ರಾಜ್ಯ

'ದಲಿತನಾದರೆ ನನಗೆ ಪ್ರಶ್ನಿಸುವ ಅಧಿಕಾರವಿಲ್ಲವೇ, ನಾನು ಈ ರಾಜ್ಯದ ಗೃಹ ಸಚಿವ, ನನಗೆ RSS ನೇರವಾಗಿ ಉತ್ತರಿಸಲಿ': ಪ್ರಿಯಾಂಕ್ ಖರ್ಗೆ; Video

ನಾನು ಯಾವುದನ್ನು ಪ್ರಶ್ನೆ ಮಾಡಬೇಕು, ಪ್ರಶ್ನೆ ಮಾಡಬಾರದು ಎಂದು ಹೇಳುವುದಕ್ಕೆ ಅವರು ಯಾರು, ನನಗೆ ವೈಯಕ್ತಿಕ ಅಧಿಕಾರವಿದೆ.

'ದಲಿತನಾದರೆ ನನಗೆ ಪ್ರಶ್ನಿಸುವ ಅಧಿಕಾರವಿಲ್ಲವೇ, ನಾನು ಈ ರಾಜ್ಯದ ಗೃಹ ಸಚಿವ, ನನಗೆ RSS ನೇರವಾಗಿ ಉತ್ತರಿಸಲಿ': ಪ್ರಿಯಾಂಕ್ ಖರ್ಗೆ; Video
ಪ್ರಿಯಾಂಕ್ ಖರ್ಗೆ
Published On :

ಬಿಜೆಪಿಯಲ್ಲಿ ದಲಿತರು ಆರ್ ಎಸ್ ಎಸ್ ಗೆ ಗುಲಾಮರು, ದಲಿತರು ಯಾಕೆ ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಮಾಡಬಾರದು, ದಲಿತರು ಈ ಸಮಾಜದ, ಸಂವಿಧಾನದ ಭಾಗವಲ್ಲವೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬೆಂಗಳೂರಿನಲ್ಲಿಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿ,ನಾನು ಯಾವುದನ್ನು ಪ್ರಶ್ನೆ ಮಾಡಬೇಕು, ಪ್ರಶ್ನೆ ಮಾಡಬಾರದು ಎಂದು ಹೇಳುವುದಕ್ಕೆ ಅವರು ಯಾರು, ನನಗೆ ವೈಯಕ್ತಿಕ ಅಧಿಕಾರವಿದೆ. ಕರ್ನಾಟಕದ ಗೃಹ ಸಚಿವರಾಗಿ ನಾನು ಏನು ಕೇಳುತ್ತಿದ್ದೇನೆ ಎಂಬುದು ನನಗೆ ಸ್ಪಷ್ಟವಾಗಿದೆ ಎಂದರು.

ಇಷ್ಟು ದೊಡ್ಡ ಸಂಘಟನೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದ ಮೇಲೆ ಅದರ ಕಾರ್ಯಚಟುವಿಕೆಗಳ ಬಗ್ಗೆ ಸರ್ಕಾರಕ್ಕೆ ವಿವರ ನೀಡಬೇಕಾದದ್ದು ಅಗತ್ಯ. ನಾನು ಯಾರಿಗೂ ಕ್ಯಾರೇ ಮಾಡಲ್ಲ, ನಾನು ದಲಿತನಾಗಲಿ, ಏನೇ ಆಗಲಿ ಮೋಹನ್ ಭಾಗವತ್ ಅವರಷ್ಟೇ ಅಧಿಕಾರ ಹೊಂದಿದ್ದೇನೆ ಎಂದರು.

ಗೃಹ ಸಚಿವನಾಗಿ ನಾನು ಮೋಹನ್ ಭಾಗವತ್ ಅವರನ್ನು ಪ್ರಶ್ನೆ ಮಾಡಿದ್ದೇನೆ, ಅವರು ನನಗೆ ಉತ್ತರ ಕೊಡಲಿ, ಬೇರೆಯವರು ಏಕೆ ಮಾತನಾಡಬೇಕು, ಅದು ಬಿಟ್ಟು ಸಂಪಾದಕತ್ವ ಬರೆಯುವುದು, ಸೋಷಿಯಲ್ ಮೀಡಿಯಾದಲ್ಲಿ ಹೇಳುವುದು ಏಕೆ, ಅಧಿಕೃತವಾಗಿ ಲೆಟರ್ ಹೆಡ್ ನಲ್ಲಿ ಉತ್ತರ ಕೊಡಲಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.