ಬೆಂಗಳೂರು To ಮುಂಬೈ ನಡುವೆ ಎಕ್ಸ್‌ಪ್ರೆಸ್ ರೈಲಿಗೆ ಸಚಿವ ವಿ ಸೋಮಣ್ಣ ಚಾಲನೆ; Video
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್‌ಗೆ ವಾರಕ್ಕೆರಡು ಬಾರಿ ಸಂಚರಿಸುವ ನೂತನ ರೈಲಿಗೆ ಇಂದು ಭಾನುವಾರ ಬೆಳಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಚಾಲನೆ ನೀಡಿದರು.

ಬೆಂಗಳೂರು: ಬೆಂಗಳೂರು-ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ.
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್‌ಗೆ ವಾರಕ್ಕೆರಡು ಬಾರಿ ಸಂಚರಿಸುವ ನೂತನ ರೈಲಿಗೆ ಇಂದು ಭಾನುವಾರ ಬೆಳಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಚಾಲನೆ ನೀಡಿದರು.
ಈ ರೈಲು ಬೆಂಗಳೂರಿನ ಎಸ್‌ಎಂವಿಟಿ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ನಿಲುಗಡೆ ಹೊಂದಿದೆ. ಸದ್ಯ 22 ಗಂಟೆ ಪ್ರಯಾಣ ಅವಧಿ ತಗಲುತ್ತಿದೆ. ಮುಂದೆ ರೈಲು ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.
ಮೇ ಕೊನೆಯ ವಾರದಿಂದ ಅಧಿಕೃತ ಸಂಚಾರ
ಮೇ 23 ರಿಂದ ರೈಲು ಸಂಖ್ಯೆ 16553 ಎಸ್ಎಂವಿಟಿ ಬೆಂಗಳೂರು – ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸಲಿದೆ. ಪ್ರತಿ ಮಂಗಳವಾರ, ಶನಿವಾರ ವಾರಕ್ಕೆ ಎರಡು ಬಾರಿ ಸಂಚರಿಸುತ್ತದೆ.
ಮೇ 24 ರಿಂದ ರೈಲು ಸಂಖ್ಯೆ 16554 ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ – ಎಸ್ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು ಪ್ರಾರಂಭವಾಗಲಿದೆ. ಪ್ರತಿ ಭಾನುವಾರ, ಬುಧವಾರ ಲಭ್ಯವಿದೆ.
ಬೆಂಗಳೂರು - ಮುಂಬೈ ರೈಲಿನ ಟಿಕೆಟ್ ದರ
ಸ್ಲೀಪರ್ - 580 ರೂ.
3 ಎಸಿ - 1510 ರೂ.
2 ಎಸಿ - 2155 ರೂ.
ಬೆಂಗಳೂರು To ಮುಂಬೈ ವೇಳಾಪಟ್ಟಿ
ಎಸ್‌ಎಂವಿಟಿ ಬೆಂಗಳೂರು: ರಾತ್ರಿ 8.35
ದಾವಣಗೆರೆ: ಮಧ್ಯರಾತ್ರಿ 01:23
ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್: 03:30
ಧಾರವಾಡ: 04:03
ಬೆಳಗಾವಿ: ಬೆಳಿಗ್ಗೆ 06:45
ಮಿರಜ್ ಜಂಕ್ಷನ್: 10:45
ಸಾಂಗ್ಲಿ: 11:02
ಕರಾಡ್: 12:02
ಸತಾರಾ: ಮಧ್ಯಾಹ್ನ 1:07
ಲೋನಂದ್: 2:17
ಪುಣೆ: ಸಂಜೆ 4:50
ಲೋನಾವಾಲಾ: 5:53
ಕರ್ಜತ್: 6:37
ಕಲ್ಯಾಣ್: 7:27
ಥಾಣೆ: 7:52
ಲೋಕಮಾನ್ಯ ತಿಲಕ್ ಟರ್ಮಿನಸ್: ರಾತ್ರಿ 8:40
ಮುಂಬೈ TO ಬೆಂಗಳೂರು ವೇಳಾಪಟ್ಟಿ
ಲೋಕಮಾನ್ಯ ತಿಲಕ್ ಟರ್ಮಿನಸ್: ರಾತ್ರಿ 11.15
ಥಾಣೆ: 11:27
ಕಲ್ಯಾಣ್: 00:02
ಕರ್ಜತ್: 00:55
ಲೋನಾವಾಲಾ: 01:52
ಪುಣೆ: 03:00
ಲೋನಂದ್: 04:43
ಸತಾರಾ: ಬೆಳಿಗ್ಗೆ 05:57
ಕರಾಡ್: 06:52
ಸಾಂಗ್ಲಿ: 08:22
ಮಿರಜ್ ಜಂಕ್ಷನ್: 09:25
ಬೆಳಗಾವಿ: 11:50
ಧಾರವಾಡ: ಮಧ್ಯಾಹ್ನ 1:53
ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್: 2:30
ದಾವಣಗೆರೆ: 4:20
ಎಸ್‌ಎಂವಿಟಿ ಬೆಂಗಳೂರು: ರಾತ್ರಿ 10:30
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



