ಹೆಬ್ಬಾಳ ಕೆರೆಗೆ ಯಾವುದೇ ಹಾನಿ ಇಲ್ಲ; 1,072 ಮರಗಳ ಸ್ಥಳಾಂತರ: BDA
ಹೆಬ್ಬಾಳ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ 1,000ಕ್ಕೂ ಹೆಚ್ಚು ಮರಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಪರಿಸರವಾದಿಗಳು ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಳವಳ ವ್ಯಕ್ತಪಡಿಸಿವೆ.

ಬೆಂಗಳೂರು: ಹೆಬ್ಬಾಳದ ಸಂಚಾರಿ ದಟ್ಟಣೆ ನಿವಾರಣೆಗೆ ಮೇಖ್ರಿ ವೃತ್ತದಿಂದ ಹೆಬ್ಬಾಳದವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ಕಿರು ಸುರಂಗ ರಸ್ತೆ ಮತ್ತು ಎಲಿವೇಟೆಡ್ ರಸ್ತೆ (ಮೆಲ್ಸೇತುವೆ) ಯೋಜನೆಯಿಂದ
ಹೆಬ್ಬಾಳ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ 1,000ಕ್ಕೂ ಹೆಚ್ಚು ಮರಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಪರಿಸರವಾದಿಗಳು ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಳವಳ ವ್ಯಕ್ತಪಡಿಸಿವೆ.
ಈ ನಡುವೆಯೇ ಹೆಬ್ಬಾಳ-ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆ/ಜಿಕೆವಿಕೆ (GKVK) ಪಶುವೈದ್ಯಕೀಯ ಕ್ಯಾಂಪಸ್‌ವರೆಗಿನ 2.28 ಕಿ.ಮೀ ಉದ್ದದ ಕಿರು ಸುರಂಗ ಮಾರ್ಗದ ಕಾಮಗಾರಿಯನ್ನು ಪ್ರಾರಂಭಿಸಲು ಬಿಡಿಎ ಸಜ್ಜಾಗಿದೆ. ಇದರೊಂದಿಗೆ, ಯುಎಎಸ್ (UAS) ಸಿಬ್ಬಂದಿ ವಸತಿಗೃಹ/ಪಶುವೈದ್ಯಕೀಯ ಕಾಲೇಜಿನಿಂದ ಮೆಖ್ರಿ ವೃತ್ತದವರೆಗಿನ 1.78 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ (elevated corridor) ಯೋಜನೆಯೂ ಶೀಘ್ರದಲ್ಲೇ ಆರಂಭವಾಗಲಿದೆ.
ಐಐಟಿ ಬಾಂಬೆ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ ಬಿಡಿಎ ಅಧಿಕಾರಿಗಳು, ಎಲಿವೇಟೆಡ್ ಕಾರಿಡಾರ್ ಮತ್ತು ಅಂಡರ್‌ಪಾಸ್ (ಕಿರು ಸುರಂಗ) ಪರಸ್ಪರ ಪೂರಕವಾಗಿದ್ದು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಭಾಗವಾಗಿ ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
"ಸಂಚಾರ ದಟ್ಟಣೆ ಕುರಿತಾದ ಪರಿಶೀಲನೆಯಲ್ಲಿ ಪ್ರಸ್ತಾವಿತ ಕಿರು ಸುರಂಗ ಮಾರ್ಗದಿಂದ ಈಗಾಗಲೇ ಇರುವ ಸಂಪರ್ಕ ರಸ್ತೆಗಳು ಮತ್ತು ಪಕ್ಕದ ಜಂಕ್ಷನ್‌ಗಳ ಮೇಲೆ ಬೀರಬಹುದಾದ ಪರಿಣಾಮವನ್ನು ಪರಿಗಣಿಸಲಾಗಿದೆ. ಹೆಬ್ಬಾಳ ಜಂಕ್ಷನ್‌ನಲ್ಲಿರುವ ದಟ್ಟಣೆಯ ಸಮಸ್ಯೆಯನ್ನು (bottleneck) ಬಗೆಹರಿಸಿ ಸಂಚಾರವನ್ನು ಸುಧಾರಿಸುವುದು ಮತ್ತು ಸುತ್ತಮುತ್ತಲಿನ ರಸ್ತೆ ಜಾಲದೊಂದಿಗೆ ಸುಗಮ ಸಂಪರ್ಕವನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ಸೂಕ್ತವಾದ ಸಂಪರ್ಕ ರಸ್ತೆ ವಿನ್ಯಾಸ, ಲೇನ್ ವ್ಯವಸ್ಥೆ, ಜಂಕ್ಷನ್ ನಿರ್ವಹಣೆ, ಸಂಚಾರ ನಿಯಂತ್ರಣ ಮತ್ತು ಇತರ ಸಂಚಾರ ನಿರ್ವಹಣಾ ಕ್ರಮಗಳೊಂದಿಗೆ ಈ ಸುರಂಗವನ್ನು ಯೋಜಿಸಲಾಗುತ್ತಿದೆ ಎಂದು ಬಿಡಿಎಯ ಹಿರಿಯ ಎಂಜಿನಿಯರ್ ಒಬ್ಬರು ಹೇಳಿದರು.
ಕೆಐಎ (KIA) ಕಡೆಯಿಂದ ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳ ಪ್ರಮಾಣವು (Passenger Car Unit) ಗರಿಷ್ಠ ದಟ್ಟಣೆಯ ಸಮಯದಲ್ಲಿ 0.5% ರಷ್ಟಿರಬೇಕಿತ್ತು, ಆದರೆ ಅದು ಈಗಾಗಲೇ 2.85% ರಷ್ಟನ್ನು ಮೀರಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಅವರು ಹೇಳಿದರು.

ಹೆಬ್ಬಾಳ ಕೆರೆಗೆ ಉಂಟಾಗಬಹುದಾದ ಹಾನಿಯ ಕುರಿತು ಪ್ರತಿಕ್ರಿಯಿಸಿದ ಬಿಡಿಎ, ಸುರಂಗ ಮಾರ್ಗ ಕೆರೆ ಹತ್ತಿರದಲ್ಲಿ ಎಲ್ಲೂ ಹಾದುಹೋಗುವುದಿಲ್ಲ ಮತ್ತು ಕೆರೆಯ ಅಂಗಳದ ಕೇವಲ 500 ಮೀಟರ್ ಪ್ರದೇಶವನ್ನು ಮಾತ್ರ ಮೂಲಸೌಕರ್ಯ ಹಾಗೂ ಇತರ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವುದು, ಬಳಕೆಯ ನಂತರ ಆ ಪ್ರದೇಶವನ್ನು ಒಂದು ವರ್ಷದೊಳಗೆ ಪುನಃಸ್ಥಾಪಿಸಲಾಗುವುದು. ಭೂಗತ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ನಾವು ಕೆರೆಯ ಅಂಗಳದಲ್ಲಿ ಪೀಜೋಮೀಟರ್‌ಗಳನ್ನು (piezometers) ಅಳವಡಿಸುತ್ತೇವೆ. ಸುರಂಗ ಪ್ರದೇಶಕ್ಕೆ ನೀರು ನುಗ್ಗಿದ ಸಂದರ್ಭದಲ್ಲಿ ಅದನ್ನು ಹೊರಹಾಕಲು ಬಿಡಿಎ 16 ಮೋಟಾರ್‌ಗಳನ್ನು (5 HP ಸಾಮರ್ಥ್ಯದ) ನಿಯೋಜಿಸಲಿದೆ," ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



