ಉಪ್ಪಿನಕಾಯಿಯಲ್ಲಿ ಬೂಸ್ಟ್ ಬಂತಾ? Pickle ವರ್ಷಗಳ ಕಾಲ ಕೆಡದೇ ಇರಲು ಇಲ್ಲಿದೆ ಸಿಂಪಲ್ ಟಿಪ್ಸ್!
ಮಾವಿನಕಾಯಿ, ನೆಲ್ಲಿಕಾಯಿ ಉಪ್ಪಿನಕಾಯಿ ಮಾಡಿ 15 ದಿನಕ್ಕೆ ಬೂಸ್ಟ್ ಬಂದುಬಿಡುತ್ತಾ? ಟೆನ್ಷನ್ ಬೇಡ. ಉಪ್ಪಿನಕಾಯಿ ಹಾಳಾಗಲು ಕಾರಣ ಬೂಸ್ಟ್ ಅಲ್ಲ, ನಾವು ಮಾಡುವ 2-3 ಸಣ್ಣ ತಪ್ಪುಗಳು. ಹಾಗಾಗಿ, ಇಲ್ಲಿರೋ ಸಿಂಪಲ್ ಟಿಪ್ಸ್ ಫಾಲೋ ಮಾಡಿ ನಿಮ್ಮ ಉಪ್ಪಿನಕಾಯಿ 1 ವರ್ಷಕ್ಕೂ ಕೆಡದೇ, ರುಚಿ ಡಬಲ್ ಆಗುತ್ತದೆ.

Fungus Problem in Pickle? ಮಾವಿನಕಾಯಿ, ನಿಂಬೆಹಣ್ಣು ಅಥವಾ ನೆಲ್ಲಿಕಾಯಿ ಉಪ್ಪಿನಕಾಯಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಊಟದ ತಟ್ಟೆಯಲ್ಲಿ ಅನ್ನ-ಸಾಂಬಾರ್ ಜೊತೆಗೆ ಸ್ವಲ್ಪ ಉಪ್ಪಿನಕಾಯಿ ಇದ್ದರೆ ಅದರ ರುಚಿಯೇ ಬೇರೆ! ಆದರೆ, ಕಷ್ಟಪಟ್ಟು ಮಾಡಿದ ಉಪ್ಪಿನಕಾಯಿಗೆ ಕೆಲವೇ ದಿನಗಳಲ್ಲಿ ಬೂಸ್ಟ್ ಬಂದು ಹಾಳಾದರೆ ನಿಜಕ್ಕೂ ಬೇಸರವಾಗುತ್ತದೆ, ಅಲ್ವಾ? ಚಿಂತೆ ಬೇಡ! ನಿಮ್ಮ ಇಷ್ಟದ ಉಪ್ಪಿನಕಾಯಿ ವರ್ಷವಿಡೀ ಕೆಡದೆ, ಅದೇ ತಾಜಾ ರುಚಿಯೊಂದಿಗೆ ಉಳಿಯಲು ಸಹಾಯ ಮಾಡುವ ಸಿಂಪಲ್ ಟ್ರಿಕ್ಸ್ ಇಲ್ಲಿದೆ:
ಉಪ್ಪಿನಕಾಯಿಯಲ್ಲಿ ಬೂಸ್ಟ್ ಬರಲು ಕಾರಣವೇನು?
ನೀರು: ಕಾಯಿ ತೊಳೆದ ನಂತರ ಸರಿಯಾಗಿ ಒಣಗಿಸದೇ ಇರುವುದು
ಗಾಳಿ: ಉಪ್ಪಿನಕಾಯಿ ಇಡುವ ಬಾಕ್ಸ್ ಸರಿಯಾಗಿ ಮುಚ್ಚದೇ ಇರುವುದು
ಕೈ: ಒದ್ದೆ ಕೈ ಅಥವಾ ತೇವವಾಗಿರುವ ಚಮಚದಿಂದ ತೆಗೆಯುವುದು
ಪಿಕಲ್ ದೀರ್ಘಕಾಲ ಬಾಳಿಕೆ ಬರಲು ಆ ಸಿಂಪಲ್ ಟಿಪ್ಸ್ ಏನು?
1. ಉಪ್ಪು ಮತ್ತು ಎಣ್ಣೆ:
ಉಪ್ಪಿನಕಾಯಿ ಮುಳುಗುವಷ್ಟು ಎಣ್ಣೆ ಹಾಕಲೇಬೇಕು. ಯಾಕಂದ್ರೆ, ಎಣ್ಣೆಯ ಪದರವು ಗಾಳಿ ಮತ್ತು ತೇವಾಂಶವನ್ನು ಕಾಯಿಗೆ ತಾಗದಂತೆ ತಡೆಯುತ್ತದೆ. ಇದರಿಂದ ಬೂಸ್ಟ್ ಬರುವುದೇ ಇಲ್ಲ. ಜೊತೆಗೆ ಪ್ರತಿ ಬಾರಿ ಉಪ್ಪಿನಕಾಯಿ ತೆಗೆದ ನಂತರ ಮತ್ತೆ ಮೇಲೆ ಎಣ್ಣೆ ಒಂದು ಲೇಯರ್ ಇರುವಂತೆ ನೋಡಿಕೊಳ್ಳಿ.
