ಕರ್ನಾಟಕ-ತಮಿಳುನಾಡು ಗಡಿ ಗ್ರಾಮದ ಬಳಿ ಚರಂಡಿಯಲ್ಲಿ 214 ಗುಂಡುಗಳು ಪತ್ತೆ: ತನಿಖೆಗೆ ಆದೇಶ
ಸೇತುವೆಯ ಕೆಳಭಾಗದಲ್ಲಿ ಪೊಲೀಸರಿಗೆ ಎಸ್‌ಎಲ್‌ಆರ್ ಅಥವಾ ಮೆಷಿನ್ ಗನ್‌ಗಳಿಗೆ ಬಳಸುವ ಮೂರು ಅಮ್ಯೂನೇಷನ್ ಬೆಲ್ಟ್ ಪತ್ತೆಯಾಗಿವೆ. ಇದರಲ್ಲಿ ಒಟ್ಟು 214 (51ಎಂ.ಎಂ) ಜೀವಂತ ಗುಂಡು ಹಾಗೂ 85 ನಿರ್ಜೀವ ಗುಂಡು ಪತ್ತೆಯಾಗಿದೆ.

ಕೆಜಿಎಫ್: ಕೆಜಿಎಫ್ ಜಿಲ್ಲೆಯ ದಾಸರಹಳ್ಳಿ ಗ್ರಾಮದ ಬಳಿಯ ದರಮಲ್ಲ ಸೇತುವೆಯ ಕೆಳಗಿನ ಚರಂಡಿಯಲ್ಲಿ ಬುಧವಾರ 214 ಬಳಸಿದ ಗುಂಡುಗಳು ಪತ್ತೆಯಾಗಿವೆ.
ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದವು ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ತಿಳಿಸಿದ್ದಾರೆ.
ಸೇತುವೆಯ ಕೆಳಭಾಗದಲ್ಲಿ ಪೊಲೀಸರಿಗೆ ಎಸ್‌ಎಲ್‌ಆರ್ ಅಥವಾ ಮೆಷಿನ್ ಗನ್‌ಗಳಿಗೆ ಬಳಸುವ ಮೂರು ಅಮ್ಯೂನೇಷನ್ ಬೆಲ್ಟ್ ಪತ್ತೆಯಾಗಿವೆ. ಇದರಲ್ಲಿ ಒಟ್ಟು 214 (51ಎಂ.ಎಂ) ಜೀವಂತ ಗುಂಡು ಹಾಗೂ 85 ನಿರ್ಜೀವ ಗುಂಡು ಪತ್ತೆಯಾಗಿದೆ. ಇವು 1969ರಲ್ಲಿ ಮಹಾರಾಷ್ಟ್ರದ ವಾರಂಗಾವ್ ಶಸ್ತಾಸ್ತ್ರಕಾರ್ಖಾನೆ ಯಲ್ಲಿ ತಯಾರಾಗಿರುವ ಗುಂಡುಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಐ ಶಿವಾಂಶು ಹೇಳಿದರು. ದಾಸರಹಳ್ಳಿ ಗ್ರಾಮವು ನೆರೆಯ ತಮಿಳುನಾಡಿನ ಗಡಿಯ ಬಳಿ ಇದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಪೊಲೀಸರು ಮತ್ತು ಸ್ಥಳೀಯರ ತಂಡವನ್ನು ರಚಿಸಲಾಗಿದೆ ಎಂದು ಶಿವಾಂಶು ಹೇಳಿದರು.
ಕೆಲವು ಮಾಜಿ ಸೈನಿಕರು ಅದನ್ನು ಚರಂಡಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ ಎಂದು ಅವರು ಹೇಳಿದರು. ಸೇತುವೆಯ ಕೆಳಗಿರುವ ಚರಂಡಿಯು ಜನಸಂದಣಿ ಕಡಿಮೆ ಇರುವ ಪಾಳುಬಿದ್ದ ಪ್ರದೇಶವಾಗಿದೆ. ಸ್ಥಳದ ಬಳಿ ಕೆಲವು ಕಸ ಕಂಡುಬಂದಿದೆ.
ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಆಂತರಿಕ ಭದ್ರತಾ ವಿಭಾಗದ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಮದ್ದುಗುಂಡುಗಳು ಎಲ್ಲಿಂದ ಬಂದವು ಮತ್ತು ಇಲ್ಲಿಗೆ ಹೇಗೆ ಸೇರಿದವು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



