ರಾಜ್ಯ

ಕಬ್ಬನ್ ಪಾರ್ಕ್ 'No kissing' ಬೋರ್ಡ್'ಗೆ ವಿರೋಧ: ಫಲಕದ ಮುಂದೆಯೇ ಪತಿಗೆ ಮುತ್ತಿಟ್ಟ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್; ಭಾರೀ ಟೀಕೆ

ಕಬ್ಬನ್ ಪಾರ್ಕ್ ಪ್ರೇಮಿಗಳ ಸಾರ್ವಜನಿಕ ಪ್ರೇಮ ಪ್ರದರ್ಶನಕ್ಕೆ (PDA) ಬ್ರೇಕ್ ಹಾಕಲು ಆಡಳಿತ ಮಂಡಳಿ ಹಲವು ಕಡೆಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ.

ಕಬ್ಬನ್ ಪಾರ್ಕ್ 'No kissing' ಬೋರ್ಡ್'ಗೆ ವಿರೋಧ: ಫಲಕದ ಮುಂದೆಯೇ ಪತಿಗೆ ಮುತ್ತಿಟ್ಟ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್; ಭಾರೀ ಟೀಕೆ
ಕಬ್ಬನ್ ಪಾರ್ಕ್
Published On :

ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ 'ಅಸಭ್ಯ ವರ್ತನೆ ನಿಷಿದ್ಧ' ಎಂಬ ಫಲಕಕ್ಕೆ ವಿರೋಧ ವ್ಯಕ್ತಪಡಿಸಿ ಫಲಕದ ಮುಂದೆಯೇ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಪತಿಗೆ ಮುತ್ತಿಟ್ಟಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಬ್ಬನ್ ಪಾರ್ಕ್ ಪ್ರೇಮಿಗಳ ಸಾರ್ವಜನಿಕ ಪ್ರೇಮ ಪ್ರದರ್ಶನಕ್ಕೆ (PDA) ಬ್ರೇಕ್ ಹಾಕಲು ಆಡಳಿತ ಮಂಡಳಿ ಹಲವು ಕಡೆಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ.

ಈ ಫಲಕಕ್ಕೆ ಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಖ್ಯಾತಿ ಶ್ರೀ ಅವರು ವಿರೋಧ ವ್ಯಕ್ತಪಡಿಸಿದ್ದು, ವ್ಯಾಲೆಂಟೈನ್ಸ್ ಡೇ ದಿನದಂದು ನಿಯಮವನ್ನು ಪ್ರಶ್ನಿಸಿ ಫಲಕದ ಮುಂದೆಯೇ ಪತಿಗೆ ಮುತ್ತಿಟ್ಟಿದ್ದಾರೆ.

'ನಾನು ನಿಮಗೆ ಕಬ್ಬನ್ ಪಾರ್ಕ್‌ನಲ್ಲಿರುವ ಒಂದು ಬೋರ್ಡ್ ತೋರಿಸುತ್ತೇನೆ. ಇಲ್ಲಿ ಅಸಭ್ಯ ವರ್ತನೆಗೆ ದಂಡ ವಿಧಿಸಲಾಗುವುದು ಎಂದು ಬರೆಯಲಾಗಿದೆ. ಇಲ್ಲಿ ತೋರಿಸಲಾಗಿರುವ ಚಿತ್ರವೇ ತಪ್ಪು. ಒಬ್ಬ ವ್ಯಕ್ತಿ ತನ್ನ ಪತ್ನಿ ಅಥವಾ ಪ್ರೇಯಸಿಯನ್ನು ಪ್ರೀತಿಸುವುದು ಅಥವಾ ಮುತ್ತಿಡುವುದು ಅಸಭ್ಯ ವರ್ತನೆಯಲ್ಲ. ಬದಲಿಗೆ ಬೇರೆಯವರನ್ನು ಚುಡಾಯಿಸುವುದು (Teasing), ಗಲಾಟೆ ಮಾಡುವುದು ಅಥವಾ ರೇಗಿಸುವುದು ನಿಜವಾದ ಅಸಭ್ಯ ವರ್ತನೆ. ಇದನ್ನು ನಾವು ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಂಡಿದ್ದು, ವೀಡಿಯೋ ಭಾರೀ ವೈರಲ್ ಆಗಿದೆ. ಹಲವರು ಖ್ಯಾತಿ ಶ್ರೀ ಅವರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.