ಇರಾನ್ ಒಪ್ಪಂದ ಭಾರತಕ್ಕೆ ಇಲ್ಲ ಹೆಚ್ಚಿನ ಲಾಭ
ವಾಷಿಂಗ್ಟನ್: ವಿವಾದಾತ್ಮಕ ಅಣು ಯೋಜನೆಯಿಂದ ಆರ್ಥಿಕ ದಿಗ್ಬಂಧನಕ್ಕೊಳಗಾಗಿದ್ದ ಇರಾನ್ ಜತೆಗಿನ ಅಮೆರಿಕ ಸೇರಿದಂತೆ ಆರು ರಾಷ್ಟ್ರಗಳ ನಡುವಿನ ಒಪ್ಪಂದದ ಹೊರತಾಗಿಯೂ ತೈಲ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಭಾರತಕ್ಕೆ ಹೆಚ್ಚಿನ ಅನುಕೂಲವೇನೂ ಆಗದು.
ಜತೆಗೆ, ಭಾರತವು ಸದ್ಯದ ಪ್ರಮಾಣದಲ್ಲಿ ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ತೈಲದ ಪ್ರಮಾಣವೇನೂ ಹೆಚ್ಚಾಗದು.
ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಫ್ರಾನ್ಸ್, ಜರ್ಮನಿ ದೇಶಗಳ ನಡುವೆ ನಡೆದ ಒಪ್ಪಂದದಂತೆ ಆರ್ಥಿಕ ದಿಗ್ಬಂಧನ ಎದುರಿಸುತ್ತಿದ್ದ ಇರಾನ್ ಸ್ವಲ್ಪ ಮಟ್ಟಿಗಿನ ನಿರಾಳತೆ ಅನುಭವಿಸಿದೆ. ಏಕೆಂದರೆ ಒಪ್ಪಂದಕ್ಕೆ ಪ್ರತಿಯಾಗಿ ಇರಾನ್ ವಿರುದ್ಧದ ದಿಗ್ಬಂಧವನ್ನು ಸಡಿಲಿಸಲಾಗಿದೆ.
ಜಿನಿವಾದಲ್ಲಿ ಭಾನುವಾರ ನಡೆದ ಈ ಒಪ್ಪಂದದಿಂದಾಗಿ ಇರಾನ್‌ಗೆ 6282 ಲಕ್ಷ ಕೋಟಿ ಪರಿಹಾರ ಸಿಗಲಿದೆ. ಒಪ್ಪಂದದಂತೆ ಇರಾನ್ ಯುರೇನಿಯಂ ಸಂಗ್ರಹ ಸಾಮರ್ಥ್ಯವನ್ನು ಕಡಿಮೆ ಮಾಡಲಿದೆ. ಒಂದು ವೇಳೆ ಇರಾನ್ ಈ ಒಪ್ಪಂದದಿಂದ ಹಿಂದೆ ಸರಿದರೆ ದೇಶಕ್ಕೆ ನೀಡಲಾಗಿರುವ ಪರಿಹಾರವನ್ನು ಹಿಂಪಡೆಯಲಾಗುವುದು ಎಂದು ಅಮೆರಿಕ ಹೇಳಿದೆ. ಈ ಒಪ್ಪಂದದ ಹೊರತಾಗಿಯೂ ಇರಾನ್ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಭಾರತವು ತೈಲ ಆಮದು ಕಡಿತ ಮಾಡುವುದು ಅನಿವಾರ್ಯ. ಮಾರ್ಚ್ 31ರಂದು ಮುಕ್ತಾಯಗೊಂಡ ಈ ಹಣಕಾಸು ವರ್ಷದಲ್ಲಿ ಭಾರತವು ಇರಾನ್‌ನಿಂದ ಆಮದು ಮಾಡುತ್ತಿದ್ದ ತೈಲದ ಪ್ರಮಾಣವನ್ನು ಶೇ. 26.5ರಷ್ಟು ಕಡಿತಗೊಳಿಸಿದೆ. 2012- 13ರಲ್ಲಿ ಭಾರತವು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಪ್ರಮಾಣವನ್ನು 18.1 ದಶಕೋಟಿ ಟನ್‌ನಿಂದ 13.3 ದಶಕೋಟಿ ಟನ್‌ಗಿಳಿಸಿದೆ.
ಬರಾಕ್ ಒಬಾಮ ಸ್ವಾಗತ: ವಿಶ್ವದ ಆರು ಪ್ರಮುಖ ರಾಷ್ಟ್ರಗಳ ಜತೆ ಇರಾನ್ ಮಾಡಿಕೊಂಡ ಒಪ್ಪಂದವನ್ನು ಅಮೆರಿಕ ಸ್ವಾಗತಿಸಿದೆ. ಈ ಒಪ್ಪಂದದಿಂದಾಗಿ ಅಣ್ವಸ್ತ್ರಗಳನ್ನು ನಿರ್ಮಿಸಲು ಇರಾನ್ ತೋರುತ್ತಿದ್ದ ಆಸಕ್ತಿಗೆ ಹಿನ್ನಡೆಯಾದಂತಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

