ರಾಜ್ಯ

ಯುಪಿಐ ಪಾವತಿಗೆ ಶುಲ್ಕ: ಕೇಂದ್ರದ ಸಚಿವರಿಗೆ ಪಿಕ್ ಪಾಕೆಟ್ ನಲ್ಲಿ PHD; ವಿದೇಶಿ ವ್ಯಾಪಾರಿಗಳಿಗೆ ಅನುಕೂಲ; CM ವ್ಯಂಗ್ಯ

"ಯಾವ ಕಾರಣಕ್ಕೆ ಕ್ಯಾಶ್ ಲೆಸ್ ಇಂಡಿಯಾ ಎಂದು ಅವರು ಕರೆದರು. ನೋಟು ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಈಗ ಮತ್ತೆ ಹಳೆಯ ಪದ್ದತಿ ಕಡೆಗೆ ಹೋಗುವಂತೆ ಮಾಡಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಯುಪಿಐ ಪಾವತಿಗೆ ಶುಲ್ಕ: ಕೇಂದ್ರದ ಸಚಿವರಿಗೆ ಪಿಕ್ ಪಾಕೆಟ್ ನಲ್ಲಿ PHD; ವಿದೇಶಿ ವ್ಯಾಪಾರಿಗಳಿಗೆ ಅನುಕೂಲ; CM ವ್ಯಂಗ್ಯ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ — online desk
Published On :

ಕಲಬುರ್ಗಿ: "ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಶಿಕ್ಷಕರಿಗೆ Tr. ಎಂಜಿನಿಯರ್ ಗಳಿಗೆ Er. ಪದನಾಮ ನೀಡಿರುವಂತೆ ಕೇಂದ್ರ ಸರ್ಕಾರದ ಎಲ್ಲಾ ಸಚಿವರಿಗೂ ಪಿಕ್ ಪಾಕೆಟ್ ನಲ್ಲಿ ಪಿಎಚ್ ಡಿ ನೀಡಬೇಕಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದರು.

ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಶಿವಕುಮಾರ್ ಅವರು ಗುರುವಾರ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.

"ನಮ್ಮೆಲ್ಲ ವರ್ತಕರು ಈಗ ಕೇಂದ್ರ ವಿಧಿಸಲು ಹೊರಟಿರುವ ಯುಪಿಐ ಶುಲ್ಕದ ಭಾರವನ್ನ ಗ್ರಾಹಕರ ಮೇಲೆ ಹಾಕುತ್ತಾರೆ. ಇದು ಕೇಂದ್ರ ಸರ್ಕಾರದಿಂದ ಜನಸಾಮಾನ್ಯರ ಹೊಸ ಪಿಕ್ ಪಾಕೆಟ್‌. ನಾನು ಇದನ್ನು ಖಂಡಿಸುತ್ತೇನೆ‌. ಯಪಿಐ ಶುಲ್ಕ ಜಾರಿಯ ವಿರುದ್ದ ವಿರುದ್ಧ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಹೊರಗಿನ ದೇಶದ ವರ್ತಕರಿಗೆ ಅನುಕೂಲ ಮಾಡಿಕೊಡಲು ಇಂಥ ಘೋರ ತೀರ್ಮಾನ ಮಾಡಲಾಗಿದೆ. ಇದನ್ನು ವಾಪಸ್ಸು ಪಡೆದು ಮೊದಲಿನ ಸ್ಥಿತಿಯನ್ನೇ ತರಲು ಒತ್ತಾಯ ಮಾಡುತ್ತೇವೆ" ಎಂದರು.

"ಯಾವ ಕಾರಣಕ್ಕೆ ಕ್ಯಾಶ್ ಲೆಸ್ ಇಂಡಿಯಾ ಎಂದು ಅವರು ಕರೆದರು. ನೋಟು ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಈಗ ಮತ್ತೆ ಹಳೆಯ ಪದ್ದತಿ ಕಡೆಗೆ ಹೋಗುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಎನ್ ಪಿಸಿಐ (NPCI) ತೆರಿಗೆ ರಹಿತ ಲಾಭವೇ 6,119 ಕೋಟಿ" ಎಂದು ಹೇಳಿದರು.

ಕುಮಾರಸ್ವಾಮಿ ಅವರ ಬಳಿ ಮಾತನಾಡುವೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಕೇಳಿದಾಗ ಬಗ್ಗೆ “ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ. ಅವರಿಗೆ ಎಲ್ಲಿ ಬೇಕೋ ಅಲ್ಲಿ ಜಾಗ ಕೊಡೋಣ” ಎಂದು ಇದೇ ವೇಳೆ ತಿಳಿಸಿದರು.

ಬಿಜೆಪಿಯವರಿಗೆ ರಾಜಕೀಯವೇ ಮುಖ್ಯ

“ಬಿಜೆಪಿಯವರಿಗೆ ರಾಜಕೀಯವೇ ಮುಖ್ಯ. ರೈತರು ಹಾಗೂ ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ವಿಧಾನಮಂಡಲದ ಅಧಿವೇಶನವನ್ನು ನಡೆಸಲು ಕೂಡ ಬಿಡಲಿಲ್ಲ. ಆ ಪಕ್ಷದ ಶಾಸಕರೇ ನಮ್ಮ ಬಳಿ ಬಂದು ಗೋಳು ತೋಡಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಲಿ ಎಂದು ತೀರ್ಮಾನಿಸಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಕಸ್ತೂರಿ ರಂಗನ್ ವರದಿ, ಬರಗಾಲ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು. ಇದನ್ನು ಬಿಟ್ಟರೆ ಬೇರೆ ಯಾವ ಚರ್ಚೆಯೂ ನಡೆಯುವುದಿಲ್ಲ” ಎಂದು ಸಿಎಂ ಟೀಕಾಪ್ರಹಾರ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.