ಮಂಡ್ಯ: ರೈತನ ಮೇಲೆ ತಹಶೀಲ್ದಾರ್ ಆಕ್ರೋಶ; ವೈರಲ್ ವಿಡಿಯೊಗೆ ವ್ಯಾಪಕ ಟೀಕೆ; Video
ವಿಡಿಯೊದಲ್ಲಿ ರೈತ ಅಣ್ಣಯ್ಯ ತಮ್ಮ ಸಮಸ್ಯೆಯನ್ನು ತಹಶೀಲ್ದಾರ್ ಮುಂದೆ ವಿವರಿಸುತ್ತಿರುವ ವೇಳೆ, ತಹಶೀಲ್ದಾರ್ ತಾಳ್ಮೆ ಕಳೆದುಕೊಂಡಿರುವುದು ಕಂಡುಬರುತ್ತದೆ.

ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ: ಜಮೀನಿನ ದಾಖಲೆ ಕುರಿತು ಮಾಹಿತಿ ಪಡೆಯಲು ಮಿನಿ ವಿಧಾನಸೌಧಕ್ಕೆ ಬಂದಿದ್ದ ರೈತನನ್ನು 'ಮಧ್ಯವರ್ತಿ' ಎಂದು ಕರೆದು, ಪೊಲೀಸರನ್ನು ಕರೆಸುವುದಾಗಿ ತಹಶಿಲ್ದಾರ್ ಶ್ರೇಯಸ್ ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ರೈತ ಅಣ್ಣಯ್ಯ ತಮ್ಮ ಸಮಸ್ಯೆಯನ್ನು ತಹಶೀಲ್ದಾರ್ ಮುಂದೆ ವಿವರಿಸುತ್ತಿರುವ ವೇಳೆ, ತಹಶೀಲ್ದಾರ್ ತಾಳ್ಮೆ ಕಳೆದುಕೊಂಡಿರುವುದು ಕಂಡುಬರುತ್ತದೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪರಿಹರಿಸಬೇಕಾದ ಅಧಿಕಾರಿಯೊಬ್ಬರು ಈ ರೀತಿ ವರ್ತಿಸಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆ ಕುರಿತು ಸ್ಪಷ್ಟನೆ ನೀಡಿರುವ ತಹಶೀಲ್ದಾರ್ ಶ್ರೇಯಸ್, ತಾವು ಯಾವಾಗಲೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.
ಅಣ್ಣಯ್ಯ ಹಲವು ಕಡತಗಳನ್ನು ತೆಗೆದುಕೊಂಡು ಕಚೇರಿಗೆ ಬಂದಿದ್ದರು. ಅವರು ಸಿಬ್ಬಂದಿ ಮೇಲೆ ಜೋರಾಗಿ ಕೂಗಾಡುತ್ತಿದ್ದರು. ಅವರ ವರ್ತನೆ ನೋಡಿದರೆ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂತು. ಕಚೇರಿಯಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಗಲಾಟೆ ಮುಂದುವರಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೆ. ಅಮಾಯಕ ನಾಗರಿಕರನ್ನು ಮಧ್ಯವರ್ತಿಗಳು ವಂಚಿಸುವ ಘಟನೆಗಳು ನಡೆಯುತ್ತಿರುತ್ತವೆ. ಆ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ್ದೆ. ಆದರೆ ಅವರ ವಿರುದ್ಧ ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ ಎಂದು ಶ್ರೇಯಸ್ ತಿಳಿಸಿದ್ದಾರೆ.
ಇನ್ನೊಂದೆಡೆ, ರೈತ ಅಣ್ಣಯ್ಯ ತಮ್ಮ ನೈಜ ಸಮಸ್ಯೆಯನ್ನು ವಿವರಿಸಲು ತಹಶೀಲ್ದಾರ್ ಅವರನ್ನು ಭೇಟಿಯಾದಾಗ, ತಮಗೆ 'ಮಧ್ಯವರ್ತಿ' ಎಂಬ ಹಣೆಪಟ್ಟಿ ಕಟ್ಟಿದರು. ಅಲ್ಲದೆ, ಸಿಬ್ಬಂದಿಗೆ ತಮ್ಮನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕುವಂತೆ ಸೂಚಿಸಿ, ಪೊಲೀಸರನ್ನು ಕರೆಸಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



