ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!
ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟ.. ಅಷ್ಟರಮಟ್ಟಿಗೆ ಅಗತ್ಯವಸ್ತುಗಳು ದುಬಾರಿಯಾಗಿದೆ.

ಬೆಂಗಳೂರು: ದೇಶದ ದುಬಾರಿ ನಗರಗಳಲ್ಲಿ ಪ್ರಮುಖವಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ವರ್ಷದ ಯುವತಿಯೊಬ್ಬಳು ತನ್ನ ಮಾಸಿಕ ಖರ್ಚುವೆಚ್ಚಗಳನ್ನು ಲೆಕ್ಕಾ ಹಾಕಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟ.. ಅಷ್ಟರಮಟ್ಟಿಗೆ ಅಗತ್ಯವಸ್ತುಗಳು ದುಬಾರಿಯಾಗಿದೆ. ಇನ್ನು ಹೊಸ ತಲೆಮಾರಿನ ಯುವ ಪೀಳಿಗೆಯ ದುಬಾರಿ ಜೀವನಶೈಲಿ ಅಚ್ಚರಿಗೆ ಕಾರಣವಾಗುತ್ತದೆ. ಅದರಲ್ಲೂ ಇತ್ತೀಚೆಗೆ ಯುವತಿಯೊಬ್ಬರ ಮಾಸಿಕ ಖರ್ಚುವೆಚ್ಚಗಳ ವಿವರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಶ್ರದ್ಧಾ (shradhawhat) ಎಂಬ ಇನ್ ಸ್ಟಾಗ್ರಾಮ್ ಬಳಕೆದಾರರೊಬ್ಬರು ತಮ್ಮ ಮಾಸಿಕ ಖರ್ಚುವೆಚ್ಚಗಳನ್ನು ಪಟ್ಟಿ ಮಾಡಿ ವಿಡಿಯೋ ಹಾಕಿದ್ದು, ಈ ವಿಡಿಯೋ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಒಂಟಿಯಾಗಿ ವಾಸ ಮಾಡುತ್ತಿರುವ ಯುವತಿ ಮಾನಸಿಕ ನೆಮ್ಮದಿ ಹಾಗೂ ಸ್ವಯಂ ಆರೈಕೆಗಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಿದ್ದಾರೆ.
ಯುವತಿ ನೀಡಿರುವ ಪಟ್ಟಿಯ ಅನ್ವಯ, 'ಮಾನಸಿಕ ಆರೋಗ್ಯಕ್ಕಾಗಿ ತಿಂಗಳಿಗೆ 10,000 ರೂಪಾಯಿಯನ್ನು ಯುವತಿ ಮೀಸಲಿಟ್ಟಿದ್ದು, ಅದೇ ರೀತಿ ವಾರಾಂತ್ಯದ ಮಸಾಜ್ ಮತ್ತು ಪೆಡಿಕ್ಯೂರ್‌ಗಳಿಗಾಗಿ ತಿಂಗಳಿಗೆ ಸುಮಾರು 5,000 ರೂ. ಹಾಗೂ ಉಗುರುಗಳ ವಿನ್ಯಾಸ ಕ್ಕೆ 3000 ರೂಪಾಯಿ ಖರ್ಚು ಮಾಡುತ್ತಾರೆ. ಪ್ರತಿ ಭಾನುವಾರ ಡೇಟ್ ಗಾಗಿ 2,000 ರೂಪಾಯಿ ವ್ಯಯಿಸುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.
ಇದಲ್ಲದೆ ತಿಂಗಳಿಗೆ ಇತರ ಖರ್ಚಿಗಾಗಿ 2,000 ಹೂವುಗಳ ಖರೀದಿ ಹಾಗೂ ಪರ್ಸನಲ್ ಖರ್ಚಿಗೆ 3,000 ರೂ ಖರ್ಚು ಮಾಡುತ್ತೇನೆ ಎಂದು ಯುವತಿ ಹೇಳಿದ್ದಾಳೆ. ಹಿಂದಿನ ತಲೆಮಾರಿನವರು ಎಷ್ಟು ಹಣ ವಿನಿ ಯೋಗಿಸುತ್ತಾರೆ ಎಂದು ತನಗೆ ತಿಳಿದಿಲ್ಲ. ಆದರೆ ತನಗೆ ಇದು ಮುಖ್ಯ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಈ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದು, ಕೆಲವರು ಆಕೆಯ ದುಬಾರಿ ಜೀವನ ಶೈಲಿಯನ್ನು ಪ್ರಶ್ನಿಸಿದರೆ, ಇತರರು ಅದು ಆಕೆಯ ಆಯ್ಕೆ ಎಂದು ಬೆಂಬಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



