ದೇಶ

ಮುಷರ್ರಫ್ ಮೇಲೆ ಶೂ ತೂರಾಟ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರಿಗೆ ವಕೀಲರೊಬ್ಬರು...

ಮುಷರ್ರಫ್ ಮೇಲೆ ಶೂ ತೂರಾಟ
Published On :

ಕರಾಚಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರಿಗೆ ವಕೀಲರೊಬ್ಬರು ನ್ಯಾಯಾಲಯ ಆವರಣದಲ್ಲೇ ಶೂ ತೂರಿದ ಘಟನೆ ಶುಕ್ರವಾರ ನಡೆದಿದೆ.
ಆದರೆ, ಅದೃಷ್ಟವಶಾತ್ ಆ ಶೂ ಗುರಿತಪ್ಪಿದ್ದರಿಂದ ಮುಷರ್ರಫ್ ಅವರು ಭಾರಿ ಮುಖಭಂಗವೊಂದರಿಂದ ತಪ್ಪಿಸಿಕೊಂಡಂತಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆಗಾಗಿ ಮುಷರ್ರಫ್ ಸಿಂಧ್ ಹೈಕೋರ್ಟ್‌ಗೆ ಆಗಮಿಸಿದ್ದರು. ವಿಚಾರಣೆ ಮುಗಿಸಿಕೊಂಡು ಹೊರಬರುತ್ತಿದ್ದಾಗ ವಕೀಲ ತಜಮ್ಮುಲ್ ಲೋಧಿ ಏಕಾಏಕಿ ಚಪ್ಪಲಿ ಕಿತ್ತೆಸೆದು ಮುಷರ್ರಫ್ ಅವರತ್ತ ಎಸೆದಿದ್ದಾರೆ. ಈ ವೇಳೆ ಶೂ ಗುರಿತಪ್ಪಿ ಮುಷರ್ರಫ್ ಮುಂದಿದ್ದ ಗುಂಪಿನ ಮೇಲೆ ಬಿದ್ದಿದೆ. ಆ ಬಳಿಕ ಮುಷರ್ರಫ್ ಅವರನ್ನು ಸುರಕ್ಷಿತವಾಗಿ ಕೋರ್ಟ್ ಆವರಣದಿಂದ ಹೊರಕರೆದೊಯ್ದರೆ ಲೋಧಿಯನ್ನು ಬಂಧಿಸಿ ರಹಸ್ಯ ಸ್ಥಳಕ್ಕೆ ಸಾಗಿಸಲಾಯಿತು.
  1999ರಲ್ಲಿ ಪಾಕ್ ಅಧ್ಯಕ್ಷ ಸ್ಥಾನಕ್ಕೇರಿದ್ದ ಮುಷರ್ರಫ್ ಅವರು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರ ಅಮಾನತು ಮಾಡಿದ್ದರು. ಮುಷರ್ರಫ್ ಈ ಕ್ರಮ ಅನೇಕ ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಲೋಧಿ ಇಂತಹ ಕೃತ್ಯಕ್ಕೆ ಕೈಹಾಕಿರಬಹುದು ಎಂದು ಹೇಳಲಾಗಿದೆ.

ಪಾಕ್ ತ್ಯಜಿಸದಂತೆ ಕೋರ್ಟ್ ಸೂಚನೆ
4 ವರ್ಷಗಳ ಬಳಿಕ ಪಾಕ್‌ಗೆ ಹಿಂತಿರುಗಿರುವ ಮುಷರ್ರಫ್‌ರನ್ನು ದೇಶಬಿಟ್ಟು ತೆರಳದಂತೆ ಸಿಂಧ್ ಹೈಕೋರ್ಟ್ ಸೂಚಿಸಿದೆ. ಆದರೆ, ಬಂಧನಪೂರ್ವ ಜಾಮೀನನ್ನು ಮತ್ತೆ 15 ದಿನಗಳ ವರೆಗೆ ವಿಸ್ತರಿಸು ಬೇಡಿಕೆಗೆ ನ್ಯಾಯಾಲಯ ಅಸ್ತು ಅಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.