ರಾಜ್ಯ

ನಾಳೆ ಬೆಂಗಳೂರಿನ ಇಲ್ಲೆಲ್ಲ ಕರೆಂಟ್ ಇರಲ್ಲ; ರಾಜಧಾನಿಯ 80 ಬಡಾವಣೆಗಳಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಟ್!

ಸಿಲಿಕಾನ್ ಸಿಟಿಯ ಜನರೇ ಗಮನಿಸಿ, ನಾಳೆ ರಾಜಧಾನಿ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಸತತ 4 ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆ ಕುರಿತ ವರದಿ ಇಲ್ಲಿದೆ:

ನಾಳೆ ಬೆಂಗಳೂರಿನ ಇಲ್ಲೆಲ್ಲ ಕರೆಂಟ್ ಇರಲ್ಲ; ರಾಜಧಾನಿಯ 80 ಬಡಾವಣೆಗಳಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಟ್!
ವಿದ್ಯುತ್ ಪೂರೈಕೆ (ಸಂಗ್ರಹ ಚಿತ್ರ) — online desk
Published On :

ಬೆಂಗಳೂರು: ಸಿಲಿಕಾನ್ ಸಿಟಿಯ ಜನರೇ ಗಮನಿಸಿ, ನಾಳೆ ಅಂದರೆ ಜುಲೈ 21ರ ಮಂಗಳವಾರದಂದು ರಾಜಧಾನಿ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಸತತ 4 ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. KPTCL ಹಾಗೂ BESCOM ಒಟ್ಟಾಗಿ ನಗರದ ಪ್ರಮುಖ ಕಡೆಗಳಲ್ಲಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪವರ್ ಕಟ್ ಇರಲಿದೆ. ಆ ಕುರಿತ ವರದಿ ಇಲ್ಲಿದೆ:

ಯಾವಾಗ ಕರೆಂಟ್ ಕಟ್?

ನಾಳೆ ಅಂದ್ರೆ ಮಂಗಳವಾರದ ಬೆಳಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ (ಒಟ್ಟು 4 ಗಂಟೆಗಳ ಕಾಲ) ನಗರದ ಪ್ರಮುಖ ಕಡೆಗಳಲ್ಲಿ ಕರೆಂಟ್ ಸಂಪೂರ್ಣವಾಜಿ ಸ್ಥಗಿತಗೊಳ್ಳಲಿದೆ. ಇನ್ನು, ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಲೈನ್‌ಗಳ ದುರಸ್ತಿ ಮತ್ತು ಮರದ ಕೊಂಬೆಗಳನ್ನು ಕತ್ತರಿಸುವ ಕೆಲಸವನ್ನು ಈ ಅವಧಿಯಲ್ಲಿಯೇ ಮಾಡಲಾಗುತ್ತದೆ.

ಎಲ್ಲಿ ಎಲ್ಲಿ ಕರೆಂಟ್ ಇರಲ್ಲ?

ಹೆಬ್ಬಾಳ, ಆರ್.ಟಿ. ನಗರ ಮತ್ತು ಜೆ.ಪಿ. ನಗರ ವ್ಯಾಪ್ತಿಯ ಸುಮಾರು 80ಕ್ಕೂ ಹೆಚ್ಚು ಬಡಾವಣೆಗಳಲ್ಲಿ ನಾಳೆ ಕರೆಂಟ್ ಇರಲ್ಲ. ಅದರಂತೆ,

  • ಆರ್‌ಟಿ ನಗರ ಮತ್ತು ಸುತ್ತಮುತ್ತ: ಆರ್‌ಟಿ ನಗರ, ಆರ್‌ಟಿ ನಗರ ಪೊಲೀಸ್ ಠಾಣಾ ಪ್ರದೇಶ, ಫುಡ್‌ ವರ್ಲ್ಡ್‌ ಆರ್‌ಟಿ ನಗರ, ಆರ್ಟಿ ಬ್ಲಾಕ್ ನಗರ, ಸಿಬಿಐ ಕ್ವಾರ್ಟರ್ಸ್, ಸಿಬಿಐ ಮುಖ್ಯರಸ್ತೆ, ಆರ್‌ಬಿಐ ಕಾಲೋನಿ, ಎಚ್.ಎಂ.ಟಿ ಬ್ಲಾಕ್, ದಿನ್ನೂರ್ ಮುಖ್ಯ ರಸ್ತೆ ಹಾಗೂ ದಿನ್ನೂರ್ ರಸ್ತೆಯ ಭಾಗಗಳು.

  • ಗಂಗಾನಗರ ಮತ್ತು ಬಡಾವಣೆಗಳು: ಗಂಗಾನಗರ, ಗಂಗಾನಗರ ಮಾರುಕಟ್ಟೆ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೋನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾರ್ಟಸ್, ಮುನಿರಾಮಯ್ಯ ಬ್ಲಾಕ್, ಯು.ಎ.ಎಸ್ ಕ್ಯಾಂಪಸ್, ಮುನ್ನಪ್ಪಾ ಕಾಲೋನಿ, ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ.

