ರಾಜ್ಯ

ತರಗತಿಯಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ: ಬುಸ್..ಬುಸ್.. ಶಬ್ಧ ಕೇಳಿ ಬೆಚ್ಚಿ ಬಿದ್ದ ಶಿಕ್ಷಕರು; ಮಕ್ಕಳ ಹೊರಗೆ ಕಳುಹಿಸಿ ರಕ್ಷಣೆ..!

ತರಗತಿಯಲ್ಲಿ ಹಾವು ಬುಸುಗುಟ್ಟುತ್ತಿರುವುದು ಕಂಡು ಬಂದಿತ್ತು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿದ ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ತರಗತಿಯಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ: ಬುಸ್..ಬುಸ್.. ಶಬ್ಧ ಕೇಳಿ ಬೆಚ್ಚಿ ಬಿದ್ದ ಶಿಕ್ಷಕರು; ಮಕ್ಕಳ ಹೊರಗೆ ಕಳುಹಿಸಿ ರಕ್ಷಣೆ..!
ಮೇಜಿನ ಕೆಳಗಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ.
Published On :

ಕಾರವಾರ: ಗುಡ್ಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಯಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ದೀರ್ಘ ಪ್ರಯತ್ನದ ಬಳಿಕ ಹಾವನ್ನು ಸುರಕ್ಷಿತವಾಗಿ ಹಿಡಿದು ದೂರದ ಕಾಡಿಗೆ ಬಿಟ್ಟರು.

ತರಗತಿಯಲ್ಲಿ ಹಾವು ಬುಸುಗುಟ್ಟುತ್ತಿರುವುದು ಕಂಡು ಬಂದಿತ್ತು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿದ ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ತರಗತಿಯ ಮೇಜಿನ ಕೆಳಗೆ ಸುತ್ತಿಕೊಂಡು ಕುಳಿತಿರುವುದು ಕಂಡು ಬಂದಿದೆ.

ಹಾವನ್ನು ಹೊರತೆಗೆದಲು ಪ್ರಯತ್ನಿಸಿದಾಗ ಅದು ಮೇಜಿನ ಮೇಲಿದ್ದ ಪುಸ್ತಕಗಳ ರಾಶಿಯ ನಡುವೆ ನುಗ್ಗಿ ಅಡಗಿಕೊಂಡಿತು. ಕೆಲವು ಗಂಟೆಗಳ ಪ್ರಯತ್ನದ ಬಳಿಕ ಅರಣ್ಯ ಸಿಬ್ಬಂದಿ ಹಾವನ್ನು ಯಶಸ್ವಿಯಾಗಿ ಹಿಡಿದು ದೂರದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿದರು.

ಸ್ಥಳೀಯರ ಪ್ರಕಾರ, ಗುಡ್ಡಹಳ್ಳಿ ಪ್ರದೇಶದಲ್ಲಿ ದಟ್ಟವಾದ ಮರಗಳು ಮತ್ತು ತಂಪಾದ ಹವಾಮಾನ ಇರುವುದರಿಂದ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಗ್ರಾಮಸ್ಥರು ಅವುಗಳನ್ನು ಕಂಡಾಗ ಆತಂಕಪಡದೆ ಕೊಲ್ಲದೇ ದೂರ ಓಡಿಸುತ್ತಾರೆ ಎಂದು ತಿಳಿಸಿದ್ದಾರೆ.

ಘಟನೆ ವೇಳೆ ಶಿಕ್ಷಕರು ವಿದ್ಯಾರ್ಥಿಗಳನ್ನು ತಕ್ಷಣ ತರಗತಿಯಿಂದ ಹೊರಗೆ ಕಳುಹಿಸಿ ಸುರಕ್ಷತೆ ಕ್ರಮಗಳನ್ನು ಕೈಗೊಂಡಿದ್ದರು. ಹಾವು ಸ್ವತಃ ಹೊರಗೆ ಹೋಗಬಹುದು ಎಂಬ ನಿರೀಕ್ಷೆಯಲ್ಲಿ ತರಗತಿ ಕೊಠಡಿಗಳ ಬಾಗಿಲು ತೆಗೆದಿದ್ದರು. ಆದರೆ ಅದು ಅಲ್ಲಿಯೇ ಉಳಿದಿದ್ದರಿಂದ ಅರಣ್ಯ ಸಿಬ್ಬಂದಿ ಬಂದು ಅದನ್ನು ಹಿಡಿದು ಕಾಡಿಗೆ ಬಿಟ್ಟರು.

ಇಲಿ-ಹೆಗ್ಗಣಗಳ ಬೇಟೆಯಾಡಲು ಹಾವು ತರಗತಿಗೆ ಬಂದಿರಬಹುದು. ಇತರ ಹಾವುಗಳ ವಾಸನೆಗಳನ್ನು ಕಾಳಿಂಗ ಸರ್ಪ ಸುಲಭವಾಗಿ ಗುರುತಿಸಬಲ್ಲದು. ಈ ವಾಸನೆ ಹಿಡಿದು ಸರ್ಪ ತರಗತಿಯೊಳಗೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.