ತೆರಿಗೆ ಬಾಕಿ ಪಾವತಿಸದವರಿಗೆ GBA ಶಾಕ್: 158 ಆಸ್ತಿಗಳ ಮುಟ್ಟುಗೋಲಿಗೆ ಮುಂದು..!
ಬಾಕಿದಾರರಿಗೆ ತೆರಿಗೆ ಪಾವತಿಸಲು ಹಲವು ಅವಕಾಶಗಳನ್ನು ನೀಡಿದ್ದರೂ, ಹಣ ಪಾವತಿಸದ ಕಾರಣ ಪಾಲಿಕೆಗಳು ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರ ಪಾಲಿಕೆಗಳು ಮುಂದಾಗಿದ್ದು, ಒಟ್ಟು 158 ಆಸ್ತಿಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದೆ.
ಬಾಕಿದಾರರಿಗೆ ತೆರಿಗೆ ಪಾವತಿಸಲು ಹಲವು ಅವಕಾಶಗಳನ್ನು ನೀಡಿದ್ದರೂ, ಹಣ ಪಾವತಿಸದ ಕಾರಣ ಪಾಲಿಕೆಗಳು ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ನಗರದ ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಪಾಲಿಕೆ ವ್ಯಾಪ್ತಿಗಳಲ್ಲಿ ಕ್ರಮವಾಗಿ 52, 55 ಮತ್ತು 51 ಆಸ್ತಿಗಳು ಗುರುತಿಸಲಾಗಿದ್ದು, ಹರಾಜಿನಲ್ಲಿ ಯಾರೂ ಮುಂದೆ ಬರದ ಆಸ್ತಿಗಳನ್ನು ನಿಗದಿತ ಕನಿಷ್ಠ ದರದಲ್ಲಿ (ಗೈಡನ್ಸ್ ಮೌಲ್ಯ ಆಧಾರಿತ) ಪಾಲಿಕೆಗಳೇ ಸ್ವತಃ ಖರೀದಿಗೆ ಮುಂದಾಗಿವೆ.
ಅಧಿಕಾರಿಗಳ ಪ್ರಕಾರ, ಬಾಕಿದಾರರಿಗೆ ಹಲವು ಬಾರಿ ನೋಟಿಸ್‌ಗಳು, ಆಸ್ತಿ ಜಪ್ತಿ ಎಚ್ಚರಿಕೆಗಳು ಮತ್ತು ಸಾರ್ವಜನಿಕ ಹರಾಜು ಸೂಚನೆಗಳನ್ನು ನೀಡಲಾಗಿತ್ತು. ಆದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಈ ಅಂತಿಮ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಆಸ್ತಿಗಳನ್ನು ಖರೀದಿಸಿದ ಬಳಿಕ, ಬಾಕಿ ತೆರಿಗೆ, ದಂಡ, ಬಡ್ಡಿ ಮತ್ತು ಆಡಳಿತ ವೆಚ್ಚಗಳನ್ನು ಕಡಿತಗೊಳಿಸಿ ಉಳಿದ ಹಣವನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ. ನಂತರ ಆಸ್ತಿಗಳ ಮಾಲೀಕತ್ವ ಸಂಪೂರ್ಣವಾಗಿ ಪಾಲಿಕೆಗಳಿಗೆ ವರ್ಗಾವಣೆಯಾಗುತ್ತದೆ ಮತ್ತು ದಾಖಲೆಗಳನ್ನು ನವೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಬಾಕಿದಾರರಿಗೆ ಇನ್ನೊಂದು ಅವಕಾಶ ನೀಡಲು ಪಾಲಿಕೆಗಳು ಒಂದು ತಿಂಗಳ ಗಡುವು ಘೋಷಿಸಿದ್ದು, ಈ ಅವಧಿಯಲ್ಲಿ ಬಾಕಿ ತೆರಿಗೆ ಪಾವತಿಸಿದರೆ ಆಸ್ತಿ ಸ್ವಾಧೀನ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಆಸ್ತಿಯನ್ನು ಮರುಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



