ಉನ್ನತಿಗೆ ಸರಳ ಮಾರ್ಗ

ಮನುಷ್ಯ ಸಮಾಜ ಜೀವಿ. ಜೀವನದ ಪರಿಪೂರ್ಣತೆ ಹೊಂದಬೇಕಾದಲ್ಲಿ ಸಂಬಂಧಗಳ ಪಾತ್ರವೂ ಮಹತ್ವದ್ದಾಗಿರುತ್ತದೆ. ಸಂಬಂಧವೆಂದರೆ ಬರಿ ತಂದೆ-ತಾಯಿಯ, ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ, ಸಂಬಂಧವಷ್ಟೇ ಅಲ್ಲ ಎಂಬುವ ಗುರೂಜಿಯವರ ವಿಶ್ಲೇಷಣೆ ಮಾಡುತ್ತಿರುವ ಕೆಲಸ ಕಾರ್ಯವನ್ನು ಮೇಲಾಧಿಕಾರಿಗಳ ಸಂಬಂಧ ಅಥವಾ ಉದ್ಯೋಗ ವ್ಯವಹಾರಗಳಲ್ಲಿ ಗ್ರಾಹಕ ನೌಕರರ ಸಂಬಂಧ ಇವುಗಳು ಕೂಡಾ ಮಹತ್ವ ಎಂದು ಗುರೂಜಿಯವರು ತಿಳಿಸುತ್ತಾರೆ. ಇಂದಿನ ದಿನಗಳು ಅನೇಕ ದೊಡ್ಡ ದೊಡ್ಡ ಉದ್ದಿಮೆಗಳು ಆಡಳಿತ ಹಾಗೂ ನೌಕರ ವರ್ಗದವರು ಸಂಬಂಧಗಳ ಬಿರುಕಿನಿಂದಾಗಿ ನಷ್ಟ ಅನುಭವಿಸಿರುವುದನ್ನು ಸಾಕಷ್ಟು ನೋಡಿರುತ್ತೇವೆ ಇಲ್ಲಿಯೂ ಕ್ರಾಂತಿಕಾರಕ ಬದಲಾವಣೆಯನ್ನು ಸರಳವಾಸ್ತುವಿನಿಂದ ಪಡೆಯಬಹುದು. ಅಲ್ಲದೇ ಹಾಗೇಯೇ ಉದ್ದಿಮೆಗಳು ಲಾಭವನ್ನು ಪಡೆಯಬಹುದೆಂದು ಗುರೂಜಿಯವರ ವಾಗ್ದಾನ.
ತಂದೆ-ತಾಯಿಯರಿಗೆ ಮಕ್ಕಳ ಮದುವೆ ವಿಳಂಬವಾಗುವುದರಿಂದ ಚಿಂತೆ ಉಂಟಾಗುವುದು ಸಹಜ. ವಿದ್ಯಾವಂತ ಅಥವಾ ಸುಂದರವಾಗಿಯೂ, ಲಕ್ಷಣವಾಗಿರುವ ವಧು ಮತ್ತು ವರರರಿಗೆ ಆಗಿರಬಹುದು. ಮನೆಯಲ್ಲಿನ ಸಂಬಂಧ ಸ್ಥಾನ ದೋಷವಿದ್ದಲ್ಲಿ ಈ ರೀತಿ ಮದುವೆ ವಿಳಂಬವಾಗುವುದು ಎಂಬುದು ಗುರೂಜಿಯವರ ಹೇಳಿಕೆ, ಈ ಸಮಸ್ಯೆಯನ್ನು ಕೂಡಾ ಸರಳವಾಸ್ರುವಿನ ಮೂಲಕ ಪರಿಹರಿಸಿ ನೆಮ್ಮದಿ ಜೀವನ ನಡೆಸಿರುವರ ಹಲವಾರು ಜನ ಮದುವೆ ವಿಳಂಭವಾಗಿರುವುದರ ಬಗ್ಗೆ ಕಾರಣ ಎನೆಂಬುದನ್ನು ಸರಿಯಾಗಿ ತಿಳಿದುಕೊಂಡು ಪರಿಹಾರ ಪಡೆದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ. ನಾವು ವಾಸ ಮಾಡುವ ಮನೆ ಸ್ವಂತದ್ದು ಬಿಡಿ, ಅಲ್ಲಿ ಹೇಗೆ ವಾಸ್ತು ಅಳವಡಿಸುವುದು ಎಂಬ ಚಿಂತೆಯೇ? ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ. ನೀವು ವಾಸ ಮಾಡುವ ಮನೆಯ ಅಥವಾ ಕಾರ್ಯಸ್ಥಳ ಸಂತದ್ದಾಗಿರಲಿ ಅಥವಾ ಬಾಡಿಗೆಯದಾಗಿರಲಿ ಅಲ್ಲಿ ಇರುವ ಪ್ರತಿದಿನವೂ ವಾಸ್ತು ಅಳವಡಿಸಿ ಲಾಭ ಪಡೆಯಬಹುದೆಂದು ಗುರೂಜಿಯವರು ತೊರಿಸಿಕೊಟ್ಟಿದ್ದಾರೆ.