  • ಅಶ್ವತ್‌ನಗರ ಮತ್ತು ಸಂಜಯನಗರ ಭಾಗ: ಅಶ್ವತ್‌ನಗರ, ಅಶ್ವಥ್ ನಾಗರಸನ್ ಜಯನಗರ, ಸಂಜಯನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್ ಹಾಗೂ ಎಂಎಲ್‌ಎ ಲೇಔಟ್‌ನ ಭಾಗಗಳು, ಕುವೆಂಪು ಲೇಔಟ್, ನೆಬ್ಬಾಳ ಎಸ್‌ಎಸ್ ಬ್ಲಾಕ್, ಕೆಂಪಣ್ಣ ಲೇಔಟ್, ಗುಡ್ಡದಹಳ್ಳಿ, ಗುಡ್ಡದಹಳ್ಳಿ ರಸ್ತೆ, ಗುಡ್ಡದಹಳ್ಳಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇತರ ಲೇಔಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳು:

ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್ ಮೆಂಟ್, ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್, ಶಾಂತಿಸಾಗರ ಮುಖ್ಯ ರಸ್ತೆ, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, 80' ರಸ್ತೆ, ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರೋಡ್, ನೇತಾಜಿ ನಗರ, ವಿನಾಯಕ ಲೇಔಟ್ 1ನೇ ಹಂತ, ಮುನಿಸ್ವಾಮಿ ಗೌಡ ಅಪಾರ್ಟ್‌ಮೆಂಟ್, ಸ್ಟೆರ್ಲಿಂಗ್ ಗಾರ್ಡನ್ ಲೇಔಟ್, ಐ.ವಿ.ಆರ್.ಐ, ಆಲ್ಪೈನ್ ಅಪಾರ್ಟ್ ಮೆಂಟ್, ಜೈನ್ ಅಪಾರ್ಟ್ ಮೆಂಟ್, ಸಿ 4 ಉಪವಿಭಾಗ ಕಚೇರಿ ಗಿಡ್ಡಪ್ಪ ಬ್ಲಾಕ್, ಚೋಳನಾಯಕನಹಳ್ಳಿ, ಎಜಿಎಸ್ ಕಾಲೋನಿ,

ಎಸ್‌ಬಿಎಂ ಕಾಲೋನಿ, ವೇಣುಗೋಪಾಲರೆಡ್ಡಿ ಲೇಔಟ್, ವಿನಾಯಕ ಲೇಔಟ್, ಆನಂದಗಿರಿ ಎಕ್ಸ್ಟೆನ್ಸೆನ್, ಎಸ್ಎಸ್ಎ ರಸ್ತೆ, ಪೊಲೀಸ್ ಕ್ವಾರ್ಟಸ್, ಸುಬ್ರಮಣಿ ಕಾಲೋನಿ, ಕುಂಟಿಗ್ರಾಮ, ಕೆಇಬಿ ಲೇಔಟ್, ಎಇಸಿಎಸ್ ಲೇಔಟ್, ಹೊಯ್ಸಳ ಅಪಾರ್ಟ್‌ಮೆಂಟ್, ಗೆದ್ದಲಹಳ್ಳಿ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, 60' ರಸ್ತೆ, ಕಲ್ಪನಾ ಚಾವ್ಲಾ ರಸ್ತೆ, ವಿಎಸ್ಎನ್ಎಲ್ ವೈಟ್ ಹೌಸ್, ಹಳ್ಳಿ, ಚೋಳನಗರ, ಎಂ.ಎಸ್.ಎಚ್ ಲೇಔಟ್, ಶ್ರೀಮತಿ ಲೇಔಟ್, ಅಮರಜ್ಯೋತಿ ಲೇಔಟ್, ಗುಂಡಪರೆಡ್ಡಿ ಲೇಔಟ್, ಚಿದಾನಂದರೆಡ್ಡಿ ಲೇಔಟ್, ಜಿ.ಓ ಸಾಯಿ ಸ್ಲಮ್, ಚಿನ್ನಮ್ಮ ಲೇಔಟ್, ಸೀತಪ್ಪ ಲೇಔಟ್, ಸಿಐಎಲ್ ಲೇಔಟ್, ಸನ್‌ರೈಸ್ ಕಾಲೋನಿ, ಮೈತ್ರಿ ಬಜಾರ್, ತಿಮ್ಮಕ್ಕ ಲೇಔಟ್ ಮತ್ತು ಅಕ್ಕಯ್ಯಮ್ಮ ಲೇಔಟ್.

ಈ ಪ್ರದೇಶಗಳಲ್ಲೂ ನಾಳೆ ಕರೆಂಟ್‌ ಇರಲ್ಲ

ಫ್ರೇಸ್ಟೀಜ್ ಪಾಲ್ಕಾನ್ ಸಿಟಿ, ಖೋಡೇಸ್ ಗ್ಲಾಸ್ ಪ್ಯಾಕ್ಟರಿ ಮತ್ತು ಎಲಿಟ ಪ್ರೋಮೆನೇಡ್ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜು.21ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.