ರಾಜ್ಯ

ಬೆಂಗಳೂರು ಉತ್ತರ ವಿವಿ: ನೂತನ ಕುಲಪತಿಯಾಗಿ ಪ್ರೋ. ಬಿ.ಕೆ ರವಿ ಅಧಿಕಾರ ಸ್ವೀಕಾರ

ಕೋಲಾರ ನಗರದ ಹೊರ ವಲಯದ ಟಮಕ ದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಪ್ರಭಾರ ಕುಲಪತಿಯಾಗಿದ್ದ ಡಾ.ಕುಮುದಾ ಅವರಿಂದ ನಾಲ್ಕನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.

ಬೆಂಗಳೂರು ಉತ್ತರ ವಿವಿ: ನೂತನ ಕುಲಪತಿಯಾಗಿ ಪ್ರೋ. ಬಿ.ಕೆ ರವಿ ಅಧಿಕಾರ ಸ್ವೀಕಾರ
ಪ್ರೋ. ಬಿಕೆ. ರವಿ ಅಧಿಕಾರ ಸ್ವೀಕಾರ
Published On :

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೋ. ಬಿಕೆ. ರವಿ ಇಂದು ಅಧಿಕಾರ ವಹಿಸಿಕೊಂಡರು.

ಕೋಲಾರ ನಗರದ ಹೊರ ವಲಯದ ಟಮಕ ದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಪ್ರಭಾರ ಕುಲಪತಿಯಾಗಿದ್ದ ಡಾ.ಕುಮುದಾ ಅವರಿಂದ ನಾಲ್ಕನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂವಹನದ ವಿಭಾಗದ ಮುಖ್ಯಸ್ಥರಾಗಿದ್ದ ಬಿಕೆ ರವಿ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ, ಕೊಪ್ಪಳ್ಳದ ಕುಲಪತಿ ಕಾರ್ಯನಿರ್ವಹಿಸಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಶಿಷ್ಯ ಬಳಗ ಹೊಂದಿದ್ದಾರೆ. ಬೆಂಗಳೂರು ಉತ್ತರ ಕುಲಪತಿ ಹುದ್ದೆಗಾಗಿ ಫ್ರೋಫಸರ್ ಗಳ‌ ಮಧ್ಯೆ ಸಾಕಷ್ಟು ಪೈಪೋಟಿ ನಡೆದಿತ್ತು. 70ಕ್ಕೂ ಹೆಚ್ಚು ಪ್ರೊಫೆಸರ್ ಗಳು ಕುಲಪತಿ ಹುದ್ದೆಯ ರೇಸ್ ನಲ್ಲಿದ್ದರು. ಅಂತಿಮವಾಗಿ ಪ್ರೊಫೆಸರ್ ಬಿ. ಕೆ. ರವಿ ಅವರನ್ನು ನೂತನ ಕುಲಪತಿಯಾಗಿ ಸರ್ಕಾರ ನೇಮಕ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.