ಮೊದಲಿಗೆ ವಾಸ್ತು ತಜ್ಞರ ಮೂಲಕ ವಿದ್ಯಾಭ್ಯಾಸ, ಉದ್ಯೋಗ, ಜೀವನ ವೃತ್ತಿ, ವಿವಾಹ ಸಂಬಂಧಗಳ ಸ್ಥಾನಗಳನ್ನು ನೋಡಿ ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಇದೆಯೋ ಇಲ್ಲವೋ ಎಂಬದುನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ಹೆಚ್ಚೇನು ಖಚರ್ು ಮಾಡಬೇಕಿಲ್ಲ ಕನರ್ಾಟಕ, ಮಹಾರಾಷ್ಟ್ರ, ಗುಜರಾತ ರಾಜ್ಯಗಳಲ್ಲಿ ಶ್ರೀ ಚಂದ್ರಶೇಖರ ಗುರೂಜಿಯವರ ಕಛೇರಿಗಳಿದ್ದು, ನೀವು ಯಾವುದೇ ಸಣ್ಣ ಹಳ್ಳಿಯಾಗಿರಲಿ ಅಥವಾ ಪಟ್ಟಣ ಆಗಿರಲಿ ಕಡಿಮೆ ವೆಚ್ಚದಲ್ಲಿ ಮನೆಯ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ತಜ್ಞರು ತಿಳಿಸಿದ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಪಡೆಯುವುದರ ಬಗ್ಗೆ ನಿರ್ಧರಿಸಬಹುದು. ದೈವಕೃಪೆಯಿಂದ ದೊರೆತ ಸರಳವಾಸ್ತು ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನೆ ಮನೆಯನ್ನು ತಲುಪಿ ಜನರು ದುಃಖದಿಂದ ಹೊರಬಂದರೆ ತನ್ನ ಶ್ರಮ ಸಾರ್ಥಕ ಎಂದು ಗುರೂಜಿಯವರು ತಿಳಿದುಕೊಳ್ಳುತ್ತಾರೆ. ಸರಳವಾಸ್ತುವಿನ ಮೂಲಕ ಪ್ರತಿಯೊಂದು ಮನೆಯು ಸಮಸ್ಯೆಗಳಿಂದ ಮುಕ್ತವಾಗಿ ಸುಖ ಸಂತೋಷ ನೆಮ್ಮದಿಯ ಬದುಕು ಬಂದಾಗ ಮಾತ್ರ ಜನರಿಂದ ದೊರೆತ ಅಂತರಾಳದ ಆಶೀವರ್ಾದವು ತಮಗೂ ಹಾಗೂ ತಮ್ಮ ಸಮಸ್ತ ಪರಿವಾರಕ್ಕೂ ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ ಎಂದು ಗುರೂಜಿಯವರು ಹೆಮ್ಮೆಯಿಂದ ಹೇಳುತ್ತಾರೆ.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸುಖ ಸಮೃದ್ಧಿ ಸಂತೋಷದ ಕನಸು ಕಾಣುತ್ತಿರುತ್ತಾರೆ. ಕನಸನ್ನು ನನಸಾಗಿಸಲು ಅನೇಕ ರೀತಿಯ ಪ್ರಯತ್ನ ಅಂದರೆ ದೇವಸ್ಥಾನಗಳಿಗೆ ಹೋಗಿ ದೇವರಲ್ಲಿ ಕೇಳಿಕೊಳ್ಳುವುದು. ಜ್ಯೋತಿಷ್ಯ ಶಾಸ್ತ್ರ ಅಥವಾ ರತ್ನಗಳ ಮೂಲಕ ಲಾಭ ಪಡೆಯುವುದು ಇತ್ಯಾದಿ ಪ್ರಯತ್ನಗಳನ್ನು ಮಾಡಿಯೂ ಫಲ ದೊರಕದೇ ಹೋದಾಗ ಹಣೆ ಬರಹ ಅಥವಾ ವಿಧಿಲಿಖಿತ ಎಂದು ಸುಮ್ಮನಾಗುವರು ಇವೆಲ್ಲವುಗಳನ್ನು ಸುಳಭವಾಗಿಯೇ ವಾಸ ಮಾಡುವ ಮನೆ ಅಥವಾ ಕಾರ್ಯ ಸ್ಥಳದಲ್ಲಿ ಅದು ಬಾಡಿಗೆಯ ರೀತಿಯಲ್ಲಿಯೇ ಇರಬಹುದು ಅಥವಾ ಸ್ವಂತದ್ದೇ ಇರಬಹುದು ಸರಳವಾಸ್ತುವಿನ ಆವಿಷ್ಕೃತ ಗುರೂಜಿಯವರ ವಾಸಿಸುವ ಸ್ಥಳದಿಂದಲೇ ಪಡೆಯಬಹುದೆಂದು ಜನತೆಗೆ ತೊರಿಸಿಕೊಟ್ಟಿರುತ್ತಾರೆ. ಅದನ್ನು ವಿದ್ಯಾಭ್ಯಾಸ ಸ್ಥಾನದಿಂದಲೂ ಪಡೆಯಬಹುದು.
ವಿದ್ಯಾಭ್ಯಾಸ ಸ್ಥಾನ
ಮನೆಯಲ್ಲಿ ಮಕ್ಕಳು ಓದುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆಯೇ? ಕಷ್ಟ ಪಟ್ಟು ಓದಿದರೂ ಫಲಿತಾಂಶ ಪ್ರಗತಿ ಕಾಣುತ್ತಿಲ್ಲವೇ? ಅಥವಾ ಸರಾಗವಾಗಿ ನಡೆಯುವ ವಿದ್ಯಾಭ್ಯಾಸ ಸ್ಥಗಿತಗೊಂಡಿದೆಯೇ? ಈ ರೀತಿಯಾಗಿ ಆಗುತ್ತಿದ್ದಲ್ಲಿ ವಾಸಿಸುವ ಮನೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಗುರೂಜಿಯವರು. ಒಂದು ವೇಳೆ ಮನೆಯ ಅಥವಾ ಕಾರ್ಯಸ್ಥಳದಲ್ಲಿ ಸರಸ್ವತಿ ಸ್ಥಾನ ಅಥವಾ ಜ್ಞಾನದ ಸ್ಥಾನ ದೋಷಪೂರಿತ ವಾಗಿದ್ದಲ್ಲಿ ಈ ಸಮಸ್ಯೆಗಳು ಬರುವುದು ಕೂಡಾ ಖಡಾಖಂಡಿತ. ಇದಕ್ಕಾಗಿ ಸುಮ್ಮನೆ ಮಕ್ಕಳನ್ನು ದೋಷಿಸದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ನಿಮ್ಮ ಮಕ್ಕಳ ಬದುಕು ಉಜ್ವಲವಾಗುವುದು. ಜೀವನದಲ್ಲಿ ಭಾಗ್ಯ ಪಡೆಯಲು ಕೂಡಾ ವಿದ್ಯಾ ಅಥವಾ ಜ್ಞಾನ ಇರುವುದು ಅತಿ ಅವಶ್ಯಕ. ವಿದ್ಯೆಯ ಮಹತ್ವವನ್ನು ಕಂಡುಕೊಂಡಿರುವ ಕವಿ ಸರ್ವಜ್ಞನು ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕು ಎಂದು ಹೇಳಿರುತ್ತಾರೆ. ನೀವೇ ಮಕ್ಕಳ ಭವ್ಯ ಭವಿಷ್ಯದ ಬಗ್ಗೆ ಆಲೋಚಿಸಿ ಮನೆಯಲ್ಲಿನ ಸರಸ್ವತಿ ಸ್ಥಾನದ ದೋಷ ಪರಿಹರಿಸಿದಲ್ಲಿ ಅದೇ ಮಗುವಿಗೆ ನೀಡುವ ಉತ್ತಮ ಕಾಣಿಕೆ ಆಗುತ್ತದೆ.
