ನನ್ನ ಪತ್ನಿ ಅನ್ನಪೂರ್ಣೆ; ನಾನು ಪ್ರಧಾನಿಯಾಗಲು ರಂಗನಾಥ ಸ್ವಾಮಿ, ಚೆನ್ನಮ್ಮ ಕಾರಣ: ಮಡದಿ ಅಂತ್ಯಕ್ರಿಯೆ ವೇಳೆ ಕಣ್ಣೀರಾದ ದೇವೇಗೌಡರು
ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಅಂತಿಮ ಕಾರ್ಯವಿಧಾನದ ವೇಳೆ ದೇವೇಗೌಡರು ಪತ್ನಿ ನೆನೆದು ಭಾವುಕರಾದರು.

ಹಾಸನ: ನನ್ನ ಪತ್ನಿ ಅನ್ನಪೂರ್ಣೆ, ಆಕೆಯನ್ನು ರಂಗನಾಥಸ್ವಾಮಿ ಪಾದಕ್ಕೆ ಕಳಿಸುತ್ತಿದ್ದೇನೆ ಎಂದು ಮಡದಿ ಚೆನ್ನಮ್ಮರನ್ನು ನೆನೆದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಕಣ್ಣೀರಿಟ್ಟರು.
ಗೌಡರ ಹುಟ್ಟೂರು ಹರದನಹಳ್ಳಿ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಅಂತಿಮ ಕಾರ್ಯವಿಧಾನದ ವೇಳೆ ದೇವೇಗೌಡರು ಪತ್ನಿ ನೆನೆದು ಭಾವುಕರಾದರು.
ನಮ್ಮ ಮಕ್ಕಳು, ಅಳಿಯಂದಿರು, ಹೆಣ್ಣು ಮಕ್ಕಳು ಎಲ್ಲರೂ ಸೇರಿ ರಂಗನಾಥನ ಸಾನಿಧ್ಯದಲ್ಲಿ ಸಮಾಧಿ ಮಾಡಲು ತೀರ್ಮಾನಕ್ಕೆ ಬಂದಿದ್ದು. ಈ ಜಮೀನನ್ನು ಕ್ರಯಕ್ಕೆ ಬರೆಸಿಕೊಂಡು ಪಡವಲಹಿಪ್ಪೆಯಲ್ಲಿ ಮಾಡಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಆದರೆ ಮಕ್ಕಳು ಇಲ್ಲಿ ಮಾಡಲು ನಿರ್ಧಾರ ಮಾಡಿದ್ದಾರೆ. ನನ್ನ ಹೆಂಡತಿ ಅನ್ನಪೂರ್ಣೆ. ಇದನ್ನು ಉತ್ಪ್ರೇಕ್ಷೆಯಿಂದ ಮಾತನಾಡುತ್ತಿಲ್ಲ. ಅವರು ಹೇಗೆ ನಡೆದು ಬಂದ್ರು, ನನ್ನ ರಾಜಕೀಯ ಬೆಳವಣಿಗೆಗಾಗಲಿ ಹೇಗೆ ಸಹಕಾರ ನೀಡಿದ್ರು ಅಂತ ಹೇಳುತ್ತಿದ್ದೇನೆ. ಅವರನ್ನು ರಂಗನಾಥನ ಸಾನಿಧ್ಯಕ್ಕೆ ಕಳುಹಿಸಿಕೊಡುತ್ತಿದ್ದೇನೆ. ಇದನ್ನು ವಿಶ್ಲೇಷಣೆ ಮಾಡುವುದು ಕಷ್ಟ ಎಂದು ಭಾವುಕರಾದರು.
ನಾನು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆಯಲು ಕಾರಣನೇ ರಂಗನಾಥನ ಆಶೀರ್ವಾದ. ನನ್ನ ರಾಜಕೀಯ ಬೆಳವಣಿಗೆಗೆ ಶಕ್ತಿ ಕೊಟ್ಟಿದ್ದು ಇದೇ ರಂಗನಾಥಸ್ವಾಮಿ. ಇನ್ನೊಂದು ಕಡೆ ನನ್ನನ್ನು ಅಗಲಿ ಹೋಗಿರುವ, ನನ್ನನ್ನು ಬಿಟ್ಟು ಹೋಗಿರುವ ಚೆನ್ನಮ್ಮನೇ ಕಾರಣ. ನನ್ನ ಪ್ರತಿ ಹಂತದಲ್ಲಿ ನನಗೆ ಶಕ್ತಿ ತುಂಬಿದವರು. ನನ್ನ ಕುಟುಂಬದ ಎಲ್ಲರೂ ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹೀಗಾಗಿ ಕೊನೆಗೆ ನಮ್ಮ ಮಕ್ಕಳು ಇಲ್ಲಿ ಮಾಡೋಣ. ರಂಗನಾಥನ ಆಶೀರ್ವಾದ ದೇಶದ ಪ್ರಧಾನಿಯಾಗುವ ಮಟ್ಟಕ್ಕೆ ಮಾಡಿದೆ ಎಂದ್ರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



