ರಾಜ್ಯ

ಮೈಸೂರು: ಮಗನ ನೆನೆದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಶಾಸಕ ಜಿ.ಟಿ ದೇವೇಗೌಡ

ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶಾಸಕ ಜಿ.ಟಿ ದೇವೇಗೌಡ ಪತ್ನಿ ಲಲಿತಾ ಜಿ.ಟಿ ದೇವೇಗೌಡ ಅವರಿಗೆ ʻಸಹಕಾರ ಸೇವಾ ರತ್ನ’ ಪ್ರಶಸ್ತಿ ನೀಡಿದ್ದ ಬೆನ್ನಲ್ಲೇ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಮೈಸೂರು: ಮಗನ ನೆನೆದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಶಾಸಕ ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ ಕಣ್ಣೀರು
Published On :

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶಾಸಕ ಜಿ.ಟಿ ದೇವೇಗೌಡ ಪತ್ನಿ ಲಲಿತಾ ಜಿ.ಟಿ ದೇವೇಗೌಡ ಅವರಿಗೆ ʻಸಹಕಾರ ಸೇವಾ ರತ್ನ’ ಪ್ರಶಸ್ತಿ ನೀಡಿದ್ದ ಬೆನ್ನಲ್ಲೇ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಈ ವೇಳೆ ಭಾಷಣಕ್ಕೆ ನಿಂತ ಕೂಡಲೇ ಶಾಸಕ ಜಿ.ಟಿ ದೇವೇಗೌಡರು ಗಳಗಳನೆ ಅತ್ತರು. ಕಾರ್ಯಕ್ರಮದಲ್ಲಿ ಪುತ್ರ ಶಾಸಕ ಹರೀಶ್ ಗೌಡ ಹೊರತುಪಡಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಾಗಿಯಾಗಿದ್ದರು. ಸಭಾಂಗಣದಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಯಿತು.

ಬೆಂಬಲಿಗರು ‘ಸದಾ ಕಾಲ ನಿಮ್ಮ ಜೊತೆಗಿರುತ್ತೇವೆ ವಿ ಅಣ್ಣಾ, ಅಳಬೇಡಿ’ ಎಂದು ಕೂಗಿದರು. ದೇವೇಗೌಡರ ಇಬ್ಬರು ಪುತ್ರಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ವೇಳೆ ಪುತ್ರನನ್ನು ನೆನೆದು ಜಿಟಿ ದೇವೇಗೌಡ ಭಾವುಕರಾದರು. ಪುತ್ರ ಹರೀಶ್ ಗೌಡ ಕೆಲಕಾಲ ತಂದೆ ಜಿಟಿ ದೇವೇಗೌಡರಿಂದ ದೂರವಿದ್ದು, ಅಂತರ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.