ಡಾಗ್ ಸತೀಶ್ ಗೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು FIR; ಎರಡು ಪ್ರಕರಣ
ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಡಾಗ್ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ರಜತ್ ವಿರುದ್ಧ FIR ದಾಖಲಾಗಿದೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಡಾಗ್ ಸತೀಶ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಡಾಗ್ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ರಜತ್ ವಿರುದ್ಧ FIR ದಾಖಲಾಗಿದೆ. ಪೊಲೀಸರು ಬಿಎನ್‌ಎಸ್ ಸೆಕ್ಷನ್ 351 , 352 ರ ಆಡಿ ರಜತ್ ಮತ್ತು ಧನರಾಜ್ ಮೇಲೆ ಕೇಸ್ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
2ನೇ ದೂರು
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ರಜತ್ ವಿರುದ್ಧ ಗಿರೀಶ್ ಕುಮಾರ್ ಎಂಬುವರು ಬೆಂಗಳೂರಿನ ಕೆಆರ್ ಪುರಂ ಠಾಣೆಯಲ್ಲಿ ದೂರು ನೀಡಿದ್ದರು.
ಬೆದರಿಕೆ ಮತ್ತು ನಿಂದನೆ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ. ಮೊಬೈಲ್ ಕರೆಯ ಮೂಲಕ ಬೆದರಿಕೆ ಹಾಕಿರುವುದಾಗಿ ಗಿರೀಶ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ಡಾಗ್ ಸತೀಶ್ ಸ್ನೇಹ ಬಿಡಬೇಕೆಂದು ರಜತ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮೊಬೈಲ್ ಗೆ ದೂರುದಾರರ ಕಾರಿನ ಫೋಟೋ ಕಳುಹಿಸಿ ಮೆಸೇಜ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಗಿರೀಶ್ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ವರ್ಷದ ಡಿ.12 ರಂದು ರಜತ್ ಕರೆ ಮಾಡಿ ನಾನು ಮತ್ತು ನನ್ನ ಸ್ನೇಹಿತ ಧನರಾಜ್ ಇಬ್ಬರು ಸೇರಿ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದೇವೆ. ಚಾನೆಲ್ ಆರಂಭದಲ್ಲಿ ನಿಮ್ಮ ಸಂದರ್ಶನವನ್ನು ಹಾಕುತ್ತೇವೆ ಎಂದು ಹೇಳಿ ನನ್ನನ್ನು ಮಾತನಾಡಿಸಿದ್ದರು. ಆದರೆ ಅಪ್ಲೋಡ್ ಮಾಡುವಾಗ ನನ್ನ ಸಂಭಾಷಣೆಯನ್ನು ತಿರುಚಿ ನನಗೆ ಅವಮಾನ ಮಾಡಿದ್ದಾರೆ.
ಎರಡು ಕ್ಯಾಮೆರಾ ಮತ್ತು ಎರಡು ಮೊಬೈಲ್ ನಲ್ಲಿ ನಾಲ್ಕು ಮಂದಿ ಸಂದರ್ಶನವನ್ನು ಶೂಟ್ ಮಾಡಿದ್ದರು. ಈ ಫೆಬ್ರವರಿ 27 ರಂದು ರಾತ್ರಿ 10:30ಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮೆಸೇಜ್ ಹಾಕಿದ್ದಕ್ಕೆ ರಜತ್ ಅವರು ನನ್ನ ಮೇಲೆ ಕೊಲೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅಷ್ಟೇ ಅಲ್ಲದೇ ಆತನ ಫೋನಿನಿಂದ ಮಧ್ಯರಾತ್ರಿ ಕೊಲೆ ಬೆದರಿಕೆ ಬರುತ್ತಿತ್ತು. ರಜತ್ ಮತ್ತು ಧನರಾಜ್ ಉದ್ದೇಶಪೂರ್ವಕವಾಗಿ ಮಾನಹಾನ ಮಾಡಿ ಬೈದಿದ್ದಾರೆ. ಇವರ ವಿರುದ್ಧ ಕ್ರಮಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



