ರಾಜ್ಯ

ಪದವೀಧರರಿಗೆ ಗುಡ್ ನ್ಯೂಸ್: ಯಾವುದೇ ಪರೀಕ್ಷೆಯಿಲ್ಲದೆ ಬೆಳಗಾವಿಯಲ್ಲಿ ಭರ್ಜರಿ ಸರ್ಕಾರಿ ಉದ್ಯೋಗವಕಾಶ; ಸಂಬಳ ಇಷ್ಟೊಂದು ಸಾವಿರ!

ಉದ್ಯೋಗ ಹುಡುಕುತ್ತಿರುವ ಪದವೀಧರ ಯುವಕ - ಯುವತಿಯರಿಗೆ ಬೆಳಗಾವಿ ಜಿಲ್ಲೆಯಿಂದ ಸಿಹಿ ಸುದ್ದಿ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ KSRLPSಯು ಸಂಜೀವಿನಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 17 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.

ಪದವೀಧರರಿಗೆ ಗುಡ್ ನ್ಯೂಸ್: ಯಾವುದೇ ಪರೀಕ್ಷೆಯಿಲ್ಲದೆ ಬೆಳಗಾವಿಯಲ್ಲಿ ಭರ್ಜರಿ ಸರ್ಕಾರಿ ಉದ್ಯೋಗವಕಾಶ; ಸಂಬಳ ಇಷ್ಟೊಂದು ಸಾವಿರ!
ಯಾವುದೇ ಪರೀಕ್ಷೆಯಿಲ್ಲದೆ ಸರ್ಕಾರಿ ಉದ್ಯೋಗವಕಾಶ — Online Desk
Published On :

KSRLPS Recruitment: ಉದ್ಯೋಗ ಹುಡುಕುತ್ತಿರುವ ಪದವೀಧರ ಯುವಕ - ಯುವತಿಯರಿಗೆ ಬೆಳಗಾವಿ (Belagavi) ಜಿಲ್ಲೆಯಿಂದ ಸಿಹಿ ಸುದ್ದಿ ಬಂದಿದೆ. ಹೌದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (Department of Rural Development and Panchayat Raj) ಅಡಿಯಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ (KSRLPS) ಯು ಸಂಜೀವಿನಿ ಯೋಜನೆಯಡಿ (Sanjeevini Scheme) ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 17 ಹುದ್ದೆಗಳಿಗೆ ನೇಮಕಾತಿ (Recruitment) ಅಧಿಸೂಚನೆ ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:

ಜಿಲ್ಲಾ ಮಟ್ಟದ ಹುದ್ದೆಗಳು:

ಜಿಲ್ಲಾ ಮಟ್ಟದಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇವೆ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹುದ್ದೆ ಒಂದು ಇದ್ದು ವೇತನ 35,000 ರೂಪಾಯಿ ನಿಗದಿಯಾಗಿದೆ. ಜಿಲ್ಲಾ ವ್ಯವಸ್ಥಾಪಕ ಎಸ್ಎಂ ಮತ್ತು ಸಿಡಿ, ಜಿಲ್ಲಾ ವ್ಯವಸ್ಥಾಪಕ ಫಾರ್ಮ್ ಲೈವ್ಲಿಹುಡ್, ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಉದ್ಯಮಶೀಲತೆ ಹುದ್ದೆಗಳಿಗೆ ತಲಾ 30,000 ರೂಪಾಯಿ ವೇತನ ನೀಡಲಾಗುತ್ತದೆ. ಜಿಲ್ಲಾ ಎಂಐಎಸ್ ಸಹಾಯಕ ಕಮ್ ಡಿಇಒ ಹುದ್ದೆಗೆ 20,500 ರೂಪಾಯಿ ವೇತನ ಇದೆ. ಈ ಎಲ್ಲ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು ಎಂದು ನಿಗದಿಪಡಿಸಲಾಗಿದ್ದು, ಮೀಸಲಾತಿ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.

ತಾಲೂಕು ಮಟ್ಟದ ಹುದ್ದೆಗಳು:

ತಾಲೂಕು ಮಟ್ಟದಲ್ಲಿ 12 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಅದರಂತೆ, ಚಿಕ್ಕೋಡಿಯಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಹುದ್ದೆ ಒಂದು, ಬೈಲಹೊಂಗಲದಲ್ಲಿ ಎಸ್ವಿಇಪಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಹುದ್ದೆ ಒಂದು ಖಾಲಿ ಇದೆ. ಇನ್ನು ಎರಡೂ ಹುದ್ದೆಗಳಿಗೆ 28,000 ರೂಪಾಯಿ ವೇತನ ಇದೆ.

ಇನ್ನು, ಬ್ಲಾಕ್ ಮ್ಯಾನೇಜರ್ ಫಾರ್ಮ್ ವಿಭಾಗದಲ್ಲಿ ಅಥಣಿ, ಬೆಳಗಾವಿ, ರಾಮದುರ್ಗ, ಸವದತ್ತಿಯಲ್ಲಿ ನಾಲ್ಕು ಹುದ್ದೆಗಳು ಮತ್ತು ಬ್ಲಾಕ್ ಮ್ಯಾನೇಜರ್ ನಾನ್ ಫಾರ್ಮ್ ವಿಭಾಗದಲ್ಲಿ ರಾಯಬಾಗ, ರಾಮದುರ್ಗ, ಸವದತ್ತಿಯಲ್ಲಿ ಮೂರು ಹುದ್ದೆಗಳು ಇವೆ. ಇವುಗಳಿಗೆ 25,000 ರೂಪಾಯಿ ವೇತನ. ಕ್ಲಸ್ಟರ್ ಸೂಪರ್ವೈಸರ್ ಹುದ್ದೆ ರಾಯಬಾಗದಲ್ಲಿ ಒಂದು ಮತ್ತು ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ ಹುದ್ದೆಗಳು ಅಥಣಿ ಮತ್ತು ಹುಕ್ಕೇರಿಯಲ್ಲಿ ಎರಡು ಖಾಲಿ ಇದ್ದು 18,000 ರೂಪಾಯಿ ವೇತನ ನಿಗದಿಯಾಗಿದೆ.

ಅರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಅದರಂತೆ, ಜಿಲ್ಲಾ ಮಟ್ಟದ ವ್ಯವಸ್ಥಾಪಕ ಹುದ್ದೆಗಳಿಗೆ ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿ, MSW, MBA, ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಕನಿಷ್ಠ ಐದು ವರ್ಷಗಳ ಅನುಭವ ಕಡ್ಡಾಯ. ಫಾರ್ಮ್ ಲೈವ್ಲಿಹುಡ್ ಹುದ್ದೆಗೆ M.Sc. ಅಗ್ರಿಕಲ್ಚರ್ ಅಥವಾ B.Sc. ಅಗ್ರಿಕಲ್ಚರ್ ಜೊತೆಗೆ ಕ್ಷೇತ್ರ ಮಟ್ಟದ ಅನುಭವ ಬೇಕು. ಬ್ಲಾಕ್ ಮ್ಯಾನೇಜರ್ ಮತ್ತು ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗಳಿಗೆ ಪದವಿ ಜೊತೆಗೆ ಎರಡು ರಿಂದ ಮೂರು ವರ್ಷಗಳ ಅನುಭವ ಇದ್ದರೆ ಸಾಕು. 

ಇದರೊಂದಿಗೆ, ಕನ್ನಡ ಮತ್ತು ಇಂಗ್ಲಿಷ್ ಓದು ಬರಹ ಹಾಗೂ ಕಂಪ್ಯೂಟರ್ ಜ್ಞಾನ ಇರುವವರಿಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಅನುಭವ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಅಗತ್ಯ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆಯನ್ನು ಜಿಲ್ಲಾ ಪಂಚಾಯತ್ ಬೆಳಗಾವಿಯ ಡಿಆರ್‌ಡಿಎ ಕೋಶದ ಯೋಜನಾ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ, ಹೊರಗುತ್ತಿಗೆ ಆಧಾರದಲ್ಲಿ ರಾಮ್ ಕಂಪ್ಯೂಟರ್ಸ್ ನಿರ್ವಹಿಸುತ್ತದೆ. ಈ ಪ್ರಕ್ರಿಯೆಯು ಎರಡು ಹಂತಗಳನ್ನು ಹೊಂದಿದೆ. ಅವು..

  • ಶಾರ್ಟ್‌ಲಿಸ್ಟ್: ಅರ್ಹತಾ ಮಾನದಂಡಗಳು, ಶೈಕ್ಷಣಿಕ ಅರ್ಹತೆಗಳು ಮತ್ತು ವರ್ಷಗಳ ಅನುಭವದ ಆಧಾರದ ಮೇಲೆ.

  • ಸಂದರ್ಶನ/ಕೌಶಲ್ಯ ಪರೀಕ್ಷೆ: ದಾಖಲೆ ಪರಿಶೀಲನೆ, ಭಾಷಾ ಪ್ರಾವೀಣ್ಯತೆಯ ಮೌಲ್ಯಮಾಪನ ಮತ್ತು ವೃತ್ತಿಪರ ಸಂವಹನ.

ಅರ್ಜಿ ಸಲ್ಲಿಸುವ ಲಿಂಕ್: jobsksrlps.karnataka.gov.in

ಕೊನೆಯ ದಿನಾಂಕ: ಜುಲೈ 15 2026

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.