6 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ
ಗುಜರಾತ್ ರಾಜ್ಯದ ಬದಾನ್ ತಾಲೂಕಿನ ಬವಾನ್ಜಿ ಠಾಕೂರ್, ಈ ನೀಜ ಕೃತ್ಯ ಎಸಗಿರುವ ಪಾಪಿ...

ಅಹಮದಾಬಾದ್: ಗುಜರಾತಿನಲ್ಲಿ 6 ತಿಂಗಳ ಹಸುಗೂಸುವಿನ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿದ ಘಟನೆ ಇಡೀ ದೇಶವನ್ನೇ ತಲ್ಲಣ ಮೂಡಿಸಿದ್ದು, ನಾಗರೀಕರ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಗುಜರಾತ್ ರಾಜ್ಯದ ಬದಾನ್ ತಾಲೂಕಿನ ಬವಾನ್ಜಿ ಠಾಕೂರ್(32) ಈ ನೀಜ ಕೃತ್ಯ ಎಸಗಿರುವ ಪಾಪಿ.
ಬದಾನ್ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾಗ, ಮನೆಯವರು ತಮ್ಮ 6 ಮಗುವಿನ ಪುಟ್ಟ ಕಂದಮ್ಮನನ್ನು ಮಲಗಿಸಿದ್ದು, ಮಗುವನ್ನು ನೋಡಿಕೊಳ್ಳುವಂತೆ ಠಾಕೂರ್ಗೆ ಹೇಳಿ, ಪಕ್ಕದ ದೇವಾಲಯಕ್ಕೆ ತೆರಳಿದ್ದಾರೆ. ಬಳಿಕ ಮನೆಯವರು ಬಂದು ನೋಡಿದಾಗ ಮಗುವಿನ ಚೀರಾಟವನ್ನು ಆಲಿಸಿದ ಪೋಷಕರು ಕೆಲ ಕ್ಷಣ ಗಾಬರಿಯಾಗಿದರು. ಮನೆಯವರನ್ನು ಕಂಡ ಠಾಕೂರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಮಗು ಹಸಿವೆಗೆ ಅಳುತ್ತಿದೆ ಎಂಬುದನ್ನು ಕಂಡ ತಾಯಿ, ಮಗುವಿನ ಜನನಾಂಗದಿಂದ ರಕ್ತ ಸ್ರಾವ ಆಗುವುದನ್ನು ಕಂಡು ದಂಗಾದಳು. ಬಳಿಕ ಮಗು ಅತ್ಯಾಚಾರಕ್ಕೊಳಪಟ್ಟಿರುವುದು ಪೋಷಕರಿಗೆ ತಿಳಿದುಬಂದಿದೆ.
ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಹಸುಗೂಸುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಠಾಕೂರ್ಗಾಗಿ ಶೋಧಾ ಕಾರ್ಯ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


