ಬೆಂಗಳೂರು: ಶಾಲೆಯಲ್ಲಿ 'ಸೀಟ್ ಬ್ಲಾಕಿಂಗ್': 26,000 ರೂ ವಂಚನೆ ಆರೋಪ; FIR ದಾಖಲು
ಶಾಲೆಗೆ ಕಟ್ಟಡ ನಿರ್ಮಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ ಎಂಬುದು ಕೆಲ ದಿನಗಳ ಬಳಿಕ ಗೊತ್ತಾಯಿತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು: ಆನೇಕಲ್ ತಾಲೂಕಿನ ಗುಂಜೂರು ರಸ್ತೆಯಲ್ಲಿರುವ ಯುರೋ ಸ್ಕೂಲ್ ಗೆ ಮಗಳನ್ನು ಸೇರಿಸಲು ಯತ್ನಿಸಿದ ಪೋಷಕರು ಸೀಟು ಬ್ಲಾಕಿಂಗ್ ಮಾಡಲು 26,000 ರೂ. ಪಾವತಿಸಿದ ನಂತರ ಶಾಲಾ ಆಡಳಿತ ಮಂಡಳಿಯಿಂದ ವಂಚಿಸಿರುವುದಾಗಿ ಆರೋಪಿಸಿದ್ದಾರೆ.
ಶಾಲೆಗೆ ಕಟ್ಟಡ ನಿರ್ಮಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ ಎಂಬುದು ಕೆಲ ದಿನಗಳ ಬಳಿಕ ಗೊತ್ತಾಯಿತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಪೋಷಕರು ಯುರೋ ಸ್ಕೂಲ್ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕ್ಯಾಂಪಸ್ ನಿರ್ಮಾಣ ಹಂತದಲ್ಲಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿಕೊಂಡು ವಂಚನೆ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.
ಈ ಕುರಿತು TNIE ಜೊತೆಗೆ ಮಾತನಾಡಿದ ದೂರುದಾರ ಮಹಿಳೆ ಪಿ. ಇಂದು, "ಯುರೋ ಸ್ಕೂಲ್ ಪ್ರಸಿದ್ಧ ಬ್ರಾಂಡ್ ಆಗಿರುವುದಾಗಿ ನಂಬಿಕೆ ಇಟ್ಟಿದ್ದೇವು. ಹಾಗಾಗೀ ಅದರ ಹಿನ್ನೆಲೆ ವಿಚಾರಿಸಲಿಲ್ಲ. ನಮ್ಮ ಮಗಳಿಗಾಗಿ ಸೀಟ್ ಬ್ಲಾಕಿಂಗ್ ಮಾಡಿದ್ದೇವು. ನನ್ನ ಮಗು 2 ನೇ ತರಗತಿಯಲ್ಲಿದ್ದು, 2025 ರ ನವೆಂಬರ್ನಲ್ಲಿ 26,000 ರೂ. ಪಾವತಿಸಿದ್ದೇವೆ. ಆದರೆ, ಇದುವರೆಗೆ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ ಎಂದರು.
ಕುಟುಂಬ ಈಗ ಮತ್ತೊಂದು ಶಾಲೆಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಂತದಲ್ಲಿ ಮತ್ತೊಂದು ಶಾಲೆ ಹುಡುಕುವುದು ಕಷ್ಟ. ಏಕೆಂದರೆ ಹೆಚ್ಚಿನ ಸೀಟುಗಳು ಈಗಾಗಲೇ ಭರ್ತಿಯಾಗಿರುತ್ತವೆ" ಎಂದು ಅವರು ಹೇಳಿದರು.
ಈ ಸಂಬಂಧ ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಾದ ಅರುಣಿಕಾ ಸಾಹ್ನಿ ಅವರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ, 1983 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318 ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿಇಒ ಪ್ರತಿಕ್ರಿಯೆಗೆ ಸಿಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



