ಶಿವರಾತ್ರಿಯಂದು ವೈಷ್ಣವರೂ ಶಿವನಿಗೆ ಪೂಜೆ ಸಲ್ಲಿಸುತ್ತಾರೆ
ಶಿವರಾತ್ರಿ ಎಂದರೆ ಕೇವಲ ಶೈವರು ಮಾತ್ರ ಹೆಚ್ಚು ಆಚರಣೆ ಮಾಡುವ ಹಬ್ಬವಲ್ಲ, ವೈಷ್ಣವ ಸೇರಿದಂತೆ ಹಲವು ಪಂಥದವರು ಶಿವನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಮಹಾಶಿವರಾತ್ರಿ ಎಂದರೆ ಕೇವಲ ಒಂದು ವರ್ಗ ಮಾತ್ರ ಹೆಚ್ಚು ಆಚರಣೆ ಮಾಡುವ ಹಬ್ಬವಲ್ಲ, ಶೈವ, ವೈಷ್ಣವ ಸೇರಿದಂತೆ ಹಲವು ಪಂಥದವರು ಶಿವನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿಯಂದು ಬೃಂದಾವನದಲ್ಲಿರುವ ಗೋಪಿಶ್ವರ ಮಹಾದೇವನ ದೇವಾಲಯಕ್ಕೆ ತೆರಳುವ ನೀಡುವ ಗೌಡಿಯಾ ವೈಷ್ಣವರು ಅಲ್ಲಿರುವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾತ್ರಿ ಇಡಿ ಶಿವನ ಧ್ಯಾನದಲ್ಲಿ ಭಜನೆ ಮಾಡುತ್ತಾ ಜಾಗರಣೆ ಆಚರಿಸುತ್ತಾರೆ.
ಇದು ಉತ್ತರ ಭಾರತದ ನಿದರ್ಶನವಾದರೆ ದಕ್ಷಿಣ ಭಾರತದಲ್ಲೂ ಇಂತಹ ಕೆಲವು ಉದಾಹರಣೆಗಳು ಕಾಣಸಿಗುತ್ತವೆ. ಯತಿರಾಜ ಮಠದ ಪೀಠಾಧಿಪತಿಗಳಾಗಿದ್ದ ಅಸುರಿ ಶ್ರೀನಿವಾಸ ಅಯ್ಯಂಗಾರ್ ಅವರು ಯತಿರಾಜ ಮಠ, ಪೀಠಾಧಿಕಾರ ಸ್ವೀಕಾರ ಮಾಡುವುದಕ್ಕಿಂತ ಮುಂಚೆ ಶಿವಾಲಯದ ಬಗ್ಗೆಯೇ ಒಂದು ಪುಸ್ತಕ ಬರೆದಿದ್ದರು. ದ್ವೈತ ಸಿದ್ಧಾಂತದ ವೈಷ್ಣವ ಪಂಥದ ವ್ಯಾಸರಾಜ ಪೀಠದ ವಿದ್ಯಾಪಯೋನಿಧಿ ತೀರ್ಥರು, ಆ ಮಠದಲ್ಲಿರುವ ಸ್ಪಟಿಕ ಲಿಂಗಕ್ಕೆ ಶಿವರಾತ್ರಿ ದಿನದಂದು ಇಡಿ ರಾತ್ರಿಯಲ್ಲಿ ಏಕವಾರು ರುದ್ರಾಭಿಷೇಕ ಮಾಡುತ್ತಿದ್ದರು ಎಂಬುದಕ್ಕೆ ಉಲ್ಲೇಖವಿದೆ.
ಸನಾತನ ಧರ್ಮದ ಪ್ರಕಾರ ಮೋಕ್ಷ ಪಡೆಯುವುದಕ್ಕೆ ಶಿವನ ಅನುಗ್ರಹ ಅತ್ಯಗತ್ಯ. ಆದ್ದರಿಂದ ಶಿವರಾತ್ರಿಯಂದು ವೈಷ್ಣವರು ಸೇರಿದಂತೆ ಹಲವು ಪಂಥದವರೂ ಶಿವನನ್ನು ಆರಾಧಿಸುವ ಅನೇಕ ಉದಾಹರಣೆಗಳು ಸಿಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


