ರಾಜ್ಯ

2028ಕ್ಕೂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ? ನೊಣವಿನಕೆರೆ ಅಜ್ಜಯ್ಯ ಭವಿಷ್ಯ!

ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಪ್ರಾರ್ಥನೆ ಈಡೇರಿದ ಹಿನ್ನಲೆ ಮುಕ್ತಿ ಮಂದಿರದಲ್ಲಿ ಅರ್ಧ ಗಂಟೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ.

2028ಕ್ಕೂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ? ನೊಣವಿನಕೆರೆ ಅಜ್ಜಯ್ಯ ಭವಿಷ್ಯ!
Published On :

ಗದಗ: ಸಿಎಂ ಡಿಕೆ ಶಿವಕುಮಾರ್ ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರದ ಲಿಂಗೈಕ್ಯ ವೀರಗಂಗಾಧರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಪೂಜೆ ಪ್ರಾರ್ಥನೆ ಸಲ್ಲಿಸಿದರು.

ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಪ್ರಾರ್ಥನೆ ಈಡೇರಿದ ಹಿನ್ನಲೆ ಮುಕ್ತಿ ಮಂದಿರದಲ್ಲಿ ಅರ್ಧ ಗಂಟೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ, ಗದಗ ಜಿಲ್ಲೆಗೆ ಬರಗಾಲದ ಪ್ರವಾಸಕ್ಕೆ ಬಂದಿದ್ದೆ. ರಾಜ್ಯಾದ್ಯಂತ ಮಳೆ ಬೆಳೆ ಆಗಬೇಕು. ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಬರ ಇದೆ, ಹೀಗಾಗಿ ಇಲ್ಲೇ ಬರಬೇಕು ಅಂತ ಬಂದಿದ್ದೀನಿ ಎಂದರು.

ಹತ್ತಿ, ಮೆಣಸಿನಕಾಯಿ ,ಕಡಲೆ ಕಾಯಿ, ಯಾವ ಬೆಳೆಗಳೂ ರೈತರ ಕೈಗೆ ಸಿಗ್ತಾ ಇಲ್ಲ. ಬರುವಾಗ ಹೆಲಿಕಾಪ್ಟರ್ ನಲ್ಲಿ ನೋಡ್ತಾ ಬಂದೆ, ಎಲ್ಲಾ ಹೊಲ ಖಾಲಿ ಇದೆ. ಭೀಕರ ಬರಗಾಲ ಇದೆ. ಆಲಮಟ್ಟಿ ಬಿಟ್ಟರೆ ಎಲ್ಲೂ ನೀರಿಲ್ಲ. ನನಗೆ ಮುಕ್ತಿ ಮಂದಿರ ಹೃದಯಕ್ಕೆ ಹತ್ತಿರದವಾದ ಸ್ಥಳ, ವೀರ ಗಂಗಾದರ ಅಜ್ಜನವರ ಐಕ್ಯ ಸ್ಥಳ.

ಇದೆಲ್ಲಾ ನಮ್ಮ ಧರ್ಮ. ಎಲ್ಲಾ ಧರ್ಮನೂ ಕಾಪಾಡಬೇಕು, ಅವರವರ ಧರ್ಮ ಅವರನ್ನ ಕಾಪಾಡಬೇಕು. ಬಹಳ ವಿಶೇಷವಾಗಿ ಕಾಡಸಿದ್ದೇಶ್ವರ ಮಠದ ಶ್ರೀಗಳು, ಶಾಸಕರು, ಸ್ಥಳೀಯ ಶಾಸಕರು ಎಲ್ಲ ಬಂದಿದ್ದರು. ಬಿಲ್ಪತ್ರೆ ಹಾಕಿ ಪ್ರಾರ್ಥನೆ ಮಾಡಿದೆವು. ರಾಜ್ಯಕ್ಕೆ ಒಳ್ಳೆಯ ಮಳೆ ಬೆಳೆ ಆಗಬೇಕು ಅಂತ ಪ್ರಾರ್ಥನೆ ಮಾಡಿದ್ದೀನಿ ಎಂದು ತಿಳಿಸಿದರು.

ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಜ್ಜಯ್ಯ, ಡಿಕೆಶಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಸ್ಥಾನದ ಕುರಿತಂತೆ ನೊಣವಿನಕೆರೆ ಅಜ್ಜಯ್ಯ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2028 ರಿಂದ ಮುಂದಿನ 8-10 ವರ್ಷಗಳ ಕಾಲ ಡಿಕೆಶಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಅಂತ ನೊಣವಿನಕೆರೆ ಅಜ್ಜಯ್ಯ ಹೇಳಿದ್ದಾರೆ. ಡಿಕೆಶಿ ಪೂಜೆ ಬಳಿಕ‌ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಈ ಭವಿಷ್ಯ ನುಡಿದರು.

ಡಿಕೆ ಶಿವಕುಮಾರ್ ಆರೋಗ್ಯ, ಆಯುಷ್ಯ ಹಾಗೂ ಮುಂದಿನ ಅಭಿವೃದ್ಧಿಗೆ ಸಂಕಲ್ಪ‌ ಮಾಡಿದ್ದಾರೆ. ಅಷ್ಟೋತ್ತರ ಪೂಜೆ, ‌ಆರೋಗ್ಯ ಭಾಗ್ಯದ ಸಂಕಲ್ಪ ಮಾಡಿದ್ದಾರೆ. ರಾಜಾ ಪ್ರತ್ಯಕ್ಷ ದೇವತಾ ಮುಂದಿನ‌ 2028 ರಿಂದ ಆಳ್ವಿಕೆಯಲ್ಲಿ ಡಿಕೆಶಿ ಇರುವಂತೆ ಪೂಜೆ ಮಾಡಲಾಗಿದೆ ಅಂತ ಹೇಳಿದ್ರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.