2. ಬಿಸಿಲು ಮತ್ತು ಜಾರ್:
ಉಪ್ಪಿನಕಾಯಿ ತುಂಬುವ ಮೊದಲು ಗಾಜಿನ ಜಾರ್ ಅನ್ನು ಬಿಸಿಲಿನಲ್ಲಿ 2 ದಿನ ಒಣಗಿಸಿ. ಅಥವಾ ಬಿಸಿ ನೀರಿನಲ್ಲಿ ತೊಳೆದು ಸಂಪೂರ್ಣ ಒಣಗಿಸಿ. ಯಾಕಂದ್ರೆ, ಜಾರ್‌ನಲ್ಲಿರುವ ಬ್ಯಾಕ್ಟೀರಿಯಾ ಮತ್ತು ತೇವಾಂಶವೇ ಬೂಸ್ಟ್‌ಗೆ ಪ್ರಮುಖ ಕಾರಣ. ಹಾಗಾಗಿ, ಒಣಗಿರುವ ಜಾರ್‌ನಲ್ಲಿಟ್ಟರೆ ಆ ಉಪ್ಪಿನಕಾಯಿಯ ಲೈಫ್ ಜಾಸ್ತಿ.
3. ಕಡ್ಡಾಯವಾಗಿ ಒಣಗಿರುವ ಚಮಚವನ್ನೇ ಬಳಸಿ:
ಉಪ್ಪಿನಕಾಯಿ ತೆಗೆಯಲು ಯಾವಾಗಲೂ ಒಣಗಿದ, ಸ್ವಚ್ಛವಾದ ಸ್ಟೀಲ್ ಚಮಚವನ್ನೇ ಬಳಸಿ. ಬೆರಳು ಹಾಕಲೇಬೇಡಿ. ಯಾಕಂದ್ರೆ, ನಮ್ಮ ಕೈ ಮತ್ತು ಚಮಚದಲ್ಲಿರುವ ನೀರು ಅಥವಾ ಬ್ಯಾಕ್ಟೀರಿಯಾಗಳು ಜಾರ್‌ನೊಳಗೆ ಹೋದರೆ ಇಡೀ ಉಪ್ಪಿನಕಾಯಿಯೇ ಹಾಳಾಗುತ್ತದೆ. ಹಾಗಾಗಿ, ಒಬ್ಬರು ತೆಗೆದ ಮೇಲೆ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.
4. ಇದನ್ನೂ ಮೀರಿ ಬೂಸ್ಟ್ ಬಂದರೆ ಏನು ಮಾಡಬೇಕು?
ಅಲ್ಪ ಸ್ವಲ್ಪ ಬೂಸ್ಟ್ ಬಂದಿದ್ದರೆ ಇಡೀ ಉಪ್ಪಿನಕಾಯಿ ಜಾರ್ ಅನ್ನೇ ಎಸೆಯಬೇಡಿ. ಬದಲಿಗೆ ಬೂಸ್ಟ್ ಇರುವ ಮೇಲಿನ ಪದರವನ್ನು ಸಂಪೂರ್ಣ ತೆಗೆದುಹಾಕಿ. ಉಳಿದ ಉಪ್ಪಿನಕಾಯಿಯನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಈ ವೇಳೆ ಸ್ವಲ್ಪ ಇಂಗು ಹಾಗೂ ಅರಿಶಿನ ಹಾಕಿ.

ತದನಂತರ ತಣ್ಣಗಾದ ಮೇಲೆ ಮತ್ತೆ ಹೊಸ ಬೇಯಿಸಿದ ತಣ್ಣಗಾದ ಎಣ್ಣೆ ಹಾಕಿ. ಇದು ಇನ್ನೂ 3 ರಿಂದ 4 ತಿಂಗಳು ಬರುತ್ತದೆ. ಏತನ್ಮಧ್ಯೆ, ಉಪ್ಪಿನಕಾಯಿಯಲ್ಲಿ ವಾಸನೆ ಸಂಪೂರ್ಣ ಹೋಗಿದ್ದರೆ ಮಾತ್ರವೇ ಈ ಟ್ರಿಕ್ ಮಾಡಿ.
5. ಸರಿಯಾದ ಜಾಗದಲ್ಲಿ ಇಡಿ
ಉಪ್ಪಿನಕಾಯಿ ಜಾರ್ ಅನ್ನು ನೇರ ಬಿಸಿಲು ಬೀಳದ, ತಂಪಾದ ಜಾಗದಲ್ಲಿ ಇಡಿ. ಅಂದುಬಿಟ್ಟು ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ. ಯಾಕಂದ್ರೆ, ಬಿಸಿಲು ಮತ್ತು ಶಾಖದಿಂದ ಎಣ್ಣೆ ಕೆಟ್ಟು, ರುಚಿ ಬದಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



