ಕಳ್ಳತನಕ್ಕೆ ಬಂದು ಮನೆಯಲ್ಲಿ ಕಂಬಳಿ ಹೊದ್ದು ಮಲಗಿದ ಖತರ್ನಾಕ್ ಕಳ್ಳ!
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಹಳೇ RTO ಕಚೇರಿ ಬಳಿಯ ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲೆಂದು ಇಬ್ಬರು ಖದೀಮರು ತೆರಳಿದ್ದರು.

ಚಿಕ್ಕಬಳ್ಳಾಪುರ: ಕಳ್ಳತನಕ್ಕೆ ಹೋಗಿದ್ದ ಕಳ್ಳನೋರ್ವ ಮದ್ಯದ ಮತ್ತಿನಲ್ಲಿ ಮನೆಯಲ್ಲೇ ಕಂಬಳಿ ಹೊದ್ದು ಮಲಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಹಳೇ RTO ಕಚೇರಿ ಬಳಿಯ ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲೆಂದು ಇಬ್ಬರು ಖದೀಮರು ತೆರಳಿದ್ದರು. ಮನೆಯ ಮೇಲಿನ ರೇಕ್ ಕತ್ತರಿಸಿ ಒಳಗೆ ನುಗ್ಗಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು ದೋಚಿದ್ದಾರೆ.
ಈ ವೇಳೆ ಓರ್ವ ಕಳ್ಳ ಪರಾರಿಯಾಗಿದ್ದು, ಆದರೆ ಮತ್ತೊಬ್ಬ ಕಳ್ಳ ಮನೆಯಲ್ಲಿ ನಿದ್ದೆಗೆ ಜಾರಿದ್ದಾನೆ. ಇತ್ತ ಮನೆಗೆ ಕಳ್ಳರು ನುಗ್ಗಿರುವ ಅನುಮಾನದಿಂದ ಮಾಲೀಕ ಪ್ರೇಮನಾಥನಿಗೆ ಕರೆ ಮಾಡಿ ನೆರೆ ಮನೆಯವರು ವಿಷಯ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿದ್ದ ಅವರು, ರಾತ್ರೋ ರಾತ್ರಿ ಮನೆಗೆ ಹಿಂದಿರುಗಿದ್ದಾರೆ.
ಮನೆಗೆ ಪ್ರೇಮನಾಥ ವಾಪಸ್ ಆಗಿ ಬಾಗಿಲು ತೆಗೆದು ಒಳ ಪ್ರವೇಶಿಸುತ್ತಲೇ ಅಚ್ಚರಿ ಎದುರಾಗಿದೆ. ಕಳ್ಳತನಕ್ಕೆಂದು ಬಂದಾತ ಮನೆಯಲ್ಲೇ ಮಲಗಿದ್ದನ್ನು ನೋಡಿದ ಅವರು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ವ್ಯಕ್ತಿ ಗೌರಿಬಿದನೂರಿನ ನದಿದಡ ವಾರ್ಡ್ನ ದೇವರಾಜು ಎಂಬುದು ಗೊತ್ತಾಗಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



