ಒಳಗೆ ಸೇರಿದರೆ ಗುಂಡು..: ಕುಡಿದ ಮತ್ತಿನಲ್ಲಿ ಕಾರಿಗೆ ಢಿಕ್ಕಿ, ಪ್ರಶ್ನಿಸಿದ ಚಾಲಕನೊಂದಿಗೆ ಯುವತಿಯರ ರಂಪಾಟ, Video
ಬೆಂಗಳೂರಿನ ಹುಳಿಮಾವು ಬಳಿ ಮದ್ಯದ ಅಮಲಿನಲ್ಲಿ ಯುವತಿಯರು ಸ್ಕೂಟಿಯಿಂದ ಕ್ಯಾಬ್‌ಗೆ ಡಿಕ್ಕಿ ಹೊಡೆದು ರಂಪಾಟ ಮಾಡಿದ್ದಾರೆ.

ಬೆಂಗಳೂರು: ಮದ್ಯದ ಅಮಲಿನಲ್ಲಿ ಕಾರು, ಬೈಕ್ಗಳಿಗೆ ದ್ವಿಚಕ್ರ ವಾಹನ ಗುದ್ದಿ ಯುವತಿಯರು ಕಿರಿಕ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹುಳಿಮಾವು ಬಳಿ ಮದ್ಯದ ಅಮಲಿನಲ್ಲಿ ಯುವತಿಯರು ಸ್ಕೂಟಿಯಿಂದ ಕ್ಯಾಬ್‌ಗೆ ಡಿಕ್ಕಿ ಹೊಡೆದು ರಂಪಾಟ ಮಾಡಿದ್ದಾರೆ. ಚಾಲಕ ಪ್ರಶ್ನಿಸಿದಾಗ ಹಲ್ಲೆ ಮಾಡಲು ಯತ್ನಿಸಿ, ಸ್ಥಳೀಯರ ಜೊತೆ ಕಿರಿಕ್ ಮಾಡಿದ್ದಾರೆ.
ಹೆಲ್ಮೆಟ್ ನಿಂದ ಕಾರು ಚಾಲಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು ಈ ವೇಳೆ ಸಾರ್ವಜನಿಕರ ಮಧ್ಯಪ್ರವೇಶದ ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಘಟನೆ ಸಂಬಂಧ ಇಬ್ಬರು ಯುವತಿಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಲೀಸಾ ಮತ್ತು ಮ್ಯಾಥ್ಯೂ ಎಂಬ ಯುವತಿಯರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಉತ್ತರ ಭಾರತದ ಯುವತಿಯರು
ಕ್ಯಾಬ್ ಡ್ರೈವರ್ ಜೊತೆ ವಾಗ್ವಾದ ನಡೆಸಿ ಆತನ ಮೇಲೆ ಹಲ್ಲೆ ನಡೆಸಲು ಉತ್ತರ ಭಾರತೀಯ ಯುವತಿಯರು ಯತ್ನಿಸಿದ್ದು, ಪ್ರಶ್ನಿಸಿದ ಜನರ ಜೊತೆಗೂ ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದರೂ ಯುವತಿಯರ ಹೈಡ್ರಾಮಾ ಮಾತ್ರ ನಿಂತಿರಲಿಲ್ಲ.
ಆಗಿದ್ದೇನು?
ಸ್ನೇಹಿತರ ಜೊತೆಗೆ ಹೋಟೆಲ್ಗೆ ಬಂದಿದ್ದ ಜೆ.ಪಿ.ನಗರ ಹಾಗೂ ಕೋರಮಂಗಲದ ಇಬ್ಬರು ಯುವತಿಯರು ವಾಪಸ್ ಹೋಗುವಾಗ ಹಿಂದಿನಿಂದ ಕ್ಯಾಬ್‌ಗೆ ಸ್ಕೂಟಿ ಡಿಕ್ಕಿ ಹೊಡೆದಿದ್ದಾರೆ. ಯುವತಿಯರನ್ನು ಕ್ಯಾಬ್ ಚಾಲಕ ಅಹ್ಮದ್ ಪ್ರಶ್ನೆ ಮಾಡಿದ್ದಕ್ಕೆ, ಆತನಿಗೆ ನಿಂದಿಸಿ ಪರಾರಿಯಾಗಲು ಯತ್ನಿಸಿದ್ದು ಈ ವೇಳೆ ಯುವತಿಯರನ್ನು ಸ್ಥಳೀಯರು ತಡೆದಿದ್ದಾರೆ.
ಈ ವೇಳೆ ಕೈಗೆ ಚೈನ್ ಸುತ್ತಿಕೊಂಡು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಸಭ್ಯ ಸನ್ನೆ ತೋರಿಸಿ ನಿಂದನೆ ನಡೆಸಿರುವ ಆರೋಪ ಕೇಳಿಬಂದಿದೆ. ಬಳಿಕ ಇಬ್ಬರು ಯುವತಿಯರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



