹೊರ ಬಿದ್ದಿರುವುದು ಆದಾಯ ಸಂಗ್ರಹಿಸಲು ಒದ್ದಾಡುತ್ತಿರುವ ರಾಜ್ಯಗಳಿಗೆ ತಲೆನೋವು ತಂದಿದೆ.
ರಾಜ್ಯಗಳ ಕೇವಲ ಸರ್ಕಾರ ನಡೆಸುವ ಹಾಗೂ ಕೇಂದ್ರ ಅಗತ್ಯ ಸಂಪನ್ಮೂಲ ಒದಗಿಸುವ ದಿನಗಳು ಹೋದವು. ಈಗ ರಾಜ್ಯಗಳು ತಮ್ಮ ಕಾಲ ಮೇಲೆ ನಿಲ್ಲಬೇಕು. ರಾಜ್ಯಗಳ ಆರ್ಥಿಕತೆ ಹೂಡಿಕೆಯನ್ನು ಅವಲಂಬಿಸಿದೆ. ಹೂಡಿಕೆದಾರರು ಲಾಭವನ್ನು ನಿರೀಕ್ಷಿಸುತ್ತಾರೆ ನಿಜ. ಅದರ ಜತೆಗೆ ಉದ್ಯೋಗ ಸೃಷ್ಟಿಸುತ್ತಾರೆ, ತೆರಿಗೆಯನ್ನೂ ಪಾವತಿಸುತ್ತಾರೆ. ರಾಜ್ಯ ಸರ್ಕಾರಗಳು ಈ ಮೂಲಕ ಗಳಿಸುವ ಆದಾಯವನ್ನು ಅಭಿವೃದ್ಧಿಗೆ ಹಾಗೂ ಬಡವರ ಕಲ್ಯಾಣ ಯೋಜನೆಗಳಿಗೆ ವಿನಿಯೋಗಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


