ದೇಶ

ಫೇಸ್‌ಬುಕ್ ನಿಂದ ಐಐಟಿ ವಿದ್ಯಾರ್ಥಿಗಳಿಗೆ ರು. 1.55 ಕೋಟಿ ವೇತನ!

ಆರ್ಥಿಕ ಹಿಂಜರಿತದಿಂದಾಗಿ ಕಳೆಗುಂದಿದ್ದ..

ಫೇಸ್‌ಬುಕ್ ನಿಂದ ಐಐಟಿ ವಿದ್ಯಾರ್ಥಿಗಳಿಗೆ ರು. 1.55 ಕೋಟಿ ವೇತನ!
ಇಂಡಿಯನ್ ಇನ್ಸ್‌ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ
Published On :

ನವದೆಹಲಿ: ಆರ್ಥಿಕ ಹಿಂಜರಿತದಿಂದಾಗಿ ಕಳೆಗುಂದಿದ್ದ ಉದ್ಯೋಗ ಮಾರುಕಟ್ಟೆ ಮತ್ತೆ ಚಿಗಿತುಕೊಂಡಿದೆ. ಇಂಡಿಯನ್ ಇನ್ಸ್‌ಟಿಟ್ಯೂಟ್ಸ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೀಗ ಶುಕ್ರದೆಸೆ ಆರಂಭವಾಗಿದೆ.

ಸಾಮಾಜಿಕ ಜಾಲತಾದ ದೈತ್ಯ ಫೇಸ್‌ಬುಕ್ ಮುಂಬೈ ಮತ್ತು ಖರಗ್‌ಪುರ ಐಐಟಿಯ ವಿದ್ಯಾರ್ಥಿಗಳನ್ನು ವಾರ್ಷಿಕ 1.55 ಕೋಟಿ ರುಪಾಯಿ ವೇತನಕ್ಕೆ ಸಹಿ ಹಾಕಿಸಿಕೊಂಡಿದೆ. ಇವರಲ್ಲಿ ಮೂವರು ಐಐಟಿ ಖರಗ್‌ಪುರದವರಾದರೆ, ಉಳಿದವರು ಬಾಂಬೆ ಐಐಟಿಯವರು. ಈ ವೇತನದಲ್ಲಿ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಪೋಸ್ಟಿಂಗ್, ಬೋನಸ್, ಟ್ರಾನ್ಸ್‌ಪೋರ್ಟ್ ವೆಚ್ಚಗಳೆಲ್ಲ ಸೇರಿವೆ. ಇದು ಹಲವು ವರ್ಷಗಳ ಬಳಿಕ ಐಐಟಿಯ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಅತಿ ಹೆಚ್ಚಿನ ವೇತನವಾಗಿದೆ.

ಇದಲ್ಲದೆ ಸ್ಯಾಮ್‌ಸಂಗ್ 93 ಲಕ್ಷ, ಮೈಕ್ರೋಸಾಫ್ಟ್ 80 ಲಕ್ಷ, ಒರಾಕಲ್ 78 ಲಕ್ಷ, ಗೂಗಲ್ 78 ಲಕ್ಷ, ವೀಸಾ 87 ಲಕ್ಷ ರುಪಾಯಿ ವೇತನದ ಆಫರ್ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.