ರಾಜ್ಯ

News wrap 26-03-2026 | ಉಗ್ರ ನಂಟು: ಬಳ್ಳಾರಿ ಮೂಲದ ಯುವಕ ಸೇರಿ 12 ಮಂದಿ ಬಂಧನ; IPL: ನಮಗೆ ಒಂದೇ ಟಿಕೆಟ್ ಕೊಡ್ತಾರೆ, 5 ಬೇಕು- ಶಾಸಕರ ಆಗ್ರಹ; ಸಿಎಂ ಗೆ ಮತ್ತೆ ಮುಡಾ ತಲೆನೋವು!

News wrap 26-03-2026 | ಉಗ್ರ ನಂಟು: ಬಳ್ಳಾರಿ ಮೂಲದ ಯುವಕ ಸೇರಿ 12 ಮಂದಿ ಬಂಧನ; IPL: ನಮಗೆ ಒಂದೇ ಟಿಕೆಟ್ ಕೊಡ್ತಾರೆ, 5 ಬೇಕು- ಶಾಸಕರ ಆಗ್ರಹ; ಸಿಎಂ ಗೆ ಮತ್ತೆ ಮುಡಾ ತಲೆನೋವು!
ಸುದ್ದಿ ಮುಖ್ಯಾಂಶಗಳು — online desk
Published On :

1. IPL 2026: ನಮಗೆ ಒಂದೇ ಟಿಕೆಟ್ ಕೊಡ್ತಾರೆ, 5 ಬೇಕು- ಶಾಸಕರ ಆಗ್ರಹ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ವಿಧಾನಸಭೆಯಲ್ಲಿ ಟಿಕೆಟ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ. ಬಿಜೆಪಿ, ಕಾಂಗ್ರೆಸ್ ಶಾಸಕರೂ ಸಹ ಟಿಕೆಟ್​​ಗಾಗಿ ಒಕ್ಕೊರಲಿನಿಂದ ಮನವಿ ಮಾಡಿದರು. ಅಲ್ಲಿ ನಮಗೊಂದು ಪಾಸ್ ಕೊಡಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದರು. ಮೊನ್ನೆ 11 ಜನ ಸತ್ತಿದ್ದಾರೆ. ಜಾಗ ಕೊಟ್ಟಿರೋದು ಕ್ರಿಕೆಟ್ ಆಡೋಕೆ ಟ್ರೈನಿಂಗ್​ಗೆ. ಆದರೆ ಅಲ್ಲಿ ಎಣ್ಣೆ ಹೊಡೆಯೋಕೆ ಅನುಮತಿ ಕೊಟ್ಟಿದ್ದಾರೆ. ಅವರ ಬಳಿ ಸಾವಿರಾರು ಕೋಟಿ ರೂ ದುಡ್ಡಿದೆ. ಆದರೆ ನಾವು ಒಂದು ಟಿಕೆಟ್​​ಗೆ ಅಂಗಲಾಚಬೇಕು. ನನ್ನ ಹೆಸರಲ್ಲೇ ಟಿಕೆಟ್ ಕಳಿಸ್ತಾರೆ. ಅದರಲ್ಲಿ ನನ್ನ ಹೆಂಡ್ತಿನೂ ಕಳುಹಿಸೋಕೆ ಆಗಲ್ಲ, ಮಗನನ್ನು ಕಳಿಸೋಕೂ ಆಗಲ್ಲ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ನಾವು ವಿಐಪಿಗಳು, ಜನಸಾಮಾನ್ಯರಂತೆ ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ. ಹೀಗಾಗಿ ಶಾಸಕರ ಕುಟುಂಬಕ್ಕೆ ತಲಾ ಐದು IPL ಟಿಕೆಟ್ ನೀಡಬೇಕು ಎಂದು ಸದನದಲ್ಲಿಯೇ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಆಗ್ರಹಿಸಿದರು. ಕಡೆಗೆ, ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಸಮಯದಲ್ಲಿ ಪ್ರತಿಯೊಬ್ಬ ಶಾಸಕರಿಗೂ ನಾಲ್ಕು ವಿಐಪಿ ಟಿಕೆಟ್‌ಗಳು ಸಿಗುವಂತೆ ನೋಡಿಕೊಳ್ಳಬೇಕೆಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಗುರುವಾರ ಸರ್ಕಾರವನ್ನು ಕೇಳಿದರು.

2. IPL 2026: ನಮಗೆ ಒಂದೇ ಟಿಕೆಟ್ ಕೊಡ್ತಾರೆ, 5 ಬೇಕು- ಶಾಸಕರ ಆಗ್ರಹ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಬಿ-ರಿಪೋರ್ಟ್ ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಬಿ ಎಂ ಅವರಿಗೆ ನೋಟಿಸ್ ಜಾರಿ ಮಾಡಲು ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ. ಬಿ-ರಿಪೋರ್ಟ್ ಕುರಿತು ಲೋಕಾಯುಕ್ತ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯದಿಂದ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಕೋರಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಬಿ-ರಿಪೋರ್ಟ್ ನ್ನು ಪ್ರಶ್ನಿಸಿ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರು ನೋಟಿಸ್ ಜಾರಿ ಮಾಡಲು ಆದೇಶಿಸಿದ್ದಾರೆ.

3. ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರೊಫೆಸರ್ ಪ್ರಪೋಸ್; ಇತರ ವಿದ್ಯಾರ್ಥಿಗಳಿಂದ ಥಳಿತ; ವಿಡಿಯೋ ವೈರಲ್

ಕಾಲೇಜಿನಲ್ಲಿ ತರಗತಿಯಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರೊಫೆಸರ್ ಒಬ್ಬರು ಪ್ರಪೋಸ್ ಮಾಡಿದ್ದು, ಈ ಸಂಬಂಧ ವಿದ್ಯಾರ್ಥಿಗಳು ಅವರಿಗೆ ಥಳಿಸಿರುವ ಘಟನೆ ನೆಲಮಂಗಲ ತಾಲೂಕಿನ ಟಿ. ಬೇಗೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಪ್ರೊಫೆಸರ್‌ ಅಬ್ದುಲ್‌ ಪ್ರಪೋಸ್‌ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಾರೆ. ಬಳಿಕ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾಳೆ. ಪ್ರೊಫೆಸರ್ ಪ್ರಪೋಸ್​ ಮಾಡಿರುವ ದೃಶ್ಯ ಸ್ಟೂಡೆಂಟ್​ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ವೇಳೆ ರೊಚ್ಚಿಗೆದ್ದ ಇತರೆ ಸ್ಟೂಡೆಂಟ್ಸ್​​ ವಿದ್ಯಾರ್ಥಿನಿ ಪರ ನಿಂತು ಪ್ರಾಧ್ಯಾಪಕನ ಜೊತೆ ಗಲಾಟೆ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

4. ಸರ್ಕಾರದ ಅನುಮತಿ ನಿರಾಕರಣೆ ಹೊರತಾಗಿಯೂ KSOU ನಲ್ಲಿ ಏಕಾತ್ಮ ಮಾನವ ದರ್ಶನ – ಭಾರತದ ವಿಶ್ವದೃಷ್ಟಿ’ ಕಾರ್ಯಕ್ರಮ- ರಾಜ್ಯಪಾಲರ ಭಾಷಣ

ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ನೀಡಿರುವ ನಿರ್ದೇಶನದ ವಿವಾದದ ನಡುವೆಯೇ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬುಧವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU)ದಲ್ಲಿ ಆರ್‌ಎಸ್‌ಎಸ್‌ ಸಂಬಂಧಿತ ‘ಏಕಾತ್ಮ ಮಾನವ ದರ್ಶನ – ಭಾರತದ ವಿಶ್ವದೃಷ್ಟಿ’ ಕುರಿತ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಉನ್ನತ ಶಿಕ್ಷಣ ಇಲಾಖೆಗೆ ತಿಳಿಸದೆ ಮಾರ್ಚ್ 25 ರಿಂದ 27ರವರೆಗೆ ಆಯೋಜಿಸಲಾಗಿದ್ದ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ KSOU ಅಧಿಕಾರಿಗಳಿಗೆ ಮತ್ತು ಕಾರ್ಯಕ್ರಮ ಸಂಘಟಕರಿಗೆ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರದ ನಿರ್ದೇಶನದ ಹೊರತಾಗಿಯೂ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ದೀನದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವ ದರ್ಶನ(ಸಮಗ್ರ ಮಾನವತಾವಾದ) ಎಂಬ ಪರಿಕಲ್ಪನೆಯು ಕೇವಲ ತಾತ್ವಿಕ ಕಲ್ಪನೆಯಲ್ಲ. ಅದು ಭಾರತದ ಆತ್ಮ, ಸಂಸ್ಕೃತಿ, ಚಿಂತನೆ ಮತ್ತು ಜೀವನ ವಿಧಾನದ ಮೂಲತತ್ವವಾಗಿದೆ ಎಂದು ಹೇಳಿದ್ದಾರೆ.

5. ಉಗ್ರನಂಟು: ಬಳ್ಳಾರಿ ಮೂಲದ ಯುವಕ ಸೇರಿ 12 ಮಂದಿ ಬಂಧನ

ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ನಗರದ ಅಬ್ದುಲ್ ಸಲಾಮ್ ರಾಜ್ಯದಲ್ಲಿ ಬಂಧಿತ ಆರೋಪಿಯಾಗಿದ್ದಾನೆ. ಕರ್ನಾಟಕ ಸೇರಿದಂತೆ ಆಂಧ್ರ, ಬಿಹಾರ, ಮಹಾರಾಷ್ಟ್ರ ಒಳಗೊಂಡು ವಿವಿಧ ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.