ಕಾಂಗ್ರೆಸ್ ಕೈಗೆ ದೇಶದ ಚುಕ್ಕಾಣಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನದಲ್ಲಿ ವಿಲೀನವಾಗುತ್ತೆ: ಸಿ.ಸಿ ಪಾಟೀಲ್
ಎಸ್‌ಐಆರ್, ಇವಿಎಮ್ ಮಷಿನ್ ಬಗ್ಗೆ ಕಾಂಗ್ರೆಸ್‌ನಿಂದ ಅಪಸ್ವರ ಕೇಳಿಬರುತ್ತಿದೆ. 133 ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಇವಿಎಮ್ ಮಷಿನ್ ವರ್ಕ್ ಸರಿಯಾಗಿತ್ತಾ?

ಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ ಎಂದು ಮಾಜಿ ಸಚಿವ ಸಿ.ಸಿ ಪಾಟೀಲ್ ಲೇವಡಿ ಮಾಡಿದ್ದಾರೆ.
ಗದಗದಲ್ಲಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ವೈಫಲ್ಯ ಮರೆಮಾಚಲು ಎಸ್‌ಐಆರ್, ಇವಿಎಮ್ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡ್ತಾರೆ. ಬರ ಪರಿಹಾರಎ ಎಂದು ರೈತರಿಗೆ 2500 ರೂ. ಬೃಹತ್ ಘೋಷಣೆ ಮಾಡಿದ್ದಾರೆ. ಇದು ಜಗತ್ತಿನಲ್ಲಿ 8ನೇ ಅದ್ಭುತ. ಇದೊಂದು ರೈತ ಪರ ಸರ್ಕಾರ ಎಂದು ಟೀಕಿಸಿದರು.
ಡಿ.ಕೆ ಶಿವಕುಮಾರ್ ಆಡಳಿತ ವೈಫಲ್ಯತೆ ಕಂಡಿದೆ. ಪ್ಲೇನ್ ಟೆಕ್ ಆಫ್ ಆಗುವ ಹಂತದಲ್ಲಿಲ್ಲ. ರನ್-ವೇಗೆ ಬಂದು ನಿಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಎಸ್‌ಐಆರ್, ಇವಿಎಮ್ ಮಷಿನ್ ಬಗ್ಗೆ ಕಾಂಗ್ರೆಸ್‌ನಿಂದ ಅಪಸ್ವರ ಕೇಳಿಬರುತ್ತಿದೆ. 133 ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಇವಿಎಮ್ ಮಷಿನ್ ವರ್ಕ್ ಸರಿಯಾಗಿತ್ತಾ? ಎಮ್‌ಪಿ ಎಲೆಕ್ಷನ್‌ನಲ್ಲಿ ಸೋತಾಗ ಸರಿ ಇರಲಿಲ್ವಾ? ರಾಜ್ಯ ಸರ್ಕಾರಕ್ಕೆ ಆಲೋಚನಾ ಶಕ್ತಿ ಇರಬೇಕು. ಎಲ್ಲಾ ರಾಜ್ಯದ ಸಿಎಂ ಎಲ್ಲಾ ಬಲ್ಲವರು ಇರೋದಿಲ್ಲ. ಅದಕ್ಕೆ ತಾಂತ್ರಿಕ ಸಿಬ್ಬಂದಿ ಸಮಿತಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



