Rottweiler ನಾಯಿ ದಾಳಿ: ಬರೊಬ್ಬರಿ 8 ಗಂಟೆ ಶಸ್ತ್ರಚಿಕಿತ್ಸೆ, 80 ಹೊಲಿಗೆ... ಕೊನೆಗೂ ಮಾಲೀಕ ಅರೆಸ್ಟ್! Video
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ ಟೀಚರ್ಸ್ ಕಾಲೋನಿಯಲ್ಲಿ ಜನವರಿ 26 ರಂದು ಶಾಲಿನಿ ದುಬೆ (31) ಎಂಬ ಮಹಿಳಾ ಟೆಕ್ಕಿ ಮೇಲೆ ನೆರೆಮನೆಯ ಸಾಕು ನಾಯಿ ಭೀಕರ ದಾಳಿ ಮಾಡಿತ್ತು.

ಬೆಂಗಳೂರು: ನಗರ ನಿವಾಸಿಗಳ ಬೆಚ್ಚಿ ಬೀಳಿಸಿದ್ದ ಮಹಿಳಾ ಟೆಕ್ಕಿ ಮೇಲಿನ ರಾಟ್ವೀಲರ್ ನಾಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ನಾಯಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ ಟೀಚರ್ಸ್ ಕಾಲೋನಿಯಲ್ಲಿ ಜನವರಿ 26 ರಂದು ಶಾಲಿನಿ ದುಬೆ (31) ಎಂಬ ಮಹಿಳಾ ಟೆಕ್ಕಿ ಮೇಲೆ ನೆರೆಮನೆಯ ಸಾಕು ನಾಯಿ ಭೀಕರ ದಾಳಿ ಮಾಡಿತ್ತು.
ಮಹಿಳೆ ವಾಕಿಂಗ್ ಗೆ ಹೋಗಿ ವಾಪಸ್ ಆಗಿದ್ದಾಗ ಮನೆಯ ಗೇಟ್ ಮುಂದೆಯೇ ರಾಟ್ ವೀಲರ್ ನಾಯಿ ಭೀಕರ ದಾಳಿ ಮಾಡಿತ್ತು.
ದಾಳಿಯಲ್ಲಿ ಮಹಿಳೆ ಕುತ್ತಿಗೆ ಸೇರಿದಂತೆ ಮುಖ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
8 ಗಂಟೆ ಶಸ್ತ್ರ ಚಿಕಿತ್ಸೆ
ನಾಯಿ ದಾಳಿಯಿಂದಾಗಿ ಮಹಿಳೆಯ ಮುಖ, ತಲೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಬರೊಬ್ಬರಿ ಎಂಟು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಯ ನಂತರ, ಮಹಿಳೆಯ ಮುಖ ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದು, ಆಕೆಯ ಮುಖ, ಗಂಟಲು ಮತ್ತು ನೆತ್ತಿಯ ಮೇಲೆ 80 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿದೆ ಎಂದು ಅವರ ಪತಿ ಸತ್ಯ ಪ್ರಕಾಶ್ ದುಬೆ ಹೇಳಿದ್ದಾರೆ. ಆಕೆಗೆ ಸುಮಾರು ಎಂಟು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಸುಮಾರು ಏಳು ಸೆಂಟಿಮೀಟರ್ ಅಳತೆಯ ಆಳವಾದ ಗಾಯವೊಂದು ಆಕೆಯ ಉಸಿರಾಟದ ನಾಳಕ್ಕೆ ಅಪಾಯಕಾರಿಯಾಗಿ ಹತ್ತಿರದಲ್ಲಿತ್ತು ಎಂದು ಹೇಳಿದ್ದಾರೆ. ಅಂತೆಯೇ ದಂಪತಿಗೆ 17 ತಿಂಗಳ ಮಗುವಿದ್ದು, ಈ ಘಟನೆಯು ಆಕೆಯನ್ನು ತೀವ್ರ ಆಘಾತಕ್ಕೀಡು ಮಾಡಿದೆ ಎಂದು ದುಬೆ ಹೇಳಿದ್ದಾರೆ.
ವಾಕಿಂಗ್ ನಿಂದ ವಾಪಸ್ ಆಗಿದ್ದ ಪತ್ನಿ
ಈ ಘಟನೆಯನ್ನು ನೆನಪಿಸಿಕೊಂಡ ಅವರ ಪತಿ ದುಬೆ, ಜನವರಿ 26 ರಂದು ಬೆಳಿಗ್ಗೆ 6.50 ರ ಸುಮಾರಿಗೆ ತಮ್ಮ ಪತ್ನಿ ಬೆಳಗಿನ ನಡಿಗೆಯಿಂದ ಹಿಂತಿರುಗುತ್ತಿದ್ದಾಗ ನೆರೆಯವರ ನಾಯಿ ಇದ್ದಕ್ಕಿದ್ದಂತೆ ಆಕೆಯ ಕಡೆಗೆ ಓಡಿ ಬಂದು ದಾಳಿ ಮಾಡಿತು. ಈ ವೇಳೆ ಪತ್ನಿ ಶಾಲಿನಿ ಕೆಳಗೆ ಬಿದ್ದರು.
ಕೂಡಲೇ ನಾಯಿ ಆಕೆಯ ಮೇಲೆ ಕ್ರೂರವಾಗಿ ದಾಳಿ ಮಾಡಿತು. ಈ ವೇಳೆ ಆಕೆಯ ಕುತ್ತಿಗೆ, ಮುಖದ ಬಲಭಾಗ ಮತ್ತು ನೆತ್ತಿಗೆ ತೀವ್ರ ಗಾಯಗಳಾಗಿವೆ. ವೈದ್ಯರ ಪ್ರಕಾರ, ಆಕೆಯ ಮುಖ ಮತ್ತು ದೇಹದ ಮೇಲಿನ ಗಾಯಗಳು ಜೀವನಪರ್ಯಂತ ಉಳಿಯುತ್ತವೆ ಎಂದು ಹೇಳಿದ್ದಾರೆ ಎಂದು ದುಬೆ ಹೇಳಿದರು.
ನಿಯಂತ್ರಿಸಲು ಸಾಧ್ಯವಾಗದಿದ್ದರೆ ರಸ್ತೆಗೆ ತರಬಾರದು
"ಸಾಕುಪ್ರಾಣಿ ಮಾಲೀಕರು ಇಷ್ಟು ದೊಡ್ಡ ನಾಯಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದನ್ನು ಎಂದಿಗೂ ಮುಕ್ತವಾಗಿ ತಿರುಗಾಡಲು ಬಿಡಬಾರದಿತ್ತು. ಸಾಕುಪ್ರಾಣಿ ಮಾಲೀಕರು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು, ವಿಶೇಷವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ನಾಯಿಗಳ ಸುರಕ್ಷತಾ ಮಾಸ್ತ್ ಗಳನ್ನು ಬಳಸಬೇಕು ಎಂದು ಆಗ್ರಹಿಸಿದರು.
ನಾಯಿ ಮಾಲೀಕ ಅರೆಸ್ಟ್
ಪತಿ ದುಬೆ ದೂರಿನ ಮೇರೆಗೆ, ನಾಯಿ ಮಾಲೀಕ ಅಮರೇಶ್ ರೆಡ್ಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 117 (3) (ಸ್ವಯಂಪ್ರೇರಣೆಯಿಂದ ಗಂಭೀರ ಗಾಯ ಉಂಟುಮಾಡುವುದು), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಮತ್ತು 291 (ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯದ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ನಂತರ, ಘಟನೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



