'ವಿಶ್ವಗುರು ಮೋದಿಯವರಿಗೆ ಯುದ್ಧ ನಿಲ್ಲಿಸಿ ಇಂಧನ ಬೆಲೆ ಇಳಿಕೆ ಮಾಡಲು ಏಕೆ ಆಗುತ್ತಿಲ್ಲ': ಸಚಿವ ಪ್ರಿಯಾಂಕ್ ಖರ್ಗೆ; Video
ದೇಶದಲ್ಲಿ ಇಷ್ಟೊಂದು ಸಮಸ್ಯೆಯಿರುವಾಗ ಪ್ರಧಾನ ಮಂತ್ರಿಗಳು ವಿದೇಶಗಳಿಗೆ ಹೋಗುತ್ತಾರೆ, ರೀಲ್ಸ್ ಮಾಡುತ್ತಾರೆ, ಹೋದಲ್ಲೆಲ್ಲಾ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ, ನಮಗೆ ಒಳ್ಳೆಯದಾಗಿದೆ ಎಂದು ಹೇಳುತ್ತಾರೆ,ಆದರೆ ಅದು ಜನರ ಕಣ್ಣಿಗೆ ಏಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚಿನ ಇಂಧನ ದರ ಏರಿಕೆಯನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಟೀಕಿಸಿದ್ದಾರೆ, ಜಾಗತಿಕ ನಾಯಕರೊಂದಿಗೆ ರೀಲ್ಸ್ ಮಾಡುತ್ತಿರುವ “ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್” ಆಗಿ ಪ್ರಧಾನಿ ಬದಲಾಗಿದ್ದಾರೆ ಎಂದು ಹೇಳಿದ್ದಾರೆ. ಜನರು ದುಬಾರಿ ದರ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ದೇಶದ ಪ್ರಧಾನಿಯಿಂದ ಈ ರೀತಿಯ ವರ್ತನೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇಷ್ಟೊಂದು ಸಮಸ್ಯೆಯಿರುವಾಗ ಪ್ರಧಾನ ಮಂತ್ರಿಗಳು ವಿದೇಶಗಳಿಗೆ ಹೋಗುತ್ತಾರೆ, ರೀಲ್ಸ್ ಮಾಡುತ್ತಾರೆ, ಹೋದಲ್ಲೆಲ್ಲಾ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ, ನಮಗೆ ಒಳ್ಳೆಯದಾಗಿದೆ ಎಂದು ಹೇಳುತ್ತಾರೆ, ಅದೇ ರೀತಿ ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಆದರೆ ಅದು ಜನರ ಕಣ್ಣಿಗೆ ಏಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.
ಇಂದು ವಾರಕ್ಕೆ ಮೂರನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ ಅಂದರೆ ಏನರ್ಥ, ಇವರ ಆರ್ಥಿಕ ನೀತಿಗಳು ವಿಫಲವಾಗಿದೆ ಎಂದು ಎದ್ದುಕಾಣುತ್ತಿದೆ, ವಿದೇಶಗಳ ನಾಯಕರು ಉತ್ತಮ ಸ್ನೇಹಿತರು ಎನ್ನುತ್ತಾರೆ, ಆದರೆ ಅದರಿಂದ ನಮ್ಮ ರಾಷ್ಟ್ರಕ್ಕೆ, ಜನರಿಗೆ ಏನು ಉಪಯೋಗವಾಗಿ ಎಂದು ಕೇಳಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಗಳೆಲ್ಲಾ ಹೆಚ್ಚಾಗುತ್ತಿದೆ. ಜನ ತೀವ್ರ ಸಂಕಷ್ಟಕ್ಕೀಡಾಗಿದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಮೋದಿಯವರು ಬೇಕು, ಇಡೀ ವಿಶ್ವ ವಿಶ್ವಗುರು ಮೋದಿಯರವರತ್ತ ನೋಡುತ್ತಿದೆ ಎಂದು ಮೋಹನ್ ಭಾಗವತ್ ಹೇಳುತ್ತಾರೆ. ಆರ್ ಎಸ್ ಎಸ್ , ದೇಶಪ್ರೇಮಿಗಳು ಈಗ ಎಲ್ಲಿಗೆ ಹೋದರು, ಮೋದಿಯವರಿಂದ ಇಂದು ಯುದ್ಧ ನಿಲ್ಲಿಸಲು ಸಾಧ್ಯವಾಗಿದೆಯೇ ಎಂದು ಟೀಕಿಸಿದರು.
SIR ಬಿಜೆಪಿ ಗೆಲುವಿಗೆ ಸಾಧನ
ಎಸ್ ಐಆರ್ ನ್ನು ಬಿಜೆಪಿ ಗೆಲುವಿನ ಸಾಧನವಾಗಿ ಬಳಸಲಾಗುತ್ತಿದೆ. ಇದೊಂದು ಗಂಭೀರ ಪ್ರಕ್ರಿಯೆ, ಭಾರತೀಯ ಚುನಾವಣಾ ಮುಖ್ಯಸ್ಥರು ಬಿಜೆಪಿಯ ಕೈಗೊಂಬೆ. ಅವರು ಬಿಜೆಪಿ, ಆರ್ ಎಸ್ ಎಸ್ ಸದಸ್ಯತ್ಯ ತೆಗೆದುಕೊಳ್ಳುವುದು ಒಳಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



