ಬೆಂಗಳೂರು ರಸ್ತೆಗಳ ಸ್ವಚ್ಛತೆಗೆ ಹೈಟೆಕ್ ಟಚ್: ಪೊರಕೆಗಳ ಬದಲಿಗೆ ಶುಚಿಗೊಳಿಸುವ ಯಂತ್ರ ಬಳಕೆ; ಪ್ರಾಯೋಗಿಕ ಚಾಲನೆ
ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ‘ಯಾಂತ್ರೀಕೃತ ಸ್ವಚ್ಛತಾ ಯಂತ್ರಗಳ’ ಬಳಕೆಗೆ ಚಾಲನೆ ನೀಡಲಾಗಿದೆ.

ಬೆಂಗಳೂರು: ನಗರದಲ್ಲಿನ ರಸ್ತೆ ಹಾಗೂ ಬೀದಿಗಳ ಸ್ವಚ್ಛತೆಗೆ ಸಂಪ್ರದಾಯಿಕ ಪೊರಕೆಗಳ ಬದಲಿಗೆ ಯಂತ್ರಗಳನ್ನು ಬಳಸುವ ನೂತನ ಪ್ರಯೋಗವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಗುರುವಾರ ಆರಂಭಿಸಿದೆ.
ಸಹಕಾರನಗರದ 1ನೇ ಮುಖ್ಯರಸ್ತೆಯಲ್ಲಿ ಯಾಂತ್ರೀಕೃತ ಪ್ರಾಯೋಗಿಕ ಸ್ವಚ್ಛತಾ ಕಾರ್ಯಕ್ಕೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಗುರುವಾರ ಚಾಲನೆ ನೀಡಿದರು.
ಈ ವೇಳೆ ಸುನೀಲ್ ಕುಮಾರ್ ಅವರು ಸ್ವತಃ ಯಾಂತ್ರಿಕ ಸ್ವಚ್ಛತಾ ಯಂತ್ರಗಳನ್ನು ಚಾಲನೆ ಮಾಡಿ, ಅವುಗಳ ಕಾರ್ಯಕ್ಷಮತೆ, ಸಾಧಕ-ಬಾಧಕಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ‘ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ‘ಯಾಂತ್ರೀಕೃತ ಸ್ವಚ್ಛತಾ ಯಂತ್ರಗಳ’ ಬಳಕೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಕಸ ಗುಡಿಸುವ ಯಂತ್ರಗಳು, ಬ್ಲೋವರ್ ಮಷಿನ್, ರಸ್ತೆ ಕಸವನ್ನು ಶೇಖರಣೆ ಮಾಡಲು ಟ್ರಾಲಿ ಡಸ್ಟ್ ಬಿನ್‌ಗಳನ್ನೂ ಉಪಯೋಗಿಸಲಾಗುತ್ತದೆ. ಸುರಕ್ಷತಾ ದೃಷ್ಟಿಯಿಂದ ಟ್ರಾಫಿಕ್ ಕೋನ್‌ಗಳನ್ನು ಸಹ ಖರೀದಿಸಲಾಗಿದೆ ಎಂದು ತಿಳಿಸಿದರು.
ಪೌರಕಾರ್ಮಿಕರು ಯಂತ್ರಗಳನ್ನು ಸದ್ಬಳಕೆ ಮಾಡಿಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು. ಇದರ ಸಾಧಕ ಬಾಧಕಗಳನ್ನು ಗಮನಿಸಿ ಇನ್ನಷ್ಟು ಯಂತ್ರಗಳನ್ನು ಖರೀದಿಸಲು ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದರು.
ಯಂತ್ರಗಳ ಬಳಕೆಯ ಕುರಿತು ಪೌರಕಾರ್ಮಿಕರಿಗೆ ಮಾರ್ಗದರ್ಶನ ನೀಡಲಾಗಿದ್ದು, ಯಂತ್ರಗಳನ್ನು ಹೇಗೆ ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಈ ಯೋಜನೆಗಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ವಿವಿಧ ಸ್ವಚ್ಛತಾ ಉಪಕರಣಗಳನ್ನು ಖರೀದಿಸಿದೆ. 33 ಕಸ ಗುಡಿಸುವ ಯಂತ್ರಗಳು. 14 ಬ್ಲೋಯರ್‌ಗಳು, 35 ಟ್ರಾಲಿ ಡಸ್ಟ್‌ಬಿನ್‌ಗಳು, 23 ಜೋಡಿ ಟ್ರಾಫಿಕ್ ಕೋನ್‌ಗಳನ್ನು ಖರೀದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