ಜೀವನ ವೃತ್ತಿ ಸ್ಥಾನ
ಉದ್ಯೋಗಂ ಪುರುಷ ಲಕ್ಷಣಂ ಎಂಬುದು ಹಿಂದಿವ ಉಕ್ತಿ. ಇಂದಿನ ಗಂಡುಗಳಲ್ಲಿ ಗಂಡು ಹೆಣ್ಣು ಸರಿಸಮಾನವಾಗಿ ಜೀವನ ವೃತ್ತಿಯಲ್ಲಿ ತೊಡಗಿರುವುದನ್ನು ಕಾಣಬಹುದು. ಜೀವನದಲ್ಲಿ ಪಡೆಯಬಯಸುವ ಪ್ರತಿ ಐಶ್ಯಾರಾಮಿ ಜೀವನಕ್ಕೆ ಉದ್ಯೋಗದ ಬಲ ಬೇಕೇ ಬೇಕು. ದೊರೆಯದಿದ್ದಲ್ಲಿ ಹಣೆ ಬರಹವನ್ನು ದೂಷಿಸಬೇಡಿ ಎನ್ನುತ್ತಾರೆ ಗುರೂಜಿಯವರು. ಇದರ ಸತ್ಯಾಸತ್ಯತೆ ಅರಿಯಬೇಕೆಂದರೆ ಮನೆ ಅಥವಾ ಕಾರ್ಯಸ್ಥಳದ ವಾಸ್ತು ದೋಷದ ಪ್ರಭಾವದಿಂದ ಈ ರೀತಿ ಆಗುವುದೆ? ಮುಂತಾದ ಪ್ರಶ್ನೆಗಳು ಮನಸ್ಸಿನಲ್ಲಿ ಬರುತ್ತಿದ್ದರೆ, ಮನೆ ಅಥವಾ ಕಾರ್ಯಸ್ಥಳವನ್ನು ಸರಳವಾಸ್ತು ತಜ್ಞರಿಗೆ ತೋರಿಸಿ ಆ ಮೂಲಕ ಸಮಸ್ಯೆಯ ಮೂಲ ಅರಿತು ಪರಿಹರಿಸಿದಲ್ಲಿ ಜೀವನ ವೃತ್ತಿಯಲ್ಲಿ ಯಶಸ್ಸನ್ನು ಖಂಡಿತವಾಗಿ ಕಾಣಲು ಸಾಧ್ಯ. ಈಗಾಗಗಲೇ ಸರಳವಾಸ್ತುವಿನಿಂದ ಲಕ್ಷಾಂತರ ಕುಟುಂಬಗಳು ಲಾಭ ಪಡೆದಿರುತ್ತಾರೆ. ಹೀಗೆ ಲಾಭ ಪಡೆದ ಜೀವಂತ ಕೌಟುಂಬಿಕ ಸಂಸಾರದಲ್ಲಿ ಯಶಸ್ವಿ ಹೊಂದಿದ ಉದಾಹರಣೆಗಳು ಸಾಕಷ್ಟಿವೆ.
- ಡಾ. ಚಂದ್ರಶೇಖರ ಗುರೂಜಿ
guruji@saralvaastu.com
Address: # 88, Between 6th & 7th Cross, Sampige Road, 2nd Floor, RR Gold Palace, Malleshwaram, Bengaluru-560003. Cell : 9448286755/56, Web: www.saralvaastu.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


