ಎರಡನೇ ಮದುವೆ ಪ್ರಶ್ನಿಸಿದ್ದಕ್ಕೆ ಹಲ್ಲೆ: ಶಬರಿಮಲೆಗೆ ಹೋಗಿ ಬಂದು ಪತ್ನಿ ಕೊಂದು ನದಿಗೆ ಬಿಸಾಕಿದ ಪತಿ
22 ವರ್ಷಗಳ ಹಿಂದೆ ಕುಮಾರ ಜೊತೆ ರಾಧಾ ವಿವಾಹವಾಗಿತ್ತು. ಆದರೆ ಪತ್ನಿ ಮೇಲೆ ಕುಮಾರ್ ಗೆ ಅನುಮಾನವಿತ್ತು. ಕಳೆದ 8 ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸಿಸುತ್ತಿದ್ದರು.

ಹಾಸನ: ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು ಬರ್ಬರವಾಗಿ ಪತಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ರಾಧಾ(40ವ) ಮೃತ ದುರ್ದೈವಿಯಾಗಿದ್ದು, ಶವವನ್ನು ಪತಿ ನದಿಗೆ ಎಸೆದಿದ್ದ. ಜನವರಿ 10ರರಂದು ರಾತ್ರಿ ಈ ಘಟನೆ ನಡೆದಿದೆ.
ಆಗಿದ್ದೇನು?
22 ವರ್ಷಗಳ ಹಿಂದೆ ಕುಮಾರ ಜೊತೆ ರಾಧಾ ವಿವಾಹವಾಗಿತ್ತು. ಆದರೆ ಪತ್ನಿ ಮೇಲೆ ಕುಮಾರ್ ಗೆ ಅನುಮಾನವಿತ್ತು. ಕಳೆದ 8 ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸಿಸುತ್ತಿದ್ದರು. ಮೊನ್ನೆ ಜನವರಿ ಮೊದಲ ವಾರ ಕುಮಾರ್ ಶಬರಿಮಲೆಗೆ ತೆರಳಿದ್ದ. ಇರುಮುಡಿ ಕಟ್ಟುವಾಗ ಪತ್ನಿ ಸ್ಥಾನದಲ್ಲಿ ಬೇರೆ ಮಹಿಳೆಯಿಂದ ಪೂಜೆ ನಡೆದಿರುವ ಕಾರಣ ಈ ವಿಚಾರವನ್ನು ಪ್ರಶ್ನಿಸಲು ತಾನು ವಾಸವಿದ್ದ ಹಾಸನದ ಆಡುವಳ್ಳಿಯಿಂದ ಯಡೂರು ಗ್ರಾಮಕ್ಕೆ ರಾಧಾ ಬಂದಿದ್ದರು.
ಇದೇ ವಿಚಾರವಾಗಿ ಜನವರಿ 10ರ ರಾತ್ರಿ 10.30ರ ಸಮಯದಲ್ಲಿ ಕುಮಾರ ಮತ್ತು ರಾಧಾ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ರಾಧಾ ಕಪಾಳಕ್ಕೆ ಕುಮಾರ ಹೊಡೆದಿದ್ದ ಕಾರಣ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.
ಘಟನೆ ಬಳಿಕ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ರಾಧಾ ಶವಕ್ಕೆ ಬಟ್ಟೆ ಸುತ್ತಿ ಅದನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಹಾಸನ ಹೊರವಲಯದ ಕಂದಲಿ ಬಳಿ ಹರಿಯುವ ಯಗಚಿ ನದಿಗೆ ಎಸೆದು ಬಂದಿದ್ದಾನೆ. ಬಳಿಕ ಘಟನೆ ಬಗ್ಗೆ ಪೊಲೀಸರಿಗೆ ನಿನ್ನೆ ಆರೋಪಿ ಮಾಹಿತಿ ನೀಡಿದ್ದಾನೆ, ಇಂದು ಯಗಚಿ ನದಿಯಿಂದ ರಾಧಾ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ.
ಪ್ರಕರಣ ಸಂಬಂಧ ಸದ್ಯ ಆರೋಪಿ ಕುಮಾರ್ನನ್ನು ಆಲೂರು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



