ರಾಜ್ಯ

ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳು ಬಂದ್? ಈ ಎರಡು ದಿನ ನಗರದಲ್ಲಿ ನಾನ್‌ವೆಜ್ ಸಿಗೋದು ಡೌಟ್! ಯಾಕೆ ಗೊತ್ತಾ?

ಬೆಂಗಳೂರಿನಲ್ಲಿ ಮಾಂಸದ ಅಂಗಡಿಗಳು ಬಂದ್? ರಾಜಧಾನಿಯ ಮಾಂಸಾಹಾರ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್; ಈ ಎರಡು ದಿನ ನಗರದಲ್ಲಿ ಸಾವಿರಾರು ಚಿಕನ್ ಅಂಗಡಿಗಳು ಬಂದ್ ಆಗಲಿದೆ. ಮಾಂಸ ತ್ಯಾಜ್ಯಕ್ಕೆ ಶುಲ್ಕ ವಿರೋಧಿಸಿ ಫ್ರೀಡಂ ಪಾರ್ಕ್ ಚಲೋ: ನಗರದಲ್ಲಿ ನಾನ್‌ವೆಜ್ ಸಿಗೋದು ಡೌಟ್! ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳು ಬಂದ್? ಈ ಎರಡು ದಿನ ನಗರದಲ್ಲಿ ನಾನ್‌ವೆಜ್ ಸಿಗೋದು ಡೌಟ್! ಯಾಕೆ ಗೊತ್ತಾ?
ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! — Online Desk
Published On :

ಬೆಂಗಳೂರು: ರಾಜಧಾನಿಯ ಮಾಂಸಾಹಾರ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್; ಅದುವೇ, ಇದೇ ತಿಂಗಳ 3 ಹಾಗೂ 4 ರಂದು ನಗರದಲ್ಲಿ ಸಾವಿರಾರು ಚಿಕನ್ ಅಂಗಡಿಗಳು ಬಂದ್ ಆಗಲಿದೆ. ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (BSWML) ಜಾರಿಗೆ ತಂದಿರುವ ಕೋಳಿ ತ್ಯಾಜ್ಯ ಸಂಗ್ರಹಣೆ ನಿಯಮ ಹಾಗೂ ಶುಲ್ಕ ನೀತಿಯನ್ನು ವಿರೋಧಿಸಿ, ನಗರದ 6 ರಿಂದ 7 ಸಾವಿರ ಚಿಕನ್ ಅಂಗಡಿ ಮಾಲೀಕರು ಎರಡು ದಿನಗಳ ಕಾಲ ಬಂದ್ ಆಚರಿಸಲು ನಿರ್ಧರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ಬೆಂಗಳೂರಿನಲ್ಲಿ ಕೋಳಿ ಮಾಂಸ ತ್ಯಾಜ್ಯ (ಕೋಳಿ ಪುಕ್ಕ, ಮೂಳೆ ಇತ್ಯಾದಿ) ಸಂಗ್ರಹಣೆ ಹಾಗೂ ವಿಲೇವಾರಿ ವಿಚಾರವಾಗಿ ಮಾಂಸದ ವ್ಯಾಪಾರಿಗಳು ಮತ್ತು BSWML ನಡುವೆ ಭಾರಿ ಸಂಘರ್ಷ ಶುರುವಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮಾಂಸ ತ್ಯಾಜ್ಯ ಸಂಗ್ರಹಿಸಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಆದರೆ ಈ ಖಾಸಗಿ ಏಜೆನ್ಸಿಗಳು ಅಂಗಡಿ ಮಾಲೀಕರಿಂದ ಪ್ರತಿ ಕೆಜಿ ತ್ಯಾಜ್ಯಕ್ಕೆ 5 ರೂಪಾಯಿ ಶುಲ್ಕ ವಸೂಲಿ ಮಾಡುತ್ತಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮುಂದುವರೆದು, ಮಾಂಸದ ತ್ಯಾಜ್ಯವು ಅನುಪಯುಕ್ತ ವಸ್ತುವಲ್ಲ, ಬದಲಿಗೆ ಅದನ್ನು ಸಾಕುಪ್ರಾಣಿಗಳ ಆಹಾರ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ಕಚ್ಚಾವಸ್ತುವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ತ್ಯಾಜ್ಯದಿಂದ ಖಾಸಗಿ ಕಂಪನಿಗಳು ಲಾಭ ಗಳಿಸುತ್ತಿರುವಾಗ, ನಮ್ಮಿಂದಲೇ ಸಂಗ್ರಹಣಾ ಶುಲ್ಕ ವಸೂಲಿ ಮಾಡುವುದು ಎಷ್ಟು ಸರಿ ಎಂಬುದು ಅಂಗಡಿ ಮಾಲೀಕರ ಪ್ರಶ್ನೆಯಾಗಿದೆ. ವಾಣಿಜ್ಯ ಮೌಲ್ಯವಿರುವ ಈ ಕಚ್ಚಾವಸ್ತುವಿಗೆ ಕಂಪನಿಗಳೇ ನಮಗೆ ಹಣ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್!
ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! — Online Desk

ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ!

ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನಗರದ ಮಾಂಸದ ಅಂಗಡಿಗಳನ್ನು ಎರಡು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲು ವ್ಯಾಪಾರಿಗಳ ಸಂಘಟನೆಗಳು ನಿರ್ಧರಿಸಿವೆ. ಇದರ ಜೊತೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘಟನೆ ತಿಳಿಸಿದೆ. ಇದರಿಂದ ಗ್ರಾಹಕರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ಕೋಳಿ ಮಾಂಸದ ತೀವ್ರ ಕೊರತೆ ಎದುರಾಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ, ಈ ಬಂದ್ ಜಾರಿಯಾದರೆ ಬೆಂಗಳೂರಿನಾದ್ಯಂತ ಚಿಕನ್, ಮಟನ್ ಸೇರಿದಂತೆ ತಾಜಾ ಮಾಂಸದ ಲಭ್ಯತೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.