ರಾಜ್ಯ

ಕೈಯಲ್ಲಿ ಬಿಯರ್ ಬಾಟಲ್, ತ್ರಿಬಲ್ ರೈಡಿಂಗ್: ಕಾನೂನು ಭಯವಿಲ್ಲದೆ ನಗರದಲ್ಲಿ ಬೈಕ್ ಸವಾರಿ; Video ವೈರಲ್

ಕುಡಿದು ವಾಹನ ಚಲಾಯಿಸಬಾರದೆಂಬ ಸಂಚಾರ ನಿಯಮವಿದ್ದರೂ ಯುವಕರು ಮದ್ಯ ಸೇವಿಸುತ್ತಲೇ ತ್ರಿಬಲ್ ರೈಡಿಂಗ್ ಮಾಡಿದ್ದಾರೆ.

ಕೈಯಲ್ಲಿ ಬಿಯರ್ ಬಾಟಲ್, ತ್ರಿಬಲ್ ರೈಡಿಂಗ್: ಕಾನೂನು ಭಯವಿಲ್ಲದೆ ನಗರದಲ್ಲಿ ಬೈಕ್ ಸವಾರಿ; Video ವೈರಲ್
ಮದ್ಯಪಾನ ಮಾಡುತ್ತಿರುವ ಹಿಂಬದಿ ಸವಾರ
Published On :

ಬೆಂಗಳೂರು: ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಪುಂಡರು ತ್ರಿಬಲ್ ರೈಡಿಂಗ್ ಮಾಡಿರುವ ಘಟನೆಯೊಂದು ನಗರದ ಬಿಟಿಎಂ ಲೇ ಔಟ್ ನಲ್ಲಿ ನಡೆದಿದೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಯುವಕನೊಬ್ಬ ಇಬ್ಬರು ಯುವಕರನ್ನು ಕೂರಿಸಿಕೊಂಡು ತ್ರಿಬಲ್ ರೈಡಿಂಗ್ ಮಾಡುತ್ತಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಯುವಕ ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದೆ.

ಕುಡಿದು ವಾಹನ ಚಲಾಯಿಸಬಾರದೆಂಬ ಸಂಚಾರ ನಿಯಮವಿದ್ದರೂ ಯುವಕರು ಮದ್ಯ ಸೇವಿಸುತ್ತಲೇ ತ್ರಿಬಲ್ ರೈಡಿಂಗ್ ಮಾಡಿದ್ದಾರೆ.

ಈ ಪುಂಡರಿಗೆ ನಗರದ ರಸ್ತೆಗಳು ಆಟದ ಮೈದಾನವಾದಂತಾಗಿದೆ. ಕಾನೂನಿನ ಭಯ, ಕನಿಷ್ಠ ಸಾಮಾಜಿಕ ಜವಾಬ್ದಾರಿ ಇಲ್ಲದಂತಾಗಿದೆ. ಇವರ ಈ ವರ್ತನೆಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.