ರಾಜ್ಯ

ಮಂಡ್ಯ: ಜನಸೇವೆಗೆ ಕಟ್ಟಿಸಿದ ವಿಧಾನಸೌಧ ವ್ಯಾಪಾರ ಕೇಂದ್ರವಾಗಿದೆ- ಎಚ್. ವಿಶ್ವನಾಥ್ ಆರೋಪ

ರಾಜಕಾರಣಿಗಳು ಇಂದು ಸೇವಕರಾಗಿ ಉಳಿದಿಲ್ಲ. ಶೇ. 80 ರಷ್ಟು ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ವಿಧಾನಸೌಧ ಶಾಸಕರ ಖರೀದಿ ಮತ್ತು ಮಾರಾಟಕ್ಕೆ ಸಾಕ್ಷಿಯಾಗಿರುವುದು ದುರಂತ ಎಂದರು.

ಮಂಡ್ಯ: ಜನಸೇವೆಗೆ ಕಟ್ಟಿಸಿದ ವಿಧಾನಸೌಧ ವ್ಯಾಪಾರ ಕೇಂದ್ರವಾಗಿದೆ- ಎಚ್. ವಿಶ್ವನಾಥ್ ಆರೋಪ
ಎಚ್. ವಿಶ್ವನಾಥ್
Published On :

ಮಂಡ್ಯ: ಕೆಂಗಲ್ ಹನುಮಂತಯ್ಯನವರು ಜನಸೇವೆಗಾಗಿ ಕಟ್ಟಿಸಿದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಇಂದು ವ್ಯಾಪಾರ ಕೇಂದ್ರವಾಗಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಶುಕ್ರವಾರ ಆರೋಪಿಸಿದ್ದಾರೆ.

ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಪಿ.ಎನ್. ಜವರಪ್ಪಗೌಡ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ವಿಧಾನಸೌಧ ದುಡ್ಡಿನ ಹಿಂದೆ ಓಡುತ್ತಿದೆ ಎಂದು ಹೇಳಿದರು.

ರಾಜಕಾರಣಿಗಳು ಇಂದು ಸೇವಕರಾಗಿ ಉಳಿದಿಲ್ಲ. ಶೇ. 80 ರಷ್ಟು ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ವಿಧಾನಸೌಧ ಶಾಸಕರ ಖರೀದಿ ಮತ್ತು ಮಾರಾಟಕ್ಕೆ ಸಾಕ್ಷಿಯಾಗಿರುವುದು ದುರಂತ ಎಂದರು.

ಸ್ವಾತಂತ್ರ್ಯ ನಂತರ ಟಾಟಾ-ಬಿರ್ಲಾ ರಾಜಕೀಯ ಪ್ರವೇಶದ ಬಗ್ಗೆ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ಶಕ್ತಿ ಮತ್ತು ಹಣದ ಶಕ್ತಿ ಒಂದೇ ಕಡೆ ಇದ್ದರೆ ಪ್ರಜಾಪ್ರಭುತ್ವ ಮಾರಾಟವಾಗುತ್ತದೆ ಎಂದಿದ್ದರು. ಅದೀಗ ನಿಜವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ವೇಳೆ ಮಹಿಳೆಯರಿಗೆ ಮಾಸಿಕ 2,000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, ಅದರ ಬದಲಿಗೆ ಸರ್ವರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಆದ್ಯತೆ ನೀಡಬೇಕಿತ್ತು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.