'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಬಂಧನ: ಖತರ್ನಾಕ್ ಕಳ್ಳ, 41 ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಬಳ್ಳಾರಿ ಪೊಲೀಸರು, Video
ಸಿದ್ದಾ ರೆಡ್ಡಿ ದಿನನಿತ್ಯ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರೂ, ಆತನ ನಿಜವಾದ ಆದಾಯದ ಮೂಲ ಬೈಕ್ ಕಳ್ಳತನವಾಗಿತ್ತು.

ಬಳ್ಳಾರಿ: ಕರ್ನಾಟಕದ ಬಳ್ಳಾರಿಯಲ್ಲಿ 'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಎಂದೇ ಕುಖ್ಯಾತನಾಗಿದ್ದ ಖತರ್ನಾಕ್ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಈ 'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಬರೊಬ್ಬರಿ 41 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವ ಆರೋಪ ಎದುರಿಸುತ್ತಿದ್ದು, ಅವುಗಳಲ್ಲಿ ಹೆಚ್ಚಿನವು ಹೀರೋ ಕಂಪನಿಯ ಸ್ಪ್ಲೆಂಡರ್ ಬೈಕ್‌ಗಳಾಗಿವೆ.
ಸಿದ್ದಾ ರೆಡ್ಡಿ ದಿನನಿತ್ಯ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರೂ, ಆತನ ನಿಜವಾದ ಆದಾಯದ ಮೂಲ ಬೈಕ್ ಕಳ್ಳತನವಾಗಿತ್ತು. ವಿಶೇಷವಾಗಿ ಹೀರೋ ಸ್ಪ್ಲೆಂಡರ್ ಮಾದರಿಯ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೀರೋ ಕಂಪನಿಯ ಬೈಕ್‌ಗಳ ಲಾಕ್‌ಗಳನ್ನು ಕ್ಷಣಾರ್ಧದಲ್ಲಿ ತೆರೆಯುವ ನೈಪುಣ್ಯ ಹೊಂದಿದ್ದ ಕಾರಣ ಆತನಿಗೆ 'ಸ್ಪ್ಲೆಂಡರ್ ಸಿದ್ದಾ ರೆಡ್ಡಿ' ಎಂಬ ಅಡ್ಡಹೆಸರು ಬಂದಿತ್ತು. "ಈತ ಹೆಚ್ಚಿನ ಸಂಖ್ಯೆಯಲ್ಲಿ ಸ್ಪ್ಲೆಂಡರ್ ಬೈಕ್‌ಗಳನ್ನು ಕಳವು ಮಾಡಿದ್ದಾನೆ," ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿರುವ 41 ದ್ವಿಚಕ್ರ ವಾಹನಗಳಲ್ಲಿ 30 ಬೈಕ್‌ಗಳು ಸ್ಪ್ಲೆಂಡರ್ ಮಾದರಿಯವುಗಳಾಗಿವೆ. ಸಿದ್ದಾ ರೆಡ್ಡಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



